ವಿಕಲಚೇತನರ ಸಮಸ್ಯೆಗಳ ಅನಾವರಣಗೊಳಿಸಿದ ತಾಲೂಕ ಅರ್ ಪಿ ಡಿ ಅಧ್ಯಕ್ಷ ಸಿದ್ದನಗೌಡ ಪಾಟೀಲ.
ಹಂತ ಹಂತವಾಗಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅಂಬರೀಷ ಪಾಟೀಲ.
ಯಾದಗಿರಿ/ಗುರುಮಠಕಲ್: ಡಿ. 09 ತಾಲೂಕು ಮಟ್ಟದ ವಿಕಲಚೇತನರ ಕುಂದುಕೊರತೆ ಸಭೆಯು ಇಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅಂಬರೀಷ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯಲ್ಲಿ ಗ್ರಾಮ ಪಂಚಾಯತ್ ಹಾಗೂ ಪುರಸಭೆ ಕಾರ್ಯಾಲಯದ ವಿಕಲಚೇತನರ ವಿಶೇಷ 5% ಅನುದಾನ ಬಳಕೆ ಕುರಿತು, ಬಸ್ ನಿಲ್ದಾಣ ಸೇರಿದಂತೆ ಹಲವು ಸರಕಾರಿ ಹಾಗೂ ಖಾಸಗಿ ಕಾರ್ಯಾಲಯಗಳಲ್ಲಿ ವೀಲ್ ಚೇರ್ ವ್ಯವಸ್ಥೆ, ವಿಕಲಚೇತನ ಸ್ನೇಹಿ ಶೌಚಾಲಯ, ವಿಕಲಚೇತನ ಭವನ, ಯು ಡಿ ಆಯ್ ಡಿ ಕ್ಯಾಂಪ್, ಗುರುಮಠಕಲ್ ಪುನರ್ವಸತಿ ಕಾರ್ಯಕರ್ತ ನೇಮಕಾತಿ, ವಿಷಯಗಳ ಕುರಿತು ಅರ್ ಪಿ ಡಿ ಟಾಸ್ಕ್ ಫೋರ್ಸ್ ಅಧ್ಯಕ್ಷ ಸಿದ್ದನ ಗೌಡ ಅಧಿಕಾರಿಗಳ ಮುಂದೆ ಸಮಸ್ಯೆಗಳ ಅನಾವರಣ ಮಾಡಿದರು.
ಉತ್ತರವಾಗಿ ತಾಲೂಕಿನಲ್ಲಿ ಈಗಾಗಲೇ 3513 ವಿಕಲಚೇತನರನ್ನು ಗುರುತಿಸಿದ್ದು, ಇನ್ನೂ ಹಲವರಿಗೆ ಯುಡಿಐಡಿ ಕಾರ್ಡ್ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಕುರಿತು ಆಯಾ ಇಲಾಖೆಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಹಂತ ಹಂತವಾಗಿ ಇತ್ಯರ್ಥ ಮಾಡುವದಾಗಿ ತಾಲೂಕ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಅಂಬರೀಷ ಪಾಟೀಲ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ ಕಾರ್ಯಾಲಯದ ಅಧಿಕಾರಿ, ಶಿಶು ಅಭಿವೃದ್ಧಿ, ಸಮಾಜ ಕಲ್ಯಾಣ, ಶಿಕ್ಷಣ ಇಲಾಖೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು, ಎ.ಪಿ.ಡಿ.ಸಂಸ್ಥೆಯ ಕು. ಸಂಪ್ರೀತ, ನಾಗಪ್ಪ ಅವಟಿ, ವಿರುಪಾಕ್ಷ ಮಾಲಿಪಾಟೀಲ, ಶಿಲ್ಪ ಎಸ್, ವ್ಯವಸ್ಥಾಪಕ ಹಾಗೂ ನಿರ್ವಾಹಕರು, ಎಮ್.ಆರ್.ಡಬ್ಲ್ಯೂ, ಆರ್.ಪಿ.ಡಿ.ಟಾಸ್ಕ್‌ಪೋರ್ಸ ಸದಸ್ಯರು ಹಾಗೂ ವಿವಿಧ ಗ್ರಾಮ ಹಾಗೂ ಪಟ್ಟಣದ ವಿಕಲಚೇತನರು ಹಾಜರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















