
ಕೊಪ್ಪಳ : ಸಾಮಾಜಿಕ ಕಾರ್ಯಕರ್ತರಾದ ಪ್ರತಿಭಾ ಅವರು ಎಲ್ಲಾ ಮಹಿಳೆಯರು ಸುರಕ್ಷಾತೀತವಾಗಿ ಜೀವನ ಮಾಡಬೇಕು. ಎಲ್ಲರಿಗೂ ಸಾಮಾಜಿಕ ಜವಾಬ್ದಾರಿ ಇರಬೇಕು ಎಂದು ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರದಂದು ಕಾಲೇಜಿನ ಮಹಿಳಾ ಸಬಲೀಕರಣ ಘಟಕ ಹಾಗೂ ಸ್ಪಂದನ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ಮುಕ್ತ ಭಾರತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳ ಮತ್ತು ಮಹಿಳೆಯರ ಘನತೆಯನ್ನು ಕಾಪಾಡಬೇಕು. ಇಂದು ಕುಟುಂಬಗಳು ಅಭದ್ರವಾಗಗಿವೆ. ನಮ್ಮ ಸಮಾಜ ಉತ್ತಮವಾಗಿರಬೇಕು. ಆಗ ಮಾತ್ರ ಮಹಿಳೆಯರು ಮತ್ತು ಮಕ್ಕಳು ಸುರಕ್ಷಿವಾಗಿರುತ್ತಾರೆ. ನಮ್ಮ ದೇಹವನ್ನು ಸುರಕ್ಷಾವಾಗಿ ಇಟ್ಟುಕೊಳ್ಳಬೇಕು. ಕುಟುಂಬವನ್ನು ಮುನ್ನಡೆಸಬಲ್ಲ ಸಾಮರ್ಥ್ಯವಿದೆ. ಕುಟುಂಬದಲ್ಲಿ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಇರಿ. ಕಷ್ಟ ಸುಖ, ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕೊಪ್ಪಳ ಜಿಲ್ಲಾ ಮಕ್ಕಳು ರಕ್ಷಣೆ ಘಟಕದ ರಕ್ಷಣಾ ಅಧಿಕಾರಿ ಪ್ರಶಾಂತ ರೆಡ್ಡಿ ಮಾತನಾಡುತ್ತಾ ಬಾಲ್ಯ ವಿವಾಹಗಳನ್ನು ತಡೆಗಟ್ಟುವ ಜವಾಬ್ದಾರಿ ಎಲ್ಲರ ಮೇಲಿದೆ. ಕೊಪ್ಪಳದಲ್ಲಿ ಶೇ. 27 ರಷ್ಟು ಬಾಲ್ಯ ವಿವಾಹಗಳು ಆಗಿವೆ. ಕೊಪ್ಪಳದಲ್ಲಿ 53 ಮಕ್ಕಳನ್ನು ದತ್ತು ಪ್ರಕ್ರಿಯೆಗೆ ಒಳಪಡಿಸಲಾಗಿದೆ ಎಂದು ವಿವರಿಸಿದರು.
ಕಾಲೇಜಿನ ಉಪನ್ಯಾಸಕರಾದ ನಿಂಗಜ್ಜ ಸೋಂಪುರ್ ಅವರು ಮಾತನಾಡುತ್ತಾ ಮಹಿಳೆಯಾರು ನಾಲ್ಕು ಗೋಡೆಗಳ ನಡುವೆ ಇರಬಾರದು. ಮೊಬೈಲ್ ನ್ನು ಹೆಚ್ಚು ಬಳಸಬಾರದು ಎಂದು ತಿಳಿಸಿದರು.
ಸ್ಪಂದನ ಸಂಸ್ಥೆಯ ಯೋಜನಾ ಸಂಯೋಜಕರಾದ ಶಂಕರ್ ಸುರಳ್ಳಿ ಅವರು ಪ್ರಾಸ್ತವಿಕವಾಗಿ ಮಾತನಾಡುತ್ತಾ ಮಕ್ಕಳಿಗೆ ಕಾನೂನುಗಳ ಸಹಾಯ ಮತ್ತು ನ್ಯಾಯ ಸಿಗಬೇಕು. ಬಾಲಕಾರ್ಮಿಕರ ಪದ್ಧತಿ ಹೋಗಲಾಡಿಸಬೇಕು. ಮಕ್ಕಳನ್ನು ರಕ್ಷಣೆ ಮಾಡುಬೇಕು. ಕೊಪ್ಪಳದಲ್ಲಿ 26 ಮಕ್ಕಳನ್ನು ರಕ್ಷಣೆ ಮಾಡಿದ್ದೇವೆ ಎಂದು ಹೇಳಿದರು.
ಕಾಲೇಜಿನ ಪ್ರಭಾರಿ ಪ್ರಾಚಾರ್ಯರಾದ ಶ್ರೀ ಮತಿ ನಾಗರತ್ನ ತಮ್ಮಿನಾಳ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಉಪನ್ಯಾಸಕರಾದ ಡಾ. ಅಶೋಕ ಕುಮಾರ, ಡಾ. ನರಸಿಂಹ, ಉಮೇಶ್ ಕಾತರಕಿ, ನಿಂಗಜ್ಜ ಸೋಂಪುರ್ ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಶ್ವಿನಿ ಬಾಲ್ಯ ವಿವಾಹ ನಿಷೇದ ಕುರಿತು ಪ್ರತಿಜ್ಞೆ ಭೋದಿಸಿದರು.
ಕಾರ್ಯಕ್ರಮವನ್ನು ಡಾ. ನರಸಿಂಹ ನಿರೂಪಿಸಿ ಸ್ವಾಗತಿಸಿದರು, ಸುಮಿತ್ರಾ ಪ್ರಾರ್ಥನೆ ಗೀತೆ ಹಾಡಿದರು. ಶಂಕರ್ ಸುರಳ್ಳಿ ವಂದಿಸಿದರು.
- ಕರುನಾಡ ಕಂದ ಪತ್ರಿಕೆ




















