ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸತತ ಪ್ರಯತ್ನವೇ ಸಾಧನೆಯ ರಹಸ್ಯ :ಪಿ ಎಸ್ ಐ ರೇವಣ್ಣ ಗುರಿಕಾರ

ಕೊಪ್ಪಳ : ಸತತ ಪ್ರಯತ್ನವೇ ಸಾಧನೆಯ ರಹಸ್ಯ ಎಂದು ಕೊಪ್ಪಳ ಗ್ರಾಮೀಣ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರೇವಣ್ಣ ಗುರಿಕಾರ ಅವರು ಹೇಳಿದರು.

ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಕಾಲೇಜಿನ ಐಕ್ಯೂಎಸಿ, ಉದ್ಯೋಗ ಕೋಶ ಹಾಗೂ ಕೊಪ್ಪಳದ ಸ್ಫೂರ್ತಿ ಸ್ಟಡಿ ಸೆಂಟರ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಸ್ಪರ್ಧಾತ್ಮಕ ಪರೀಕ್ಷೆ ಉಚಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ಬಡತನವನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು. ಸಮಾಜ ನಿಮ್ಮ ಸ್ಥಾನಮಾನವನ್ನು ನಿರ್ದರಿಸುತ್ತದೆ. ವಿದ್ಯಾರ್ಥಿಗಳು ಸರಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಪದವಿ ಓದುವಾಗಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಆಗಿ. ಮನುಷ್ಯರಿಗೆ ಖುಷಿ ಆದಾಗ ಅಹಂಕಾರ ಹೆಚ್ಚಾಗುತ್ತದ.ಕಠಿಣ ಅಭ್ಯಾಸವು ನಿಮ್ಮ ಯಶಸ್ಸು ನ್ನು ನಿರ್ಧಾರಿಸುತ್ತದೆ. ಗುರಿ ದೊಡ್ಡದಿರಲಿ, ಅದಕ್ಕೆ ಸಮರ್ಪಣೆ ಮನೋಭಾವನೆ, ನಿರಂತರ ಪ್ರಯತ್ನ ಇರಲಿ. ಪುಸ್ತಕಗಳನ್ನು ಪದೇ ಪದೇ ಓದಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಅವರು ಮಾತನಾಡುತ್ತ ವ್ಯಕ್ತಿ ಸಾಧನೆ ಮೇಲೆ ಸ್ಥಾನ ಮಾನ ನಿರ್ಧಾರವಾಗುತ್ತದೆ, ವಿದ್ಯಾರ್ಥಿಗಳು ಪ್ರತಿ ದಿನ ಪತ್ರಿಕೆಗಳು ಓದಬೇಕು, ವಾರ್ತೆಗಳನ್ನು ಕೇಳಬೇಕು, ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳು ಸುಲಭವಾಗುತ್ತದೆ. ಉದ್ಯೋಗ ಪಡೆಯಬೇಕಾದರೆ ಪದವಿ ಜತೆ ಮಾರ್ಗದರ್ಶನ ಪಡೆಯಿರಿ ಎಂದು ತಿಳಿಸಿದರು.

ಕಾಲೇಜಿನ ಉದ್ಯೋಗ ಕೋಶದ ಸಂಚಾಲಕರಾದ ಡಾ. ಪ್ರದೀಪ್ ಕುಮಾರ ಅವರು ಪ್ರಾಸ್ತವಿಕವಾಗಿ ಮಾತನಾಡುತ್ತಾ ಇಂದು ದುಡ್ಡಿಗಿಂತ ವಿದ್ಯೆಗೆ ಹೆಚ್ಚು ಬೆಲೆ ಇದೆ. ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚು ಹೆಚ್ಚು ಕ್ರಿಯಾಶೀಲದಿಂದ ವಿದ್ಯಾಭ್ಯಾಸ ಮಾಡಬೇಕು. ನಿಷ್ಠೆ , ಕಠಿಣ ಪರಿಶ್ರಮ ಹಾಗೂ ನಿರಂತರ ಪ್ರಯತ್ನ ಮಾಡಿದರೆ ಯಶಸ್ಸು ಖಂಡಿತ ಸಿಗುತ್ತದೆ ಎಂದು ತಿಳಿಸಿದರು.

ಕೊಪ್ಪಳದ ಸ್ಫೂರ್ತಿ ಸ್ಟಡಿ ಅಕಾಡೆಮಿ ಗೌರವ ಮಾರ್ಗದರ್ಶಕ ಹೊನ್ನಿಕೇರಿ ಮಲ್ಲಪ್ಪ ಮಾತನಾಡುತ್ತಾ ವಿದ್ಯಾರ್ಥಿಗಳು ನಿಮ್ಮ ಭವಿಷ್ಯದ ಜತೆ ದೇಶದ ಭವಿಷ್ಯವನ್ನು ಕೂಡಾ ಕಟ್ಟಬೇಕು. ನೀವು ಗುರಿ, ದೃಷ್ಟಕೋನ ಮತ್ತು ಉದ್ದೇಶ ಇಟ್ಟುಕೊಂಡು ಅಧ್ಯಯನ ಮಾಡಬೇಕು. ಪೂರ್ವ ತಯಾರಿ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬೇಕು. ಸ್ವಯಂ ಗುರಿ ಅರಿವು ಇರಬೇಕು. ನಂಬಿಕೆ, ಆತ್ಮ ವಿಶ್ವಾಸ, ಭದ್ಧತೆ ಇರಬೇಕು. ಸಮರ್ಪಣೆ ಮನೋಭಾವನೆ ಇರಬೇಕು. ದೃಢ ನಿರ್ಧಾರ ಇರಬೇಕು. ದೌರ್ಬಲ್ಯಗಳನ್ನು ಅರಿತು ಕೊಳ್ಳಬೇಕು. ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಶಿಕ್ಷಕ ಶ್ರೀಕಾಂತ್ ಬೆಟಗೇರಿ ಅವರು ಮಾತನಾಡುತ್ತಾ ವಿದ್ಯಾರ್ಥಿಗಳು ತಂದೆ ತಾಯಿ ಮತ್ತು ಶಿಕ್ಷಕರ ಪ್ರೇರಣೆ ಪಡೆಯಬೇಕು. ನಮ್ಮ ಪ್ರೇರಣೆ ಯಾವಾಗಲೂ ನಮ್ಮ ಸುತ್ತ ಮುತ್ತಲಿನವರು ಆಗಿರಬೇಕು
ಏಕೆಂದರೆ ಅವರೇ ನಮ್ಮ ಜೀವನದ ಪರಿಣಾಮ ಬಿರುರಿತ್ತಾರೆ. ಸಮಯ ಎಲ್ಲರನ್ನು ನಿಲ್ಲಿಸುತ್ತದೆ. ಆದರೆ ಅದು ಯಾವತ್ತೂ ನಿಲ್ಲುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಇರಬೇಕು ಎಂದು ತಿಳಿಸಿದರು.

ಕೊಪ್ಪಳದ ಮಹಿಳಾ ಮತ್ತು ಮಕ್ಕಳು ಇಲಾಖೆಯ ಯಲ್ಲಾಲಿಂಗ ಅವರು ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿ ಸಾಧನೆ ಮಾಡುವ ಶಕ್ತಿ ಇದೆ. ಅದನ್ನು ಹೊರಗೆ ಹಾಕಬೇಕು. ಸೂಕ್ತ ಮಾರ್ಗದರ್ಶನ ಪಡೆದು ಗುರಿಯನ್ನು ತಲುಪಿ ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಐಕ್ಯೂ ಎಸಿ ಸಂಚಾಲಕರಾದ ಡಾ. ಅಶೋಕ ಕುಮಾರ್, ಉಪನ್ಯಾಸಕ ಡಾ. ನರಸಿಂಹ, ಸ್ಫೂರ್ತಿ ಅಕಾಡೆಮಿಯ ನಿರ್ದೇಶಕ ಹನುಮೇಶ್ ಯಾದವ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಾಹಿನಿ ನಿರೂಪಿಸಿದರು. ಮೂಕಮ್ಮ ಪ್ರಾರ್ಥನೆ ಗೀತೆ ಹಾಡಿದರು.ಡಾ. ಪ್ರದೀಪ್ ಕುಮಾರ ಸ್ವಾಗತಿಸಿದರು. ಡಾ. ನರಸಿಂಹ ವಂದಿಸಿದರು.

  • ಕರುನಾಡ ಕಂದ ಪತ್ರಿಕೆ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!