
ಮೈಸೂರು/ ಪಿರಿಯಾಪಟ್ಟಣ :
ದಿನಾಂಕ 21.12.2025ನೇ ಶನಿವಾರ ಹಂಡಿತವಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಹನುಮ ಜಯಂತಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮವನ್ನು ಹಂಡಿತವಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಸಹಕಾರದೊಂದಿಗೆ ಬೆಳಿಗ್ಗೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಅಭಿಷೇಕ ಮತ್ತು ಪೂಜಾ ಕೈಂಕರ್ಯಗಳನ್ನು ಮಾಡಲಾಗುವುದು ನಂತರ ಬರುವಂತ ಭಕ್ತಾದಿಗಳಿಗೆ ಅನ್ನೋದಾಸೋಹ ಜರುಗುವುದು. ನಂತರ ಶ್ರೀ ಗೌರಿ ಮೆಲೋಡಿಸ್ ಆರ್ಕೆಸ್ಟ್ರಾದವರಿಂದ ರಸಮಂಜರಿ ಕಾರ್ಯಕ್ರಮವನ್ನು ಸಹ ಏರ್ಪಡಿಸಲಾಗುವುದು ಆದ್ದರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಹನುಮ ಜಯಂತೋತ್ಸವವನ್ನು ಆಚರಿಸಲು ಸಹಕಾರ ನೀಡಬೇಕೆಂದು ಆಂಜನೇಯ ಸೇವಾ ಸಮಿತಿ ಹಂಡಿತವಳ್ಳಿ ವತಿಯಿಂದ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೇಳಿಕೊಳ್ಳಲಾಗಿದೆ.
ಸ್ಥಳ : ಆಂಜನೇಯ ದೇವಸ್ಥಾನ ಫಾರೆಸ್ಟ್ ಹತ್ತಿರ.
ವರದಿ ಹೆಚ್. ಆರ್. ಶಂಕರ್



















