ಬಳ್ಳಾರಿ : ಮಾನ್ಯ ಉಪ ನಿರ್ದೇಶಕರು (ಆಡಳಿತ ) ಶಾಲಾ ಶಿಕ್ಷಣ ಇಲಾಖೆ ಬಳ್ಳಾರಿ ಇವರಿಗೆ ಸಮಾನ ಮನಸ್ಕರ ಪ್ರಗತಿಪರ ಸಂಘಟನೆ ಒಕ್ಕೂಟ ಕಂಪ್ಲಿ ಬೆಂಬಲಿತ ಸಂಘಟನೆ ಮನವಿ ಪತ್ರ ಸಲ್ಲಿಸಿದೆ.
ಸಂಘಟನೆಯವರು ಮಾತನಾಡಿ ಕರ್ನಾಟಕ ಶಿಕ್ಷಣ ಕಾಯಿದೆ 1993 ಸೆಕ್ಷನ್- 36, ಕರ್ನಾಟಕ ಶಿಕ್ಷಣ ಸಂಸ್ಥೆಗಳು ( ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮಾನ್ಯತೆ ) ನಿಯಮಗಳ ಪ್ರಕಾರ 1999 ಕಚೇರಿಯ ಸುತ್ತೋಲೆ ಸಂಖ್ಯೆ DPl-CPlOC7-2(OT22/2024-E 1542608 ದಿ. 08-01-2025 ಆದೇಶವನ್ನು ಉಲ್ಲಂಘನೆ ಮಾಡಿ ಶಾಲೆಯನ್ನು ನಡೆಸುತ್ತಿರುವ ಹಾಗೂ 2025 -26ನೇ ಶಾಲೆಗೆ ಶಾಲೆ ನವೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಿ ಮಾನ್ಯತೆಯನ್ನು ನವೀಕರಿಸಿಕೊಳ್ಳಲು ಮುಂದಾಗಿರುವ ಶ್ರೀ ಪ್ರಭುಸ್ವಾಮಿಗಳ ಅನುದಾನಿತ ಪ್ರೌಢಶಾಲೆ ಕಂಪ್ಲಿ ಇದರ ಮಾನ್ಯತೆ / ನವೀಕರಣ ಪ್ರಸ್ತಾವನೆಯನ್ನು ಹಿಂಪಡೆದು / ರದ್ದುಮಾಡಿ ಆಡಳಿತ ಮಂಡಳಿ ಹಾಗೂ ಶಾಲೆಯ ಮುಖ್ಯ ಗುರುಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ನಿಯಮಾನುಸಾರ ಕ್ರಮ ವಹಿಸಬೇಕು.
ಕಂಪ್ಲಿ ಪಟ್ಟಣದ 18ನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಶ್ರೀ ಪ್ರಭುಸ್ವಾಮಿಗಳ ಅನುದಾನಿತ ಪ್ರೌಢಶಾಲೆ ಮೂಲಭೂತ ಸೌಲಭ್ಯಗಳು ಇಲ್ಲದೆ ನಡೆಯುತ್ತಿದೆ. ಶಾಲಾ ಆಡಳಿತ ಮಂಡಳಿಯವರು ಶಿಕ್ಷಣ ಇಲಾಖೆಗೆ/ ಸರ್ಕಾರಕ್ಕೆ ವಂಚಿಸಿ ಇಷ್ಟು ವರ್ಷಗಳಳಿಂದ ನವೀಕರಣ ಮಾಡಿಕೊಂಡು ಬಂದಿರುವುದು ಕಾನೂನು ಬಾಹಿರವಾಗಿದೆ. ಉಲ್ಲೇಖ (8) ರ ಸುತ್ತೋಲೆಯಂತೆ ನಮೂನೆ -ಎ ಶಾಲೆಯ ಶಾಶ್ವತ ದಾಖಲೆಗಳು/ ನಮೂನೆ-ಬಿ ಮತ್ತು ಸಿ. ಶಾಲಾ ಆಡಳಿತ ಮಂಡಳಿಗಳು ಪ್ರತಿ ವರ್ಷ ಅತ್ಯಾನುಸಾರ ನವೀಕರಿಸಿ ಸಲ್ಲಿಸಬಹುದಾದ ದಾಖಲೆ/ ದೃಢೀಕರಣ ಪತ್ರಗಳು / ಹಣಕಾಸಿಗೆ ಸಂಬಂಧಿಸಿದ ಲೆಕ್ಕ ಪತ್ರ ವಿವರ ದಾಖಲೆ ಪ್ರತಿಭೆಗಳು ಶಿಕ್ಷಣ ಇಲಾಖೆಗೆ ಸರಿಯಾಗಿ ಸಲ್ಲಿಸದೆ ಸರ್ಕಾರಕ್ಕೆ ವಂಚಿಸುತ್ತಾ ಅಕ್ರಮವಾಗಿ ಮಾನ್ಯತೆ /ನವೀಕರಣ ಮಾಡಿಕೊಂಡಿದ್ದಾರೆಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ವಿಷಯ. ಈ ಶಾಲೆಯಲ್ಲಿ ಪ್ರಸ್ತುತ 240 ಕ್ಕೂ ಹೆಚ್ಚು ಬಾಲಕ /ಬಾಲಕಿಯರು ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. 8.9.10 ನೇ ತರಗತಿ ಇರುವ ಸದರಿ ಶಾಲೆಯ ವಿದ್ಯಾರ್ಥಿಗಳಿಂದ ಶಿಕ್ಷಣ ಇಲಾಖೆ ದಾಖಲಾತಿ ಶುಲ್ಕ ಸುತ್ತೋಲೆ ಉಲ್ಲಂಘಿಸಿ ದಾಖಲಾತಿ ಶುಲ್ಕ ಜೊತೆಗೆ ಶಾಲಾ ಡೆವಲಪ್ಮೆಂಟ್ ಫೀಸ್ ಅಂತ 1500 ರೂ ಹಣವನ್ನು ವಿದ್ಯಾರ್ಥಿಗಳಿಂದ ಇಲ್ಲಿನ ಮುಖ್ಯಗುರುಗಳು / ಆಡಳಿತ ಮಂಡಳಿ ವಸೂಲು ಮಾಡಿರುವುದು ಕೇಳಿ ಬರುತ್ತಿದೆ. ಆದರೆ ಶ್ರೀ ಪ್ರಭುಸ್ವಾಮಿಗಳ ಅನುದಾನಿತ ಪ್ರೌಢಶಾಲೆಯಲ್ಲಿ ಮೂಲಭೂತ ಸೌಲಭ್ಯ ಮರೀಚಿಕೆಯಾಗಿದೆ. ಕಟ್ಟಡ ಸುರಕ್ಷಿತವಾಗಿಲ್ಲ, ಕಟ್ಟಡ ಅಗ್ನಿ ಸುರಕ್ಷತಾ ಸಮಾಪಾನ ಒಂದಿಲ್ಲ. ಶಾಲೆಯಲ್ಲಿ ಪಾಠೋಪಕರಣ-ಪೀಠೋಪಕರಣ, ಗ್ರಂಥಾಲಯ ಮತ್ತು ಪ್ರಯೋಗಾಲಯ ಹಾಗೂ ಕ್ರೀಡಾ ಸಾಮಗ್ರಿಗಳ ಲಭ್ಯತೆ ಸರಿಯಾಗಿ ಇರುವುದಿಲ್ಲ, ಬಾಲಕ/ ಬಾಲಕಿಯರಿಗೆ ಸೂಕ್ತ ಶೌಚಾಲಯ ಇರುವುದಿಲ್ಲ ನಿರೂಪಯುಕ್ತ ಶೌಚಾಲಯದಲ್ಲಿ ಸರಿಯಾಗಿ ನೀರಿನ ವ್ಯವಸ್ಥೆ ಇಲ್ಲದೆ ದುರ್ವಾಸನೆ ಬೀರುತ್ತಿದೆ. ಶಾಲಾ ಆವರಣ ಸುತ್ತಲೂ ಕಸ, ಕಡ್ಡಿ ತ್ಯಾಜ್ಯ ಕೊಳಕು ನೀರಿನ ದುರ್ವಾಸನೆ ಶಾಲೆಗೆ ಕಾಂಪೌಂಡ್ ಇರುವುದಿಲ್ಲ, ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು ವ್ಯವಸ್ಥೆ ಇಲ್ಲದೆ ಕಲೆಬೆರಕೆ ನೀರು ಕುಡಿಯುವುದು ಸಾಮಾನ್ಯವಾಗಿ. ಆಟದ ಮೈದಾನವಂತು ಕಲ್ಲು ಮಣ್ಣಿನಿಂದ ಕೂಡಿದೆ ಹಾಗೂ ಬಿಸಿ ಊಟ ಅಡುಗೆ ತಯಾರಿಸುವ ಕೋಣೆ ಸ್ವಚ್ಛತೆ ಇರುವುದಿಲ್ಲ, ಸರ್ಕಾರ ನೀಡುವ ಮೊಟ್ಟೆ ಬಾಳೆಹಣ್ಣು ವಿತರಣೆಯಲ್ಲಿ ಅಕ್ರಮ ನಡೆಯುತ್ತಿದೆ. ಒಟ್ಟಾರೆ ಈ ಶಾಲೆಯ ಆಡಳಿತ ಮಂಡಳಿಯವರು/ ಮುಖ್ಯಗುರುಗಳು ಶಿಕ್ಷಣ ಹೆಸರಿನಲ್ಲಿ ವಿದ್ಯಾರ್ಥಿ/ ಪೋಷಕರಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಾ, ಸರ್ಕಾರದಿಂದ ಸೌಲಭ್ಯ ಪಡೆಯುತ್ತಾ ಶಾಲೆಯನ್ನು ಅಭಿವೃದ್ಧಿಪಡಿಸದೆ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯ ಒದಗಿಸದೆ ಅಕ್ರಮ, ವಂಚನೆ ಮಾಡುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ ಇದು ಕಾನೂನು ಬಾಹಿರನು ಹೌದು ಆದ್ದರಿಂದ ಶ್ರೀ ಪ್ರಭುಸ್ವಾಮಿಗಳ ಅನುದಾನಿತ ಪ್ರೌಢಶಾಲೆಯ ಮಾನ್ಯತೆ ರದ್ದುಪಡಿಸಬೇಕು / ನವೀಕರಣ ಪ್ರಸ್ತಾವನೆ ಕೂಡ ಹಿಂಪಡೆದು ಆಡಳಿತ ಮಂಡಳಿ / ಮುಖ್ಯ ಗುರುಗಳ ಹಾಗೂ ಇವರ ಅಕ್ರಮಕ್ಕೆ ಸಹಕರಿಸುತ್ತಿರುವ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ನಿಯಮಾನುಸಾರ ಕ್ರಮ ವಹಿಸಬೇಕೆನ್ನುವುದೇ ನಮ್ಮ ದೂರಿನ ಒತ್ತಾಯವಾಗಿದೆ. ನಮ್ಮ ದೂರಿನ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದೆ ಆದರೆ ಮುಂದಿನ ದಿನಗಳಲ್ಲಿ ಕಚೇರಿ ಮುಂದೆ ಪ್ರಗತಿಪರ ಸಂಘಟನೆ ಒಕ್ಕೂಟ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಾದ ಕೆ ಲಕ್ಷ್ಮಣ, ರವಿ ಮಣ್ಣೂರು, ಎಚ್. ಬಸಪ್ಪ ಸಣಾಪುರ , ಮರಿಸ್ವಾಮಿ, ದುರ್ಗಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















