ಬಳ್ಳಾರಿ / ಕಂಪ್ಲಿ: ವಿಮುಕ್ತ ದೇವದಾಸಿಯರ ಮಾಶಾಸನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಡಿ.20ರಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಎ. ಸ್ವಾಮಿ ತಿಳಿಸಿದರು. ಅವರು ಪಟ್ಟಣದಲ್ಲಿ ಏರ್ಪಡಿಸಿದ್ದ ವಿಮುಕ್ತ ದೇವದಾಸಿ ಒಂಟಿ ಮಹಿಳೆಯರ ಸಂಘಟನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸಾಮಾಜಿಕ ದೌರ್ಜನ್ಯಕೊಳ್ಳಗಾದ ಆರ್ಥಿಕ ಪರಾವಲಂಬಿಗಳಾದ ದಲಿತ ಮಹಿಳೆಯರ, ಒಂಟಿ ಮಹಿಳೆಯರು, ಮಸಣ ಕಾರ್ಮಿಕರು ತಮ್ಮಗಳ ಬೇಡಿಕೆಗಳ ಈಡೇರಿಕೆಗೆ ಹೋರಾಡುತ್ತಿದ್ದು ಇದುವರೆಗೂ ಈಡೇರಿಲ್ಲ ಎಂದು ದೂರಿದರು.
ವಿಮುಕ್ತ ದೇವದಾಸಿಯರು, ಒಂಟಿ ಮಹಿಳೆಯರು, ಮಸಣ ಕಾರ್ಮಿಕ ಕುಟುಂಬಗಳ ಗಣಿತಿ ಮಾಡಬೇಕು ಮಾಸಿಕ ಆರು ಸಾವಿರ ರೂ. ಪಿಂಚಣಿ ನೀಡಬೇಕು. ನಿವೇಶನ, ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಸಣ ಕಾರ್ಮಿಕ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಸಿ.ನಿಂಗಪ್ಪ ದೇವದಾಸಿ ಮಹಿಳಾ ವಿಮೋಚನಾ ಸಂಘದ ಅಧ್ಯಕ್ಷೆ ಹುಲಿಗೆಮ್ಮ, ಪದಾಧಿಕಾರಿಗಳಾದ ಈರಮ್ಮ, ಗುರುಪಾದಮ್ಮ, ತಿಪ್ಪಮ್ಮ, ಕರ್ರಮ್ಮ, ಗಂಗಮ್ಮ, ಹುಲಿಗೆಮ್ಮ, ತಾಯಮ್ಮ, ನಿಂಗಮ್ಮ, ಸಾವಿತ್ರಮ್ಮ, ಕಾಳಮ್ಮ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















