ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹಿರಿಯ ನಾಗರಿಕರಿಗಾಗಿ ಉಚಿತ ಆರೋಗ್ಯ ಶಿಬಿರ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಾಟಾಪುರ ಗ್ರಾಮದಲ್ಲಿ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಷ್ಯ ಇಲಾಖೆ ಕಲಿಕೆ ಟಾಟಾ ಟ್ರಸ್ಟ್ ಸಹಯೋಗದಲ್ಲಿ ಗ್ರಾಮದ ಹಿರಿಯ ನಾಗರಿಕರಿಗೆ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಈ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ಶ್ರೀಮತಿ ಮಹಾಂತಮ್ಮ ಜಗ್ಗಲ್, ಕಾರ್ಯಕ್ರಮ ಉದ್ಘಾಟಕರಾಗಿ ಶ್ರೀ ಪ್ರಶಾಂತ್ ಹಿರೇಮಠ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಾಟಾಪುರ , ಮುಖ್ಯ ಅತಿಥಿಗಳಾಗಿ ಶ್ರೀಮತಿ ದೀಪ ಹುಲ್ಸೂರ್ ಆಯುಷ್ ಆರೋಗ್ಯ ಅಧಿಕಾರಿಗಳು ಕುಷ್ಟಗಿ , ಶ್ರೀ ಚನ್ನಬಸಪ್ಪ ಹನುಮನ ಐಸಿ ಟಿಸಿ ಸಮಲೋಚಕರು ಕುಷ್ಟಗಿ,
ಎ ಎಸ್ ಅಂತರ್ಗಲ್ಲಿ ಲ್ಯಾಬ್ ಟೆಕ್ನಿಷಿಯನ್ ಕುಷ್ಟಗಿ,
ಅಜಯ್ ಕುಮಾರ್ ದೇವೂರ್ ಸಿ ಎಚ್ ಓ ಕಾಟಾಪುರ, ಶ್ರೀಮತಿ ರಾಧಾ ರಾಥೋಡ್ ಪಿ ಎಚ್ ಓ.
ಶ್ರೀ ಸಿದ್ದಲಿಂಗ ರೆಡ್ಡಿ ಕಲಿಕೆ ಟಾಟಾ ಟ್ರಸ್ಟ್ ಸಂಯೋಜಕರು, ಗ್ರಾಮ ಪಂಚಾಯಿತಿ ಸದಸ್ಯರು ಶ್ರೀ ಹನುಮಂತ ತೂಗುದಿಲ್ಲಿ, ಶ್ರೀಮತಿ ಈರಮ್ಮ ಭಜಂತ್ರಿ,
ಶ್ರೀ ಸುಧಾಕರ್ ಫಾರ್ಮಸಿ ಅಧಿಕಾರಿಗಳು ಕುಷ್ಟಗಿ,
ಕುಮಾರಿ ಸಾಕಮ್ಮ ಗ್ರಾಮ ಪಂಚಾಯತಿ ಗ್ರಂಥ ಪಾಲಕರು, ಶ್ರೀಮತಿ ವಿಜಯಲಕ್ಷ್ಮಿ ಕಂಬಾರ್ , ಕುಮಾರಿ ಅಶ್ವಿನಿ ಬಂಗಿ , ಶ್ರೀ ಮುತ್ತಪ್ಪ ಗುಡಿಮನಿ ಸಿಬ್ಬಂದಿ ವರ್ಗದವರು ಸೇರಿದಂತೆ ಆಶಾ ಕಾರ್ಯಕರ್ತೆ ಯರಾದ ಶ್ರೀಮತಿ ನೀಲ ಕುಂಬಾರ್, ವಿಜಯಲಕ್ಷ್ಮಿ ಹಡಪದ ಹಾಗೂ ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಕಾರ್ಯಕ್ರಮ ನಿರೂಪಣೆಯನ್ನು ಕುಮಾರ ನಾಗಲಿಂಗ ಬಡಿಗೇರ್ ನಿರೂಪಿಸಿದರು.
ಪ್ರಾಸ್ತಾವಿಕವಾಗಿ ಶ್ರೀಮತಿ ದೀಪ ಹುಣಸೂರು ಆರೋಗ್ಯ ಅಧಿಕಾರಿಗಳು ಮಾತನಾಡಿ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದರಿಂದ ಹಿರಿಯರಿಗೆ ಆಗುವ ಪ್ರಯೋಜನಗಳು ಹಿರಿಯರ ಆರೋಗ್ಯ ಕುರಿತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಆಹಾರ ಸೇವನೆ ಬಗ್ಗೆ 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಬರುವ ಖಾಯಿಲೆಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು
ಐಸಿಟಿಸಿ ಸಮಾಲೋಚಕರು ಶ್ರೀ ಚನ್ನಬಸಪ್ಪ ಹನುಮನಾಳ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಟಿವಿ ಕಾಯಿಲೆ ಹೇಗೆ ಬರುವುದು ಮತ್ತು ಎಚ್ಐವಿ ಹೇಗೆ ಹರಡುವುದು ಎಂಬುದರ ಬಗ್ಗೆ ಮಾಹಿತಿ ಹಂಚಿಕೊಂಡರು.
ಕಲಿಕೆ ಟಾಟಾ ಟ್ರಸ್ಟ್ ಸಂಯೋಜಕರು ಶ್ರೀ ಸಿದ್ದಲಿಂಗ ರೆಡ್ಡಿ ಅವರು ಮಾತನಾಡಿ ಗ್ರಾಮ ಹಿರಿಯರು ಕೇಂದ್ರದ ಕುರಿತು ಮಾಹಿತಿ ಹಂಚಿಕೊಂಡರು ಮುಂದುವರಿದ ಭಾಗವಾಗಿ ಆರೋಗ್ಯ ತಪಾಸಣೆ ಶಿಬಿರ ಕುರಿತು ಮಾಹಿತಿ ಹಂಚಿಕೊಂಡರು.

ಕಾರ್ಯಕ್ರಮದ ಸಿ ಎಚ್ ಅವರು ಮಾತನಾಡಿ ಪಾರ್ಶ್ವವಾಯು ಹೇಗೆ ಬರುವುದು ಬಿಪಿ ಮತ್ತೆ ಶುಗರ್ ಅನ್ನು ಹೇಗೆ ತಡೆಗಟ್ಟುಕೊಳ್ಳಬೇಕೆಂಬುದನ್ನು ಆಹಾರ ಪದ್ಧತಿಯಲ್ಲಿ ಬದಲಾವಣೆ ಕುರಿತು ಮಾಹಿತಿಯನ್ನು ಹಂಚಿಕೊಂಡರು.
ಉದ್ಘಾಟಕರಾಗಿ ಆಗಮಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮಾತನಾಡಿ ಗ್ರಾಮದ ಹಿರಿಯರು ಸಕಾಲದಲ್ಲಿ ಆರೋಗ್ಯ ತಪಾಸಣೆಯನ್ನು ಮಾಡಿಕೊಳ್ಳಬೇಕು, ಆರೋಗ್ಯ ವೃದ್ಧಿಯಾಗುವುದರಿಂದ ಆರೋಗ್ಯ ಸಮಸ್ಯೆಗಳು ಬಂದರೆ ನಮ್ಮನ್ನು ನೋಡುವವರು ಯಾರು ಆರೋಗ್ಯ ನಾವು ಹೇಗೆ ಕಾಪಾಡಿಕೊಳ್ಳಬೇಕು ಮತ್ತು ಹೆಚ್ಚಿನ ಹಿರಿಯರ ಸಂಖ್ಯೆಯಲ್ಲಿ ಆರೋಗ್ಯದ ಲಾಭ ಪಡೆದುಕೊಳ್ಳಬೇಕು ವಯಸ್ಕರು ಹತ್ತಿರದ ಆಸ್ಪತ್ರೆಗೆ ಹೋಗುವರು ವಯಸ್ಸಾದವರಿಗೆ ಕಾರಣ ನಿಮ್ಮ ಗ್ರಾಮದವರಿಗೆ ಆರೋಗ್ಯ ತಪಾಸಣೆ ಮಾಡಲು ಬಂದಿರುವ ಕಾರಣ ಗ್ರಾಮದ ಎಲ್ಲಾ ಹಿರಿಯರು ಇದರ ಒಂದು ಲಾಭ ಪಡೆದುಕೊಳ್ಳಬೇಕು ಎಂದು ಮಾಹಿತಿ ಹಂಚಿಕೊಂಡರು.

ಕಾರ್ಯಕ್ರಮವನ್ನು ಉದ್ದೇಶಿಸಿ ಗ್ರಾಮ ಪಂಚಾಯಿತಿ ಸದಸ್ಯರು ಹನುಮಂತಪ್ಪ ತೂಗುದಿಲ್ಲಿ ಅವರು ಮಾತನಾಡಿ ಕಲಿಕೆ ಟಾಟಾ ಟ್ರಸ್ಟ್ ಸಂಸ್ಥೆಯು ಹಿರಿಯ ನಾಗರಿಕಗಾಗಿ ಒಳ್ಳೆ ಕಾರ್ಯವನ್ನು ನಿರ್ವಹಿಸುತ್ತಿದೆ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಹಿರಿಯ ನಾಗರಿಕರಿಗಾಗಿ ಚಟುವಟಿಕೆಗಳನ್ನು ಮಾಡಲು ಬಹಳ ಅನುಕೂಲ ಮಾಡಿಕೊಟ್ಟಿದ್ದಾರೆಂದು ಟಾಟಾ ಟ್ರಸ್ಟ್ ಸಂಸ್ಥೆಯು ಒಳ್ಳೆಯ ಕಾರ್ಯ ಮಾಡುತ್ತಿದೆ ನಮ್ಮ ಗ್ರಾಮದಲ್ಲಿ ಇನ್ನು ಹೆಚ್ಚಿನ ಒಳ್ಳೆಯ ರೀತಿ ಕಾರ್ಯಗಳನ್ನು ಮಾಡಲಿ ಎಂದು ಆಶಿಸುತ್ತೇನೆ ಎಂದು ಮನವಿ ಮಾಡಿಕೊಂಡರು.

  • ಕರುನಾಡ ಕಂದ ಪತ್ರಿಕೆ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!