ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿವಿಧ ಇಲಾಖೆ ಅಭಿವೃದ್ದಿ ಕಾಮಗಾರಿಗಳ ಶಂಕು ಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭ.

ಟೀಕೆ ಅಳಿದು ಕಾರ್ಯ ಉಳಿಯುತ್ತವೆ – ಶರಣಗೌಡ ಕಂದಕೂರು.

ಈಗ ಟ್ರೈಲರ್ ಮಾತ್ರ 2026 ರಲ್ಲಿ ಕ್ಷೇತ್ರದ ಅಭಿವೃದ್ದಿ ಸಿನಿಮಾ ತೋರಿಸುವೆ.

ಗುರುಮಠಕಲ್: ನ. 24 ಪಟ್ಟಣದ ಆರೋಗ್ಯ ಸಮುದಾಯ ಕೇಂದ್ರದ ಆವರಣದಲ್ಲಿ ವಿವಿಧ ಇಲಾಖೆ ಅಭಿವೃದ್ದಿ ಶಂಕು ಸ್ಥಾಪನಾ ಹಾಗೂ ಉದ್ಘಾಟನಾ ಸಮಾರಂಭ ಜರುಗಿತು.

ತಾಲೂಕಿನ ಗುರುಮಠಕಲ್ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳ ಅಭಿವೃದ್ಧಿಗಾಗಿ ಸುಮಾರು 112.54 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ನಿರ್ಮಾಣಗೊಳ್ಳಲಿರುವ ಕಾರ್ಯಕ್ರಮಗಳ ಶಂಕುಸ್ಥಾಪನೆಯು ಶಾಸಕ ಶರಣಗೌಡ ಕಂದಕೂರು ಹಾಗೂ ವಿವಿಧ ಇಲಾಖೆಯ ಅನುಷ್ಠಾನ ಅಧಿಕಾರಿಗಳಿಂದ ಜರುಗಿತು.

ಆರೋಗ್ಯ, ಶಿಕ್ಷಣ, ಕೃಷಿ, ನೀರಾವರಿ, ರಸ್ತೆ ಮತ್ತು ಬ್ರಿಡ್ಜ್ ನಿರ್ಮಾಣ, ಸೋಲಾರ್ ದೀಪಗಳು, ಕೆ ಇ ಬಿ ಸಬ್ ಸ್ಟೇಷನ್, ಜನಪರ ಕಲ್ಯಾಣ ಯೋಜನೆಗಳ ಅಭಿವೃದ್ದಿ ಕಾಮಗಾರಿ ಯೋಜನೆಗಳ ಚಾಲನೆ ಇಂದು ನೀಡಲಾಯಿತು.

ಕಾರ್ಯಕ್ರಮದಲ್ಲಿ ಚಾಲನೆಗೊಂಡ ಅಭಿವೃದ್ದಿ ಯೋಜನೆಗಳು ಹಾಗೂ ಫಲಾನುಭವಿಗಳಿಗೆ ಹಂಚಿಕೆ ಮಾಡಲಾದ ಕಿಟ್ ವಿವರ :

  1. ಸುಮಾರು 17.60 ಕಾಳಬೆಳಗುಂದಿ 110 ಕೆವಿ ಉಪ ಕೇಂದ್ರ ನಿರ್ಮಾಣ.
  2. ಸುಮಾರು 26.60 ಕೋಟಿಗಳಲ್ಲಿ ಸೋಲಾರ್ ದೀಪಗಳ ಅಳವಡಿಕೆ.
  3. ಸುಮಾರು 15.80 ಕೋಟಿಗಳಲ್ಲಿ 4 ನೀರಾವರಿ ಕಾಮಗಾರಿ ಯೋಜನೆಗೆ ಚಾಲನೆ.
  4. ಕೊಳಗೇರಿ ನಿಗಮದಿಂದ 200 ಮನೆಗಳ ಹಂಚಿಕೆ.
  5. ಸುಮಾರು 15.80 ಕೋಟಿ ವೆಚ್ಚದಲ್ಲಿ ಆರೋಗ್ಯ ವಲಯದಲ್ಲಿ ಹತ್ತಿಕುಣಿ, ಗುರುಮಠಕಲ್ ಸೇರಿದಂತೆ 24/7 ಹಾಗೂ 30 ರಿಂದ 50 ಹಾಸಿಗೆಗಳಿಗೆ ಮೇಲ್ದರ್ಜೆಗೆ ಏರಿಕೆ.
  6. ತಾಲೂಕಿನ 17 ರಸ್ತೆ ಮತ್ತು ಬ್ರಿಡ್ಜ್ ನಿರ್ಮಾಣಕ್ಕೆ ಚಾಲನೆ.
  7. ಕಾರ್ಮಿಕ ಇಲಾಖೆಯ ಅಸಂಘಟಿತ ಕಾರ್ಮಿಕರಿಗೆ 326 ಕಿಟ್ ವಿತರಣೆ.
  8. ತಾಲೂಕ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ವಿಕಲಚೇತನ 10 ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ.
  9. ಗಂಗಾಕಲ್ಯಾಣ ಯೋಜನೆಯಡಿ ಫಲಾನುಭವಿಗಳಿಗೆ ಪಂಪ್ ಸೆಟ್ ವಿತರಣೆ.
  10. ಪಟ್ಟಣದ ನೂತನ ರೈತ ಸಂಪರ್ಕ ಕೇಂದ್ರ ಉದ್ಘಾಟನೆ.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಶಾಸಕರು ರಾಜ್ಯದ ಆರ್ಥಿಕ ಸಂಕಷ್ಟದ ನಡುವೆ ನನ್ನ ಕ್ಷೇತ್ರದ ಅಭಿವೃದ್ದಿ ಕಾರ್ಯಗಳಿಗೆ ಕೆಲ ಮಂತ್ರಿಗಳ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರಕ್ಕೆ ಧನ್ಯವಾದ ತಿಳಿಸಿದರು.

ಸಮಗ್ರ ತಾಲೂಕಿನ ಅಭಿವೃದ್ದಿ ನನ್ನ ಗುರಿಯಾಗಿದ್ದು, ನಾನು ಮಾಡಬೇಕಾದ ಕೆಲಸದ ಕಡೆ ಹೆಚ್ಚಿನ ಗಮನ ಹರಿಸುವೆ ವಿರೋಧಿಗಳ ಟೀಕೆಗಳಿಗೆ ಎಲ್ಲದಕ್ಕೂ ಉತ್ತರಕೊಡುವ ಅವಶ್ಯಕತೆ ನನಗೆ ಇಲ್ಲ ಎಂದು ಹೇಳಿದರು.

ಮುಂಬರುವ ದಿನಗಳಲ್ಲಿ ಪಟ್ಟಣದಲ್ಲಿ ಮಹಾತ್ಮ ಬಸವೇಶ್ವರ ಮೂರ್ತಿ ಹಾಗೂ ಅಂಬಿಗರ ಚೌಡಯ್ಯ ಮೂರ್ತಿಗಳ ಅನಾವರಣ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಹೇಳಿದರು.

ಕ್ಷೇತ್ರದ ಕ್ಷಿಪ್ರ ಬೆಳವಣಿಗೆ ನೋಡಲು ನನ್ನ ತಂದೆ ಈ ಸಮಯದಲ್ಲಿ ಇರಬೇಕಾಗಿತ್ತು, ಕುಮಾರ ಸ್ವಾಮಿಗಳ ಅವಧಿಯಲ್ಲಿ ಶಾಸಕರು ಹಾಗೂ ಕೊಳಗೇರಿ ನಿಗಮದ ಅಧ್ಯಕ್ಷರಾಗಿದ್ದ ದಿ.ನಾಗನಗೌಡ ಕಂದಕೂರು ಅವರು 200 ಮನೆಗಳನ್ನು ನನ್ನ ಅವಧಿಯಲ್ಲಿ ಮನೆ ಹಂಚಿಕೆಯಾಗುತ್ತಿರುವದು ಸಂತಸ ತಂದಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯತ್, ತಹಸೀಲ್, ಪುರಸಭೆ, ನಿರ್ಮಿತಿ ಕೇಂದ್ರ, ಲೋಕೋಪಯೋಗಿ, ಪೊಲೀಸ್ ಇಲಾಖೆ, ಕೃಷಿ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಅಗ್ನಿಶಾಮಕ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ಪಟ್ಟಣದ ವಿವಿಧ ಗ್ರಾಮದ ಸಾರ್ವಜನಿಕರು ಭಾಗವಹಿಸಿದ್ದರು.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!