ಬೀದರ್ : ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವ ಸನ್ಮಾನ್ಯ ಶ್ರೀ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಐದು ವರ್ಷ ಮುಂದುವರಿಸಬೇಕು ಒಂದು ವೇಳೆ ಸಿ. ಎಂ. ಸ್ಥಾನದಿಂದ ಅವರನ್ನು ಕೆಳಗೆ ಇಳಿಸಿದರೆ ರಾಜ್ಯಾದ್ಯಂತ ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಕಲ್ಯಾಣ ಕರ್ನಾಟಕ ಗೊಂಡ ಒಕ್ಕೂಟದ ಸಂಸ್ಥಾಪಕ ಕಾರ್ಯದರ್ಶಿಗಳಾದ ಶ್ರೀ ಬಾಲಾಜಿ ಜಬಾಡೆ ಅವರು ಎಚ್ಚರಿಕೆ ನೀಡಿದ್ದಾರೆ.
2023 ರ ಚುನಾವಣೆಯಲ್ಲಿ ಗೊಂಡ ಕುರುಬ ಹಾಗೂ ಅಹಿಂದ ಸಮಾಜದ 80 ರಷ್ಟು ಮತದಾನವು ಕಾಂಗ್ರೆಸ್ ಪಕ್ಷಕ್ಕೆ ನೀಡಿದ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ ಅದಕ್ಕೆ ಸನ್ಮಾನ್ಯ ಶ್ರೀ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ ಅವರನ್ನು ಮುಖ್ಯಮಂತ್ರಿ ಮಾಡುವಾಗ ಹೈಕಮಾಂಡ್ ಸಾರ್ವಜನಿಕವಾಗಿ 30 ತಿಂಗಳು ಅವಧಿಗೆ ಎಂದು ಎಲ್ಲಿಯೂ ಹೇಳಿಲ್ಲ ಮತ್ತು ಸಿದ್ದರಾಮಯ್ಯನವರು ಯಶಸ್ವಿಯಾಗಿ ಸರ್ಕಾರ ನಡೆಸಿಕೊಂಡು ಹೋಗುತ್ತಿದ್ದಾರೆ ಅವರ ಕಾರ್ಯಕ್ರಮಗಳಿಂದ ಜನ ಖುಷಿಯಾಗಿದ್ದಾರೆ ಅವರನ್ನು ಮುಂದುವರಿಸಬೇಕು ಒಂದು ವೇಳೆ ಕೆಳಗಿಳಿಸಿದರೆ ಬೀದಿಗಿಳಿದು ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಕಲ್ಯಾಣ ಕರ್ನಾಟಕ ಗೊಂಡ ಒಕ್ಕೂಟ ಆಗ್ರಹಿಸುತ್ತದೆ
ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ



















