ಬೈಲಹೊಂಗಲ: ಧಾರ್ಮಿಕ ಸಂಸ್ಕಾರದ ಅರಿವು ಜಾತ್ರೆಗಳಲ್ಲಿ ನಡೆಯುವ ಧಾರ್ಮಿಕ ಆಚರಣೆಯಿಂದ ಮನುಷ್ಯನಿಗೆ ಲಭಿಸುತ್ತದೆ ಪ್ರತಿಯೊಬ್ಬರು ಜಾತಿಮತ ಎನ್ನದೆ ಮಾನವೀಯ ಮೌಲ್ಯಗಳನ್ನು ಬಿತ್ತರಿಸುವ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕೆಂದು ವೇದಮೂರ್ತಿ ಪುರವಂತ ಪಂಚಪ್ಪ ಬನ್ನೂರ ಹೇಳಿದರು.
ಸಮೀಪದ ಹೊಸೂರ ಗ್ರಾಮದಲ್ಲಿ ಗುರುವಾರ ಜರುಗಿದ ಭದ್ರಕಾಳಿ ಸಮೇತ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಜನರು ಯಾಂತ್ರಿಕ ಬದುಕಿಗೆ ಸಿಕ್ಕು ಹಣ ಮತ್ತು ಅಧಿಕಾರ ಗಳಿಸಲು ದುಂಬಾಲು ಬಿದ್ದಿದ್ದು ಮಾನವೀಯ ಮೌಲ್ಯಗಳ ಬೆಳವಣಿಗೆಗೆ ಬೇಕಾದ ಆಚಾರ ವಿಚಾರಗಳೆ ಮಾಯವಾಗುತ್ತಿವೆ ಇದರಿಂದ ಪ್ರತಿಯೊಬ್ಬರಲ್ಲಿ ಹಣ ಇದೆಯೇ ಹೊರತು ನೆಮ್ಮದಿ ಇಲ್ಲ. ಹಣದಿಂದ ಶ್ರೀಮಂತಿಕೆ ತೋರಿಸಬಹುದು ಆದರೆ ಹೃದಯ ಶ್ರೀಮಂತಿಕೆ ಸಾಧ್ಯವಿಲ್ಲ. ಮನುಷ್ಯನಲ್ಲಿ ಸಾತ್ವಿಕ ಗುಣಗಳಿಂದ ಸಂಸ್ಕಾರಯುತ ನೆಮ್ಮದಿ ಬದುಕನ್ನು ಸಮಾಜದಲ್ಲಿ ನಡೆಸುವ ವ್ಯಕ್ತಿಯೆ ನಿಜವಾದ ಶ್ರೀಮಂತವಾಗಿದ್ದಾನೆ ಎಂದರು.
ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಮತ್ತು ಸೋಮಲಿಂಗಪ್ಪ ಕೋಟಗಿ ಮಾತನಾಡಿ, ಜಾತ್ರೆಗಳ ಮೂಲಕ ಗ್ರಾಮದಲ್ಲಿ ಧಾರ್ಮಿಕ ವಿಚಾರಗಳನ್ನು ಬಿತ್ತುವದರೊಂದಿಗೆ ಯುವಕರಲ್ಲಿ ಧಾರ್ಮಿಕ ಸಂಸ್ಕಾರ ಮೂಡಿಸುವ ಇಂತಹ ಜಾತ್ರೆಗಳು ಗ್ರಾಮದ ಹೆಮ್ಮೆ ಎಂದರು.
ಬೆಳಿಗ್ಗೆ ವೀರಭದ್ರೇಶ್ವರ ಹಾಗೂ ಭದ್ರಕಾಳಿ ಮೂರ್ತಿಗಳಿವೆ ಅಭಿಷೇಕ ಹಾಗೂ ವಿಶೇಷ ಪುಷ್ಪಾಲಂಕಾರ ಪೂಜೆ ನೆರವೇರಿಸಲಾಗಿತ್ತು, ದೇವರ ಬೆಳ್ಳಿ ಮೂರ್ತಿಯ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾಧ್ಯಮೇಳದೊಂದಿಗೆ ಗ್ರಾಮದ ಪುರವಂತರು, ಸುಮಂಗಲಿಯರ ಆರತಿಯೊಂದಿಗೆ ಸಂಚರಿಸಿತು. ಪುರವಂತರು ವೀರಭದ್ರೇಶ್ವರ ಓಡಪು ಹೇಳಿ ಅಗ್ನಿಕುಂಡ ಹಾಯ್ದರು. ಜಾತ್ರೆಗೆ ಅಗಮಿಸಿದ ಸಾವಿರಾರು ಭಕ್ತರಿಗೆ ಪ್ರಸಾದ ಸೇವೆ ಮಾಡಲಾಗಿತ್ತು ಜಾತ್ರೆಯಲ್ಲಿ ಸೇವೆಗೈದ ಮಡಿವಾಳಪ್ಪ ಬೆಟಗೆರಿ, ಸೋಮಲಿಂಗಪ್ಪ ಗಣಾಚಾರಿ, ಈಶ್ವರ ಬುಡಶೆಟ್ಟಿ, ಮಲ್ಲಿಕಾರ್ಜುನ ವಕ್ಕುಂದ, ದೀಲಾವಾರ ದೂಪದಾಳ, ಮಹಾಂತೇಶ ಜಮನೂರ ಅವರನ್ನು ಸತ್ಕರಿಸಲಾಯಿತು. ಮಡಿವಾಳಯ್ಯ ಗಣಾಚಾರಿ, ಈರಮ್ಮ ಹಿರೇಮಠ, ಅಡವೆಯ್ಯ ಕಲ್ಯಾಣಮಠ ಈರಪ್ಪ ಕೊರಿಕೊಪ್ಪ ಪೂಜಾ ಕಾರ್ಯಗಳನ್ನು ನೇರವೆರಿಸಿದರು.
ಮಲ್ಲಪ್ಪ ಬೋಳೆತ್ತಿನ, ನಾಗರಾಜ ಬುಡಶೆಟ್ಟಿ, ಮೂಗಬಸಪ್ಪ ಇಂಗಳಗಿ, ಸಿ.ವಾಯ.ಬೂದಿಹಾಳ, ಗಾಣಿಗೇರ, ಎಮ್.ವಿ.ಮತ್ತಿಕೊಪ್ಪ, ಈರಣ್ಣ ಬುಡಶೆಟ್ಟಿ, ಈರಣ್ಣ ಚಿಕ್ಕೊಪ್ಪ, ಮಲ್ಲಿಕಾರ್ಜುನ ಹುರಕಡ್ಲಿ, ಮಹಾಂತೇಶ ಕೊರಿಕೊಪ್ಪ, ಈರಪ್ಪ ಗೌರಿ, ಮಂಜು ಹೊಸಮನಿ, ಈರಣ್ಣ ಚಳಕೊಪ್ಪ, ಪ್ರಶಾಂತ ಮಾಕಿ, ಬಸವರಾಜ ವಿವೇಕಿ, ಅಡಿವೆಪ್ಪ ಹೂಗಾರ, ಸೋಮಪ್ಪ ತಂಬಾಕ, ಸೋಮು ಏಣಗಿ, ರಾಜು ಪೇಂಟೆದ, ಮಹೇಶ ಆಲದಕಟ್ಟಿ, ಉಮೇಶ ಚುಕ್ಕೊಪ್ಪ, ಮಹೇಶ ಹಮ್ಮಣ್ಣವರ, ಸಂತೋಷ ಪೆಂಟೆದ, ಪ್ರಜ್ವಲ ಅಸುಂಡಿ, ವಿನಾಯಕ ಪೇಂಟೆದ, ಮಹಾಂತೇಶ ಬಾರಿಗಿಡದ, ಗುರು ಕಂಬಾರ, ನಿಂಗಪ್ಪ ಕುಸಲಾಪೂರ, ಪಂಚಪ್ಪ ಬೆಣ್ಣಿ, ದುಂಡಪ್ಪ ಸಿದ್ದನಗೌಡರ, ಬೈಲಪ್ಪ ಹುಂಬಿ, ಪ್ರಕಾಶ ಹುರಕಡ್ಲಿ, ಮಂಜುನಾಥ ಸಂಗೊಳ್ಳಿ ಸೇರಿದಂತೆ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಇದ್ದರು.
ವರದಿ ಮಂಜು .ಎಂ. ಚಿಕ್ಕಣ್ಣವರ



















