ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅನಧಿಕೃತವಾಗಿ ನಡೆಸುತ್ತಿರುವ ಕೋಚಿಂಗ್ ಸೆಂಟರ್‌ಗಳನ್ನು ಬಂದ್ ಮಾಡಲು ಮಾಂತೇಶ ಗೌರಕರ್‌ ಒತ್ತಾಯ.

ಬೀದರ್/ಬಸವಕಲ್ಯಾಣ : ತಾಲೂಕಿನಾದ್ಯಂತ ಹಾಗೂ ನಗರದ ಪ್ರದೇಶದಲ್ಲಿ ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕೆಲ ಶಿಕ್ಷಕರು ತಮ್ಮದೇ ಆದ ಸ್ವಂತ ಕೋಚಿಂಗ್ ಸೆಂಟರ್ ಗಳನ್ನು ತೆರೆದು ನಮ್ಮ ಸರಕಾರಿ ಶಾಲೆಯ ವಿದ್ಯಾರ್ಥಿಗಳಾಗಲಿ ಅಥವಾ ಖಾಸಗಿ ಶಾಲೆಯ ವಿದ್ಯಾರ್ಥಿಗಳಾಗಲಿ ಅವರ ನೋಂದಣಿ ಅಥವಾ ದಾಖಲಾತಿಗಳು ತಮ್ಮ ಕೊಚಿಂಗ್ ಸೆಂಟರ್ ಗಳಲ್ಲಿ ನೊಂದಣಿ ಮಾಡಿ, ಅಂತಹ ವಿದ್ಯಾರ್ಥಿಗಳ ಹತ್ತಿರ ಯಾವುದೇ ರಿಯಾಯತಿ ಶುಲ್ಕ ಇಲ್ಲದೇ ಅವರ ಬಳಿ ಮನಸಿಗೆ ಬಂದಂತೆ ಹಣ ವಸೂಲಿ ಮಾಡುತ್ತಿದ್ದಾರೆ, ಅದರಲ್ಲಿ ಸಾಕಷ್ಟು ಬಡ ಕುಟುಂಬದ ಮನೆಯಿಂದ ಬಂದಂತಹ ವಿದ್ಯಾರ್ಥಿಗಳಿದ್ದು, ಅವರ ತಂದೆ ತಾಯಿ ಅವರ ಸ್ವಂತ ಕುಟುಂಬವನ್ನೇ ನಡೆಸುವುದು ಕಷ್ಟಕರವಾಗಿದೆ ಅಂತಹದರಲ್ಲಿ ಇವರು ಖಾಸಗಿ ಕೋಚಿಂಗ್ ಸೆಂಟರ್ ತೆರೆದು ಹಾಡಹಗಲೇ ಹಣ ವಸೂಲಿ ಮಾಡುವ ಕಾಯಕ ನಡೆಸಿದ್ದಾರೆ. ಇದರಿಂದ ನಮ್ಮ ಸರಕಾರಿ ಮತ್ತು ಖಾಸಗಿ ಕನ್ನಡ ಶಾಲೆಗಳು ಮುಚ್ಚುವ ಪ್ರಸಂಗ ಉಂಟಾಗುತ್ತಿದೆ.
ಆದ ಕಾರಣ ಬಸವಕಲ್ಯಾಣ ತಾಲೂಕಿನಾದ್ಯಂತ ಮತ್ತು ನಗರ ಪ್ರದೇಶಗಳಲ್ಲಿನ ಎಲ್ಲಾ ಅನಧಿಕೃತ ಕೋಚಿಂಗ್ ಸೆಂಟರ್‌ಗಳನ್ನು 8 ದಿನಗಳ ಒಳಗಾಗಿ ಮುಚ್ಚುವ ಆದೇಶ ಹೊರಡಿಸಿ ಸಂಪೂರ್ಣ ಬಂದ್ ಮಾಡಿಸಬೇಕೆಂದು ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿಗಳು ಬಸವಕಲ್ಯಾಣ ರವರಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಸಂಘಟನೆಯವರು ಮನವಿ ಪತ್ರ ಸಲ್ಲಿಸಿದರು.
ಒಂದು ವೇಳೆ ಈ ಮೇಲಿನ ಕಾಲಾವಕಾಶದಲ್ಲಿ ಬಂದ್ ಮಾಡಿಲ್ಲವಾದಲ್ಲಿ ಎಲ್ಲಾ ಸಂಘಟನೆಯವರು ರಸ್ತೆ ಗಿಳಿದು ಕ್ಷೇತ್ರಶಿಕ್ಷಣಾಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆಂದು ಎಚ್ಚರಿಕೆ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ತಾಲೂಕು ಅಧ್ಯಕ್ಷ ಮಾಂತೇಶ ಗೌರಕರ್‌ ಹಾಗೂ ಉಪಾಧ್ಯಕ್ಷ ಸುಧೀರ ಕಾಂಬಳೆ, ಕಾರ್ಯದರ್ಶಿ ಧಮ್ಮಾನಂದ ಗೋಡಬೋಲೆ, ಸಾಗರ ರಾಯಗೋಳ ಸೇರಿದಂತೆ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ : ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!