ಬೆಳಗಾವಿ :ಅಥಣಿಯ ಪ್ರತಿಷ್ಠಿತ ಆರ್.ಎಸ್.ಪಿ. ಸಮೂಹ ಸಂಸ್ಥೆಗಳ ಮುಖ್ಯಸ್ಥರು, ಸಮಾಜ ಸೇವಕರಾದ ಶ್ರೀ ರವಿ ಅಣ್ಣಾ ಪೂಜಾರಿ ಅವರ ಧರ್ಮ ಪತ್ನಿ ಹಾಗೂ ಆರ್.ಎಸ್.ಪಿ. ಸಮೂಹ ಸಂಸ್ಥೆ ಅಥಣಿ ಇದರ ಸಹ ಸಂಸ್ಥಾಪಕರಾದ ಶ್ರೀಮತಿ ಪ್ರಿಯಾ ರವಿ ಪೂಜಾರಿ ಅವರು ದಿ. 23-11-2025ರಂದು ಅಥಣಿ ನಗರದ ಗಚ್ಚಿನಮಠದಲ್ಲಿ ವಿಜಯ ಕರ್ನಾಟಕ ದಿನಪತ್ರಿಕೆ ಹಾಗೂ ಫ್ರೀಡಂ ಹೆಲ್ತಿ ಕುಕ್ಕಿಂಗ್ ಆಯಿಲ್ ವತಿಯಿಂದ ಆಯೋಜಿಸಿದ್ದ ವಿ.ಕ. ಕರುನಾಡ ಸ್ವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಹಿಳೆಯರಿಗಾಗಿ ಆಯೋಜಿಸಿರುವ ಅಡುಗೆ ತಯಾರಿಸುವ ಈ ವಿನೂತನ ಸ್ಪರ್ಧಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಎಲ್ಲ ಮಹಿಳೆಯರಿಗೆ ಶುಭ ಹಾರೈಸುವುದಾಗಿ ತಿಳಿಸಿದರು. ಮಹಿಳೆಯರಿಗಾಗಿ ಆಯೋಜಿಸಿದ್ದ ಈ ಅಡುಗೆ ತಯಾರಿಸುವ ಕಾರ್ಯಕ್ರಮದಲ್ಲಿ ಮಹಿಳೆಯರು ವಿಶೇಷ ತರಹದ ವಿವಿಧ ಅಡುಗೆ ಖಾದ್ಯಗಳನ್ನು ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಇದೇ ಕಾರ್ಯಕ್ರಮದ ಸಂದರ್ಭದಲ್ಲಿ ಅಥಣಿ ಗಚ್ಚಿಮಠದ ಶ್ರೀ ಶಿವಬಸವ ಮಹಾಸ್ವಾಮೀಜಿಯವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಮತ್ತು ಅತಿಥಿಗಳಾಗಿ ಅಥಣಿಯ ಭರವಸೆಯ ಬೆಳಕು ಫೌಂಡೇಶನ್ ಅಧ್ಯಕ್ಷರಾದ ಶ್ರೀಮತಿ ರೂಪಾ ಕಾಂಬಳೆ ಸೇರಿದಂತೆ ಹಲವು ಗಣ್ಯಮಾನ್ಯರು, ಮಹಿಳೆಯರು ಪಾಲ್ಗೊಂಡಿದ್ದರು.
ವರದಿ. ವಿಠ್ಠಲ ಖೋಕಾಟೆ




















