ಯಾದಗಿರಿ/ಗುರುಮಠಕಲ್ : ಡಿ.18 ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಗುರುವಾರ ಶಾಲಾ ಮಕ್ಕಳಿಗಾಗಿ ತೆರೆದ ಮನೆ ಕಾರ್ಯಕ್ರಮ ನಡೆಯಿತು.
ಪಿ.ಐ ವೀರಣ್ಣ ದೊಡ್ಡಮನಿ ಮಾತಾನಾಡಿ ಪೊಲೀಸರಿಗೆ ಭಯ ಪಡುವ ಅವಶ್ಯ ಇಲ್ಲ. ಮುಕ್ತವಾಗಿ ಸಮಸ್ಯೆ ಹೇಳಿಕೊಳ್ಳಬಹುದು. 112 ತುರ್ತು ಸಹಾಯ ವಾಣಿ, 1930 ಸೈಬರ್ ಅಪರಾಧ ಸಹಾಯವಾಣಿ, ಬಾಲ್ಯ ವಿವಾಹ, ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಮಕ್ಕಳಿಗೆ ಮಾಹಿತಿ ನೀಡಿ, ಸಮಸ್ಯೆ ಇದ್ದಾಗ ಹೆದರದೆ ಪೊಲೀಸರನ್ನು ಸಂಪರ್ಕಿಸಿ ಎಂದು ಹೇಳಿದರು.
ಠಾಣೆಯ ಸಿಬ್ಬಂದಿಗಳಾದ ನರೇಂದ್ರ ರೆಡ್ಡಿ ಹಾಗೂ ಶಾಂತ ವೀರ ಶಾಲಾ ಮಕ್ಕಳು, ಶಿಕ್ಷಕರು ಉಪಸ್ಥಿತಿ ಇದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ.



















