ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಬಂಗ್ಲೆ ಮಲ್ಲಿಕಾರ್ಜುನ ರವರು ಸ್ಥಾಪಿತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ತಾಲೂಕು ಘಟಕದಿಂದ ಪತ್ರಿಕಾ ದಿನಾಚರಣೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಾಧಕರಿಗೆ ಸಾಧಕ ಪ್ರಶಸ್ತಿ ವಿತರಣಾ ಸಮಾರಂಭವನ್ನು ಏರ್ಪಡಿಸಿದ್ದು, ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಯವರು ಶ್ರೀ ಕ್ಷೇತ್ರ ಶ್ರೀ ಸಿದ್ದರಬೆಟ್ಟ ಮತ್ತು ಪರಮಪೂಜ್ಯ ಶ್ರೀ ಶ್ರೀ ಹನುಮಂತನಾಥ ಮಹಾ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ. ಮುಖ್ಯ ಅತಿಥಿಗಳಾಗಿ ಗೌರವಾನ್ವಿತ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಮಾಜಿ ಲೋಕಾಯುಕ್ತರಾದ ಸಂತೋಷ್ ಹೆಗಡೆ ರವರು ಮತ್ತು ಕಾರ್ಯಕ್ರಮದ ಉದ್ಘಾಟನೆ ಪಿಎನ್ ಕೃಷ್ಣಮೂರ್ತಿರವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಯವರು ಮಾತನಾಡಿ ಅವರು ಪತ್ರಕರ್ತರು ಸಮಾಜದ ಒಂದು ಭಾಗವಾಗಿ ಕಾರ್ಯ ನಿರ್ವಹಿಸಬೇಕು ಮತ್ತು ಸತ್ಯ ನೈಜತೆಯನ್ನು ಅರಿತು ಸುದ್ದಿ ಯನ್ನು ಸಮಾಜಕ್ಕೆ ಸಮಾಜದ ಒಳಿತಿಗಾಗಿ ಪ್ರಕಟಿಸಬೇಕು ಮತ್ತು ಧ್ಯಾನ ಜ್ಞಾನ ಬುದ್ಧಿ ಸಂಸ್ಕಾರ ವಿನಯ ವಿಜ್ಞಾನ ಎಲ್ಲಾ ವಿಷಯಗಳು ಪತ್ರಕರ್ತನ ಪ್ರತಿಕ್ಷಣತೆಯನ್ನು ಗುರುತಿಸುತ್ತದೆ ಎಂದು ತಿಳಿಸಿದರು. ಶ್ರೀ ಶ್ರೀ ಶ್ರೀ ಹನುಮಂತನಾಥ ಸ್ವಾಮೀಜಿರ ವರು ಮಾತನಾಡಿ ಸಮಾಜದಲ್ಲಿ ಎಲ್ಲಾ ಮನುಜರು ಒಂದೇ ಸತ್ಯ ನ್ಯಾಯ ಪಾರದರ್ಶಕತೆಯಿಂದ ನೈಜತೆಯನ್ನು ಸಮಾಜದಲ್ಲಿ ಬಹಿರಂಗ ಪಡಿಸುವ ಏಕೈಕ ವ್ಯಕ್ತಿ ಅದು ಪತ್ರಕರ್ತ. ಸಮಾಜವು ಪತ್ರಕರ್ತನಿಗೆ ಗೌರವ ನೀಡಬೇಕು ಎಂದು ಹೇಳಿದರು.
ರಾಜ್ಯಾಧ್ಯಕ್ಷರಾದ ಬಂಗ್ಲೆಮಲ್ಲಿಕಾರ್ಜುನರವರು ಕಾರ್ಯಕ್ರಮದಲ್ಲಿ ಪತ್ರಕರ್ತರ ಶಕ್ತಿ ಯುಕ್ತಿಗಳಿಗಿಂತ ಲೇಖನಿಯ ಬರವಣಿಗೆಯು ಖಡ್ಗಕ್ಕಿಂತ ಹರಿತವಾಗಿರುತ್ತದೆ ತಾಳ್ಮೆಯಿಂದ ಯಾವುದೇ ಆತುರಕ್ಕೆ ಬೀಳದೆ ಸಮಯ ಪ್ರಜ್ಞೆ ಮತ್ತು ಬುದ್ಧಿವಂತಿಕೆಯಿಂದ ಯೋಚಿಸಿ ಬರಹಗಾರನು ಒಂದು ಪದ ವಾಕ್ಯ ಪ್ರಬಂಧ ಬರೆದಾಗ ಅವನ ಬಲ ಬೆಂಬಲ ಶಕ್ತಿ ಎಲ್ಲವೂ ಪತ್ರಕರ್ತನ ಲೇಖನಿಯಾಗಿರುತ್ತದೆ ಎಂದು ಹೇಳಿದರು. ಮುಖ್ಯ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಂತೋಷ್ ಹೆಗಡೆಯವರು ಮಾತನಾಡಿ ಇಂದಿನ ಮಕ್ಕಳೇ ಮುಂದಿನ ಸಮಾಜದ ಗಣ್ಯ ಮಹನೀಯರಾಗಿ ಉತ್ತಮ ಸಮಾಜವನ್ನು ಸೃಷ್ಟಿ ಮಾಡುತ್ತಾರೆ ಮಕ್ಕಳು ಗೊತ್ತಿಲ್ಲದ ವಿಷಯದ ಬಗ್ಗೆ ಗೊತ್ತಿರುವ ವ್ಯಕ್ತಿಗಳಿಗೆ ಪ್ರಶ್ನಿಸಿ ಅವರ ಜ್ಞಾನ ಹಿರಿಮೆಯನ್ನು ವೃದ್ಧಿ ಮಾಡಿಕೊಳ್ಳಬೇಕೆ ಎಂದು ಹೇಳಿದರು.
ವರದಿ ಪ್ರಸನ್ನ ಕುಮಾರ್



















