ಹೆಸರೇ ಹೇಳುತ್ತಿದೆ ವಿಶೇಷ ಚೇತನರು ಎಂದು
ಕೇಳಲು ಆನಂದವಾಗುವುದಷ್ಟೇ ವಿಶೇಷ ಚೇತನರು ಎಂದು
ಅವರಿಗೆಲ್ಲಿದೆ ವಿಶೇಷ
ಅವರ ಪಾಲಿಗೆ ಉಳಿಯುವುದು ಬರೀ ಶೇಷ
ಭಾಷಣ ಮಾಡುವುದಕ್ಕಷ್ಟೇ ನೀವು ವಿಶೇಷ ಚೇತನರು
ನೀವು ಯಾರಿಗೂ ಕಡಿಮೆ ಇಲ್ಲದ ದೇವರ ಮಕ್ಕಳು
ನಿಮಗೆ ನಾವಿದ್ದೇವೆ ನಿಮ್ಮನ್ನು ಗೌರವಿಸುತ್ತೇವೆಂದು
ತಿರಸ್ಕಾರ ತುಂಬಿದ ಅಧಿಕಾರದ ಅಮಲು
ಹೋಗುವೆವು ನಾವು
ಅಧಿಕಾರಿಗಳ, ರಾಜಕೀಯ ವ್ಯಕ್ತಿಗಳ ಮಾತಿನ ನಂಬಿಕೆಗಾಗಿ ಮೆಟ್ಟಿಲು ಹತ್ತಲು ಕಷ್ಟವಾದರೂ
ಒಂಟಿ ಕಾಲಲ್ಲಿ ನಿಲ್ಲಲು ಆಗದಿದ್ದರೂ
ನಿಯತ್ತಿನಿಂದ ನಮ್ಮ ಕೆಲಸಕ್ಕಾಗಿ
ಅವರ ದೃಷ್ಟಿಯಲ್ಲಿ ಅಯ್ಯೋ ಪಾಪ ಎಂದೇನಿಸಿಕೊಳ್ಳುವುದಕ್ಕಾಗಿ ಕೆಲಸ ಆಗದಿದ್ದರೂ ಕರುಣೆ ಕೇಳುವುದಕ್ಕಾಗಿ
ಕನಿಕರ ಬಿಟ್ಟರೆ ಮತ್ಯಾವುದೇ ಪ್ರಯೋಜನವಿಲ್ಲವಷ್ಟೇ ಯಾಕಪ್ಪ ಬರ್ತೀರಾ ಕಷ್ಟಪಟ್ಟು ಅನ್ನೋ ಮಾತಿಗಷ್ಟೇ
ಒಂದು ಕರೆ ಮಾಡಿದರೆ ಆಗುತ್ತಿತ್ತಲ್ವಾ
ಪಾಪ ಅಲ್ಲಿಂದ ಬಂದಿದ್ದೀರಾ ಆದರೆ ಸಾಹೇಬ್ರು ಇಲ್ವಲ್ಲ
ಒಂದೆರಡು ದಿನ ಬಿಟ್ಟು ಬಾರಪ್ಪ
ನಿನ್ನ ಕೆಲಸ ನಾನೇ ನಿಂತು ಮಾಡಿಸುತ್ತೇನೆಪ್ಪ
ಅವರ ಕೈ ಬಿಸಿ ಮಾಡಿದ್ರೆ ನೋಡಪ್ಪ
ನಿನ್ನ ಕೆಲಸ ಪಕ್ಕನಪ್ಪ
ಮತದಾನದ ಅವಧಿ ಬಂದಾಗ ನೋಡಪ್ಪಾ
ನೀನೇ ಅವರಿಗೆ ದೇವರಪ್ಪ
ಗೆದ್ದು ಗದ್ದುಗೆ ಏರಿದ ಅವನ ಕೇಳ್ರಪ್ಪ
ಯಾರೋ ಇವನ್ನ ಬಿಟ್ಟೋರು ಅನ್ನೋ ಕಳ್ಳಪ್ಪ
ನಿನ್ನ ಕೈ ನಡೆಯುವಾಗ ನೀನೆ ಅವರಿಗೆಲ್ಲ
ನಿನ್ನ ಕೈ ಸೋತಾಗ ನೀ ಅವರಿಗೇನು ಅಲ್ಲ
ನೀನು ದುಃಖಿಸಿ ಫಲವಿಲ್ಲ
ನೀನು ಈಗಲಾದರೂ ತಿಳಿಯದಿದ್ದರೆ ಬದುಕಿಲ್ಲ
ಅರಿತರೆ ಜೀವನವೇ ಆಗುವುದು ಬೆಲ್ಲ
ಮಾದರಿ ವ್ಯಕ್ತಿ ಆಗು ಜಗಕೆಲ್ಲ…
✍️ಶಿವಾನಿ ಎಸ್ ಕೋಟೆ




















