ಸರಾಗವಾಗಿ ಓಡಾಡಲು ಅನುವು ಮಾಡಿಕೊಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿ.
ಕಲ್ಬುರ್ಗಿ ಜಿಲ್ಲೆಯ ಸಣ್ಣೂರ ಗೇಟ್ : ಸಿಹಿ ಬೆಳೆದು ಕಹಿ ಉಣ್ಣುವ ಕಬ್ಬು ಬೆಳೆಗಾರರು, ಕಲಬುರ್ಗಿ ಜಿಲ್ಲೆ ತೊಗರಿ ನಾಡು ಎಂಬ ಕೀರ್ತಿಗೆ ಪಾತ್ರವಾದಂತೆ ಇತ್ತೀಚೆಗೆ ಕಬ್ಬು ಬೆಳೆಗಾರರು ಕಬ್ಬಿನ ಮೇಲೆ ಅವಲಂಬಿತರಾಗಿದ್ದಾರೆ. ಅತಿವೃಷ್ಟಿಯಿಂದಾಗಿ ಲಾಭ ತರಬೇಕಿದ್ದ ತೊಗರಿ, ಹೆಸರು, ಉದ್ದು, ಸೋಯಾ, ಹತ್ತಿ, ಬೆಳೆಗಳು ಹಾನಿಯಾಗಿವೆ. ಉಳಿದ ಒಂದೇ ಬೆಳೆ ಕಬ್ಬಿನ ಇಳುವರಿಯಲ್ಲಿ, ತೂಕದಲ್ಲಿ ಮೋಸ ಮತ್ತು ಸೂಕ್ತವಾದ ಬೆಂಂಬಲ ಬೆಲೆ ಇಲ್ಲದೆ ರೈತರು ಕಂಗಾಲಾಗುವಂತೆ ಮಾಡಿದೆ, ಇಂತಹ ಸಂಕಷ್ಟದ ಸಮಯದಲ್ಲಿ ಕಬ್ಬು ಬೆಳೆಗಾರರಿಗೆ ಒಂದಲ್ಲಾ ಒಂದು ಕಡೆ ಅನ್ಯಾಯ ಮಾಡುತ್ತಲೆ ಬರುತ್ತಿದ್ದಾರೆ ಕಬ್ಬು ಬೆಳೆಗಾರರ ಮೇಲಿನ ಶೋಷಣೆ ತಡೆಗಟ್ಟಲು ಕಬ್ಬು ಬೆಳೆಗಾರರು ಆಗ್ರಹಿಸಿದ್ದಾರೆ. ಸಣ್ಣೂರು ಟೋಲ್ ನಾಕಾದವರು ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಾಣಿಕೆ ಮಾಡುತ್ತಿರುವ ರೈತರ ಹತ್ತಿರ ಹಣ ವಸೂಲಿ ಮಾಡಿ ರೈತರಿಗೆ ಅನ್ಯಾಯ ಮಾಡುತ್ತಿರುವ ಟೋಲ್ ನಾಕಾ ಗಳು ರೈತ ವಿರೋಧಿಗಳಾಗಿವೆ ನಿಜವಾಗಲೂ ರೈತರ ಕಬ್ಬು ಸಾಗಾಣಿಕೆ ಮಾಡುತ್ತಿರುವ ಲಾರಿಗಳು, ಟ್ಯಾಕ್ಟರ್ ಗಳು ರೈತರ ಹತ್ತಿರ ಹಣ ವಸೂಲಿ ಮಾಡುವುದನ್ನು ಕೈ ಬಿಟ್ಟು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಾಣಿಕೆ ಮಾಡುತ್ತಿರುವ ಗಾಡಿಗಳಿಗೆ ವಿನಾಯ್ತಿ ನೀಡಲು ಒತ್ತಾಯ ಕಬ್ಬು ಬೆಳೆಗಾರರು ವಿರೋಧಿ ನೀತಿ ರೈತ ಸಂಘ ಉಗ್ರವಾಗಿ ಖಂಡಿಸುತ್ತದೆ ರಸ್ತೆಗಳು ಹದಗೆಟ್ಟು ಹೋಗಿವೆ ಟೋಲ್ ಫ್ಲಾಜಾ ಇದರ ಅವಧಿ ಎಲ್ಲಿಯವರೆಗೆ ಇದೆ ಎಂಬುದು ಯೋಚಿಸಲಿ ಮತ್ತು ಫಾಸ್ಟ್ ಟ್ಯಾಗ್ ಇರುವ ವಾಹನಗಳು 10 ಸೆಕೆಂಡಗಳಲ್ಲಿ ಟೋಲ್ ದಾಟಬೇಕು ಇಲ್ಲಿ ಬಹಳ ಸಮಯ ಹಿಡಿಯುತ್ತಿದೆ ಇದರ ಮೇಲೆ ಕಾನೂನಿನ ಪ್ರಕಾರ ಕ್ರಮ ಜರುಗಬೇಕು ಹಾಗೂ ಸಣ್ಣೂರು ಬಳಿ ಇರುವ ಟೋಲ್ ಪ್ಲಾಜಾ ಮೇಲೆ ತನಿಖೆ ನಡೆಸಿ ಕಾನೂನಿನ ಪ್ರಕಾರ ಶಿಸ್ತಿನ ಕ್ರಮ ಜರುಗಿಸಬೆಕು ಒಂದು ವೇಳೆ ನಿರ್ಲಕ್ಷ್ಯ ಧೋರಣೆ ತೋರಿದಲ್ಲಿ ಮುಂದಿನ ದಿನಗಳಲ್ಲಿ ಟೋಲ್ ಪ್ಲಾಜಾ ಬಂದ್ ಮಾಡಲು ಉಗ್ರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿ ರೈತ ಸಂಘ ಒತ್ತಾಯಿಸುತ್ತದೆ.
ರಜೆ ದಿನಗಳಲ್ಲಿ ಟೋಲ್ ದರ ಹೆಚ್ಚಳದಿಂದ ಜನರ ಬದುಕು ಮತ್ತಷ್ಟು ದುಸ್ಥರವಾಗಿದೆ
ದೇಶದಾದ್ಯಂತ ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್ ಪ್ರೆಸ್ ವೇಗಳಲ್ಲಿ ಟೋಲ್ ದರವನ್ನು ಶೇಕಡಾ 4ರಿಂದ 5ರಷ್ಟು ಹೆಚ್ಚಳ ಮಾಡಿದ್ದು, ಮಂಗಳವಾರದಿಂದಲೇ ಜಾರಿಯಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ನೀತಿಯು ಜನಸಾಮಾನ್ಯರ ಬದುಕನ್ನು ಮತ್ತಷ್ಟು ದುಸ್ಥರಗೊಳಿಸಿದೆ ಎಂಬುದು ರೈತ ಸಂಘದ ಅಭಿಪ್ರಾಯವಾಗಿದೆ.
ದೇಶದ ಕೋಟ್ಯಂತರ ಜನರ ರಜಾಕಾಲದ ಈ ದಿನಗಳಲ್ಲಿ ಪ್ರವಾಸ, ಮದುವೆ ಹಬ್ಬ ಇತ್ಯಾದಿಗಳಲ್ಲಿ ಕುಟುಂಬದ ಸದಸ್ಯರು ಬಂಧುಬಳಗದ ಜತೆ ದೂರ ದೂರ ಪ್ರದೇಶಗಳಿಗೆ ವಾಹನಗಳಲ್ಲಿ ಸಂಚರಿಸುವ ಅನಿವಾರ್ಯತೆಯಲ್ಲಿ ಇದ್ದಾರೆ. ಇಂತಹ ಅವಕಾಶವನ್ನೇ ಬಳಸಿ ಕೇಂದ್ರ ಸರ್ಕಾರ ಜನರ ಬದುಕಿನ ಮೇಲೆ ಮತ್ತಷ್ಟು ಹೊರೆ ಹೊರಿಸಲು ಹೊರಟಿರುವುದು ಅನ್ಯಾಯದ ಪರಮಾವಧಿಯಾಗಿದೆ ಎಂದು ರೈತ ಸಂಘ ಕಳವಳ ವ್ಯಕ್ತಪಡಿಸಿದೆ.
ಈಗಾಗಲೇ ನಿರಂತರವಾಗಿ ಏರುತ್ತಿರುವ ಬೆಲೆಗಳಿಂದಾಗಿ ಮತ್ತು ಮೋದಿ ಸರ್ಕಾರದ ಶ್ರೀಮಂತ ಪರ ನೀತಿಗಳಿಂದಾಗಿ ಈಗಾಗಲೇ ಜನಸಾಮಾನ್ಯರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಜನರ ಬದುಕಿನ ಪ್ರಶ್ನೆ ಬಂದಾಗಲೆಲ್ಲಾ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಸದಾ ಒಂದೇ ನಾಣ್ಯದ ಎರಡು ಮುಖಗಳು ಎನ್ನುವ ಮಾತುಗಳು ಈ ಡೀಸೆಲ್ ಹಾಗೂ ಟೋಲ್ ದರ ಏರಿಕೆ ವಿಷಯದಲ್ಲಿ ಸಾಭೀತಾಗಿವೆ. ಇಂತಹ ನೀತಿಗಳ ವಿರುದ್ಧ ರೈತ ಸಂಘ ಕಲಬುರಗಿ ಜಿಲ್ಲಾ ಸಮಿತಿ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದೆ. ಹೋರಾಟ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳಾದ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿ
ಬಸವರಾಜ, ಅಧಿಕಾರಿ ಮುನಾವರ, ಜಿವಿ ಟೋಲ್ ನಾಕಾ ಕಂಪನಿ ವ್ಯವಸ್ಥಾಪಕರು ಗೋಪಿ ಹೋರಾಟಕ್ಕೆ ಮಣಿದು ಕಬ್ಬು ತುಂಬಿದ ಲಾರಿಗಳನ್ನು ಬಿಟ್ಟು ಕಳಿಸಿದರು. ಹೋರಾಟಗಾರರಿಗೆ ಸರ್ಕಲ್ ಇನ್ಸ್ ಪೆಕ್ಟರ್ ಪ್ರಶಾಂತ ತಿಗಡಿ ಬಂದೋಬಸ್ತ್ ನೀಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ
ಶರಣಬಸಪ್ಪ ಮಮಶೆಟ್ಟಿ ಜಿಲ್ಲಾ ಅಧ್ಯಕ್ಷರು ರೈತ ಸಂಘ ಕಲಬುರಗಿ, ವೀರಣ್ಣ ಗಂಗಾಣಿ ಅಧ್ಯಕ್ಷರು ಕಾಳಗಿ ತಾಲೂಕು, ಶರಣಪ್ಪ ಪೂಜಾರಿ ರೈತರು, ರಮೇಶ ಹೆಬ್ಬಾಳ ರೈತ ಮುಖಂಡರು, ದಿಲೀಪ ನಾಗುರೆ ರೈತ ಮುಖಂಡರು, ಅನಿಲ್ ಗುತ್ತೇದಾರ ರೈತ ಮುಖಂಡರು, ರೈತ ರಮೇಶ ಕೊರ್ವಾರ ಸೇರಿದಂತೆ ಇನ್ನೂ ಅನೇಕರು ಇದ್ದರು.
ವರದಿ ಎಸ್ ವಿ ಗಂಗಾಣಿ.




















