2025ರ ವರ್ಷ ಭಾರತೀಯ ಚಿತ್ರರಂಗಕ್ಕೆ ದೊಡ್ಡ ನಷ್ಟ ತಂದಿದೆ. ಹಲವು ದಿಗ್ಗಜ ಕಲಾವಿದರು ಈ ವರ್ಷ ಇಹಲೋಕ ತ್ಯಜಿಸಿದರು. ಸ್ಯಾಂಡಲ್‌ವುಡ್‌ನಿಂದ ಹಿಂದಿ, ತಮಿಳು, ತೆಲುಗು ಮತ್ತು ಇತರ ಭಾಷಾ ಚಿತ್ರರಂಗಗಳವರೆಗೆ ಬಹುಭಾಷಾ ಕಲಾವಿದರು ಸೇರಿದಂತೆ ಅನೇಕರು ನಮ್ಮನ್ನು ಅಗಲಿದ್ದಾರೆ.
ನಟಿ ಬಿ. ಸರೋಜಾ ದೇವಿ, ನಟ ಧರ್ಮೇಂದ್ರ, ನಟ ಎಂ.ಎಸ್ ಉಮೇಶ್, ಬ್ಯಾಂಕ್ ಜನಾರ್ಧನ್, ರಾಕೇಶ್ ಪೂಜಾರಿ, ಗಡ್ಡಪ್ಪ, ಶ್ರೀಧರ್ ನಾಯಕ್, ನಟ ಹರೀಶ್ ರಾಯ್, ರಾಜು ತಾಳಿಕೋಟೆ, ದಿನೇಶ್ ಮಂಗಳೂರು, ನಟ ಸಂತೋಷ್ ಬಾಲರಾಜ್, ಜುಬೀನ್ ಗಾರ್ಗ್, ಶೆಫಾಲಿ ಜರಿವಾಲಾ, ಈ ಎಲ್ಲಾ ಕಲಾವಿರು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರ ನಿಧನ ಎಲ್ಲಾ ಚಿತ್ರಪ್ರೇಮಿಗಳಿಗೆ ದೊಡ್ಡ ನಷ್ಟ ಹೌದು. ಅವರ ಕೊಡುಗೆಗಳು ಯಾವಾಗಲೂ ನಮ್ಮೊಂದಿಗೆ ಇರುತ್ತವೆ.
ವಿಶೇಷ ವರದಿ : ಜಿಲಾನಸಾಬ್ ಬಡಿಗೇರ್



















