ರಾತ್ರಿ 2 ಗಂಟೆಯಾದರೂ ಪೊಲೀಸರು ದೂರು ದಾಖಲಿಸಿಕೊಳ್ಳಲಿಲ್ಲ.
ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ನಾಗರಮಡವು ಗ್ರಾಮದ ರೇಖಾ ಜಗ್ಗಿನ ಎಂಬುವರು ಗಂಡನ ಮನೆಯ ಕಿರುಕುಳ ತಾಳಲಾಗದೆ ಜೊತೆಗೆ ಜೀವ ಭಯ ಬೆದರಿಕೆ ಇರುವ ಕಾರಣದಿಂದಾಗಿ ನಿನ್ನೆ ರಾತ್ರಿ ದಿನಾಂಕ 01/12/2025 ರಾತ್ರಿ 8 ಗಂಟೆಗೆ ಲಕ್ಷ್ಮೇಶ್ವರ ಸಬ್ ಇನ್ಸ್ಪೆಕ್ಟರ್ ಠಾಣೆಗೆ ದೂರು ದಾಖಲಿಸಲು ಹೋಗಿರುತ್ತಾರೆ. ಮಧ್ಯರಾತ್ರಿ 2 ಗಂಟೆಯವರೆಗೆ ಕಾಯಿಸಿ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಯಾವ ಕಾರಣದಿಂದ ಅಂತ ತಿಳಿದು ಬಂದಿಲ್ಲ, ರಾಜಕೀಯ ಒತ್ತಡದಿಂದಲೋ ಅಥವಾ ಹಣಬಲದಿಂದ ಪ್ರಕರಣ ದೂರು ದಾಖಲು ಆಗಲಿಲ್ಲ ಕಾರಣವೇನು ಗೊತ್ತಿಲ್ಲ ಮಧ್ಯರಾತ್ರಿ ಎರಡು ಗಂಟೆವರೆಗೂ ಸತಾಯಿಸಿದ್ದಾರೆ, ಕಾದು ನೋಡಬೇಕಾಗಿದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯವರು ಮಹಿಳೆಗೆ ಯಾವ ರೀತಿ ನ್ಯಾಯ ಕೊಡಿಸುತ್ತಾರೆ ಅಂತ ಹಾಗೆ ಜೊತೆಗೆ ಕಾನೂನೂ ಪಾಲಿಸದ ಪೊಲೀಸ್ ಅಧಿಕಾರಿ ಮೇಲೆ ಯಾವ ರೀತಿ ಶಿಸ್ತು ಕ್ರಮ ಆಗುತ್ತೆ ಅನ್ನೋದನ್ನು ಕಾಯ್ದು ತಿಳಿದುಕೊಳ್ಳಬೇಕಾಗಿದೆ.
ವರದಿಗಾರರು ರಾಖೇಶ ಬೂದಿಹಾಳ



















