
ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ರೈತ ಸಂಘ ತಾಲೂಕ ಘಟಕದ ವತಿಯಿಂದ ಕೃಷಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಗೌತಮ ಪಾಟೀಲ್, ರಾಜ್ಯ ಪ್ರಶಸ್ತಿ ಪುರಸ್ಕೃತ ಎಲ್ ಬಿ ಶೇಕ್ ಮಾಸ್ಟರ್, ಮಾಧ್ಯಮ ಕ್ಷೇತ್ರದಲ್ಲಿ ಶ್ರೀ ನಾಗರಾಜ ಗದ್ದಿ ಅವರಿಗೆ ಅಭಿನಂದನಾ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ಈ ಮೂರು ಜನ ಸಾಧನೆಗೈದ ಸಾಧಕರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಮನುಷ್ಯನಲ್ಲಿ ಒಬ್ಬೊಬ್ಬರಲ್ಲಿ ಒಂದೊಂದು ಆಂತರಿಕ ಶಕ್ತಿ ಆಡಗಿರುತ್ತದೆ. ಅವರು ಆದ ಕ್ಷೇತ್ರದಲ್ಲಿ ಸಾಧನೆ ಮಾಡಿರುತ್ತಾರೆ. ಕೃಷಿ, ನಾಟಕ, ಪತ್ರಿಕಾ ರಂಗದಲ್ಲಿ ಸಮಾಜಮುಖಿ ರಂಗದಲ್ಲಿ ಸಾಧನೆ ಮಾಡಿರುತ್ತಾರೆಂದು ಶ್ರೀ. ಷ. ಬ್ರ. ಡಾ. ಶಾಂತ ಸೋಮೇಶ್ವರ ಶಿವಾಚಾರ್ಯ ಮಂಗಲಗಿ ಮಾತನಾಡಿದರು.
ಭರತೂರಿನ ಶ್ರೀಗಳು, ಸೂಗೂರಿನ ಶ್ರೀಗಳು, ನಾಗರಾಜ್ ಗದ್ದಿ, .ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಎಲ್ ಬಿ ಶೇಕ್ ಅವರು ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಪೂಜ್ಯಶ್ರೀ ಮ, ನಿ, ಪ್ರ, ಚಿಕ್ಕ ಗುರು ನಂಜೇಶ್ವರ ಮಹಾಸ್ವಾಮಿಗಳು ವಿರಕ್ತಮಠ ಭರತನೂರು. ಪೂಜ್ಯಶ್ರೀ ಷ, ಬ್ರ, ಡಾ,ಶಾಂತ ಸೋಮೇಶ್ವರ ಶಿವಾಚಾರ್ಯರು ಮಂಗಲಗಿ ಹಾಗೂ ತೆಂಗಳಿ, ಪೂಜ್ಯಶ್ರೀ ಷ, ಬ್ರ,ಡಾ, ಚನ್ನ ರುದ್ರಮುನಿ ಶಿವಾಚಾರ್ಯರು ಸೂಗೂರು ಮಠ. ಶ್ರೀ ರೇವಣಸಿದ್ದ ಶರಣರು ಗೌರಿಗುಡ್ಡ ರಟಕಲ.ರೈತ ಸಂಘ ತಾಲೂಕ ಅಧ್ಯಕ್ಷ ವೀರಣ್ಣ ಗಂಗಾಣಿ. ಸನ್ಮಾನ ಸಮಾರಂಭದ ಅಧ್ಯಕ್ಷರಾದ ಶಿವರಾಜ ಪಾಟೀಲ ಗೋಣಗಿ.ಕಾಳಗಿ ತಹಶೀಲ್ದಾರರಾದ ಪೃಥ್ವಿರಾಜ ಪಾಟೀಲ, ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿಯಾದ ಬಸಲಿಂಗಪ್ಪ ಡಿಗ್ಗಿ. ಪಿಎಸ್ಐ ತಿಮ್ಮಯ್ಯ.ರಾಜಶೇಖರ್ ಗುಡದ್ದ.ಚಂದ್ರಶೇಖರ ವನಮಲಿ. ಶಿವಕುಮಾರ ಸುಲೇಪೇಟ.ಕಾಳಪ್ಪ ಕರೆಮನೂರ್.ಶೇಖರ ಪಾಟೀಲ. ರೇವಣಸಿದ್ಧ ಮುಖರಂಭ, ಶ್ರೀ ಮಲ್ಲಿಕಾರ್ಜುನ ಪಾಟಿಲ್ ಪ್ರಗತಿಪರ ರೈತ ಹಲ್ಚೆರ
ಶ್ರೀ ಶ್ರೀಕಾಂತ ತಾಂಡೂರ ನಾಟ್ಯ ಸಂಘ ಮಾಲೀಕರು ಕೋಡ್ಲಿ , ಶ್ರೀ ರೇವಣಸಿದ್ಧ ಚೇಂಗಟಿ ನಾಟ್ಯ ಸಂಘ ಮಾಲೀಕರು ಮುಕುರಂಬಿ, ಶ್ರೀ ರೇವಣಸಿದ್ಧ ಧರಿ ಅಲ್ಲಾಪುರ ಪ್ರಗತಿಪರ ರೈತ, ಶ್ರೀ ಶೇಖರ ಮಾನಶೆಟ್ಟಿ ಕಾಳಗಿ ಕಲಾವಿದರು, ಶ್ರೀ ಸಂತೋಷ್ ಖನ್ನ ತಾಡ್ಪಳ್ಳಿ ನಾಟ್ಯ ಸಂಘ ಮಾಲೀಕರು, ಶ್ರೀ ಮಲ್ಲು ಹೂಗಾರ ಮುಕುರಂಬ ಪ್ರಗತಿಪರ ರೈತರು,
ಶ್ರೀ ಗೋರಕ ರಾಥೋಡ ಬೆಡಸೂರ ನಾಟ್ಯ ಸಂಘ ಮಾಲೀಕರು,ಶ್ರೀ ಬಸವರಾಜ ಹೂಲಸುಗೂಡ ಕಲಾವಿದರು,
ಶ್ರೀ ಸಾಗರ ಹುಡುಗಿ ಹಲಚೆರಾ ಯುವ ಮುಖಂಡರು,
ಶ್ರೀ ಮೋನಪ್ಪ ಬಡಿಗೇರ ಮಂಗಲಗಿ ಹೋರಾಟಗಾರರು, ಶ್ರೀ ಶರಣಪ್ಪ ಪೂಜಾರಿ ವಚ್ಚಾ ಪ್ರಗತಿಪರ ರೈತ, ಶ್ರೀ ಕರಣ ರಾಜಪುರ ಹೋರಾಟಗಾರರು, ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವರದಿ ಚಂದ್ರಶೇಖರ್ ಆರ್. ಪಾಟೀಲ್




















