ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಟಕಲ್ ವಿರಕ್ತಮಠದಲ್ಲಿ ಜೀವನ ದರ್ಶನ ಪ್ರವಚನ

ಕಲಬುರ್ಗಿ ಜಿಲ್ಲೆ ಕಾಳಗಿ ತಾಲೂಕಿನ ರಟಕಲ್ ವಿರಕ್ತಮಠದ ಲಿಂಗೈಕ್ಯ ಶ್ರೀ ಮುರುಘೇಂದ್ರ ಶಿವಯೋಗಿಗಳವರ 62ನೇ ಜಾತ್ರಾ ಮಹೋತ್ಸವದ ನಿಮಿತ್ಯ ಐದು ದಿನಗಳ ಕಾಲ ಜೀವನ ದರ್ಶನ ಪ್ರವಚನವು ಮಂಗಳವಾರ 16-12-2025 ರಿಂದ ಶನಿವಾರ 20 ರ ವರೆಗೆ ಜರುಗುವುದು ಮಹಾ ರಥೋತ್ಸವ ಹಾಗೂ ಧರ್ಮಸಭೆಯು ರವಿವಾರದಂದು ದಿನಾಂಕ 21- ರವರೆಗೆ ಜರಗುವುದು.
ಇಂದಿನ ದಿನದ ಕಾರ್ಯಕ್ರಮದ ದಿವ್ಯ ಸಾನಿಧ್ಯ ಪರಮಪೂಜ್ಯ ಶ್ರೀ ರೇವಣಸಿದ್ಧ ಶಿವಾಚಾರ್ಯರು, ನೇತೃತ್ವ ಶ್ರೀ ನೀಲಕಂಠ ದೇವರು ವಿರಕ್ತಮಠ ರಟಕಲ್, ಪೂಜ್ಯ ಸಿದ್ದ ಶಿವಯೋಗಿಗಳು ಗೌರಿಗುಡ್ಡರ ಶರಣರು, ಜ್ಯೋತಿ ಬೆಳಗಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪರಮಪೂಜ್ಯ ರೇವಣಸಿದ್ದ ಶಿವಾಚಾರ್ಯರು ಸಾಧು ಸತ್ಪುರುಷರ ಜೀವನ ನಾವೆಲ್ಲಾ ಕೇಳಬೇಕು ಮತ್ತು ದೇವಸ್ಥಾನಗಳಿಗೆ ಹೋಗಬೇಕು ದಾನ ಧರ್ಮ ಮಾಡಬೇಕು ಪ್ರವಾದಿ ರೇಣುಕರ ಬಸವಾದಿ ಶರಣರ ದಾರಿಯಲ್ಲಿ ನಡೆಯಬೇಕು ಮನೆಯಲ್ಲಿ ಸಂಸ್ಕಾರ ಬಹಳ ಮುಖ್ಯವಾದದ್ದು ಹಿರಿಯರ ಮಾರ್ಗದರ್ಶನ ಹಿರಿಯರು ಕಿರಿಯರು ಎನ್ನುವ ಮನೋಭಾವ ಬರಬೇಕು ಅವರ ಹಾಕಿಕೊಟ್ಟಂತ ದಾರಿಯಲ್ಲಿ ನಡೆದು ದಾರಿದೀಪವಾಗಬೇಕೆಂದರು. ಅಂದಾಗ ಮಾತ್ರ ಜೀವನ ದರ್ಶನ ಪ್ರವಚನ ಕೇಳಿದ್ದಕ್ಕೂ ಸ್ವಾರ್ಥಕವಾಗುತ್ತದೆ ಜೀವನ ದರ್ಶನ ಪ್ರವಚನ ಕೇಳಿ ಪುನೀತರಾಗಬೇಕೆಂದು ಆಶೀರ್ವಚನ ನೀಡಿದರು . ಮುಖ್ಯ ಅತಿಥಿ ಸ್ಥಾನವನ್ನು ಶ್ರೀಮತಿ ಶ್ರೀ ಶೀಲಾ ದೇವಿ ಪಿಎಸ್ಐ ರಟಕಲ್ ಪೋಲಿಸ್ ಠಾಣೆ ವಹಿಸಿಕೊಂಡಿದ್ದರು. ಖ್ಯಾತ ಪ್ರವಚನಕಾರರಾದ ವೇದಮೂರ್ತಿ ಪಂಚಾಕ್ಷರಿ ಶಾಸ್ತ್ರಿ ಕದಮನಹಳ್ಳಿ, ರವರು ಜೀವನ ದರ್ಶನ ಪ್ರವಚನ ನಡೆಸಿಕೊಟ್ಟರು. ಇವರಿಗೆ ಸಾತ್ ನೀಡಿದ ಸಂಗೀತಗಾರರು ಜಗದೀಶ್ ವೀರೇಶ್ವರ ಗದಗ, ತಬಲವಾದಕರು ಗೋಪಾಲ್ ವೀರೇಶ್ವರ ಪುಣ್ಯಶ್ರಮ ಗದಗ, ಹಾಗೂ ಶಿವರಾಜ ಚೌಕ, ರಾಚಯ್ಯ ಕಿಣಿ, ಶರಣಬಸಪ್ಪ ಮಾಮಶೆಟ್ಟಿ, ಮಲ್ಲಿಕಾರ್ಜುನ ಮುಚ್ಚೆಟ್ಟಿ, ಮುರುಗೇಶ್ ನಾಗೂರ, ಮಲ್ಲಣ್ಣ ಅರಣಕಲ್, ಚಂದರ ಭೀಮಳ್ಳಿ, ಮಲ್ಲಣ್ಣ ಸೀಗಿ, ರಾಜಶೇಖರ್ ಬುಕುಟಗಿ, ಮಲ್ಲು ಚಿಕ್ಕಅಗಸಿ, ಅಣ್ಣಾರಾವ ಅಣಕಲ್, ಮಹೇಶ್ ಬಿಜ್ನಳ್ಳಿ , ರಾಜು ಸ್ವಾಮಿ ಕಿಣ್ಣಿ, ರುದ್ರಣ್ಣ ಹಲಗೇರಿ, ಸಿದ್ದು ಅರುಣಕಲ್, ಶ್ರೀ ಸೋಮಣ್ಣ ಡೊಣ್ಣುರ ಅನ್ನದಾಸೋಹ ಸೇವೆ, ನಿರೂಪಣೆಯನ್ನು ಗೌರಿಶಂಕರ ಕಿಣ್ಣಿ ನಡೆಸಿಕೊಟ್ಟರು. ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳು ಮತ್ತು ಮಠದ ಭಕ್ತಾದಿಗಳು ಗ್ರಾಮದ ತಾಯಂದಿರು ಇದ್ದರು ಎಂದು ಪತ್ರಿಕಾ ಪ್ರಕಟಣೆಗೆ ವೀರಣ್ಣ ಗಂಗಾಣಿ ತಿಳಿಸಿದ್ದಾರೆ.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!