ತೊಗರಿಗೆ 8 ಸಾವಿರ ರೂ. ಬೆಂಬಲ ಬೆಲೆ | ನೋಂದಣಿ ಖರೀದಿಗೆ ಬಯೋಮೆಟ್ರಿಕ್ ಕಡ್ಡಾಯ.
ಯಾದಗಿರಿ: ಡಿ.18 ಜಿಲ್ಲೆಯಲ್ಲಿ 2025–26ರ ಹಂಗಾಮಿನ ತೊಗರಿ ಕಾಳುಗಳನ್ನು ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲಿಗೆ ರೂ.8,000ರಂತೆ ಖರೀದಿಸಲು ಜಿಲ್ಲಾ ಆಡಳಿತ ಕ್ರಮ ಕೈಗೊಂಡಿದೆ.
ಪ್ರತಿ ಎಕರೆಗೆ ಗರಿಷ್ಠ 4 ಕ್ವಿಂಟಾಲ್ ತೊಗರಿ ಖರೀದಿಸುವಂತೆ ನಿಗದಿ ಮಾಡಲಾಗಿದ್ದು, ಪ್ರತಿ ರೈತರಿಂದ ಪೂಟ್ ಸಾಫ್ಟ್‌ವೇರ್‌ನಲ್ಲಿ ನಮೂದಾದ ಜಮೀನು ಪ್ರಮಾಣದ ಆಧಾರದ ಮೇಲೆ 80 ದಿನಗಳವರೆಗೆ ನೊಂದಣಿ ಮತ್ತು 90 ದಿನಗಳವರೆಗೆ ಖರೀದಿ ಅವಧಿಯನ್ನು ನಿಗದಿಪಡಿಸಲಾಗಿದೆ.
ನೊಂದಣಿ, ಖರೀದಿಗೆ ಬಯೋಮೆಟ್ರಿಕ್ ಕಡ್ಡಾಯವಾಗಿ ದ್ದು ರೈತರು ಸಂಬಂಧಿತ ಖರೀದಿ ಕೇಂದ್ರಗಳಲ್ಲಿ POS ಯಂತ್ರಗಳ ಮೂಲಕ UIDAI ಬಯೋಮೆಟ್ರಿಕ್ ಆಧಾರದ ಮೇಲೆ ನೊಂದಾಯಿಸಿಕೊಳ್ಳುವುದು ಕಡ್ಡಾಯವಾಗಲಿದೆ.
ತಮ್ಮ ಉತ್ಪಾದಿತ ತೊಗರಿಯನ್ನು ಮಾರಾಟ ಮಾಡಿದ ರೈತರಿಗೆ ಹಣವನ್ನು ನೇರ ಲಾಭ ವರ್ಗಾವಣೆ (DBT) ಮೂಲಕ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
PACS ಮತ್ತು FPO ಖರೀದಿ ಕೇಂದ್ರಗಳುಜಿಲ್ಲೆಯಲ್ಲಿ ಯಾದಗಿರಿ, ಸುರಪುರ, ಶಹಾಪುರ, ಹುಣಸಗಿ, ವಡಗೇರಾ, ಗುರುಮಠಕಲ್ ತಾಲ್ಲೂಕುಗಳಲ್ಲಿನ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು (PACS) ಮತ್ತು ರೈತ ಉತ್ಪಾದಕರ ಸಂಸ್ಥೆಗಳು (FPO)ಗಳನ್ನು ಖರೀದಿ ಕೇಂದ್ರಗಳಾಗಿ ಗುರುತಿಸಲಾಗಿದೆ.
ಪ್ರತಿ ಕೇಂದ್ರದ ದೂರವಾಣಿ ಸಂಖ್ಯೆಗಳನ್ನು ಪ್ರಕಟಿಸಲಾಗಿದ್ದು, ರೈತರು ಹೆಚ್ಚಿನ ಮಾಹಿತಿಗೆ ತಮ್ಮ ಹತ್ತಿರದ PACS/FPO ಸಂಪರ್ಕಿಸಿ ಈ ಯೋಜನೆಯ ಲಾಭ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದರ ಖರೀದಿ ಸಮಿತಿ ಅಧ್ಯಕ್ಷರು ಮನವಿ ಮಾಡಿದ್ದಾರೆ.
ವರದಿ: ಜಗದೀಶ್ ಕುಮಾರ್ ಭೂಮಾ



















