ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಂಪ್ಲಿ-ಕೋಟೆಯಲ್ಲಿ ನಡೆದ ವಾರ್ಡ್ ವಾರು ಸಭೆ

ಮೂಲಭೂತ ಸೌಕರ್ಯ ಒದಗಿಸಲು ಬದ್ಧ : ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ

ಬಳ್ಳಾರಿ / ಕಂಪ್ಲಿ: ಪಟ್ಟಣದ 23 ವಾರ್ಡ್ ಗಳಲ್ಲಿರುವ ಸಮಸ್ಯೆಗಳನ್ನು ಅರಿತು, ಹಂತ ಹಂತದಲ್ಲಿ ಸಮಸ್ಯೆಗಳಿಗೆ ಮುಕ್ತಿ ನೀಡಲಾಗುವುದು ಎಂದು ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಹೇಳಿದರು.
ಕಂಪ್ಲಿ-ಕೋಟೆಯ ತುಂಗಭದ್ರಾ ನದಿ ತಟದ ವೆಂಕಟರಮಣ ದೇವಸ್ಥಾನ ಮುಂಭಾಗದ ಕಟ್ಟೆ ಬಳಿಯಲ್ಲಿ 1/13ನೇ ವಾರ್ಡಿಗೆ ಸಂಬಂಧಿಸಿದಂತೆ ಪುರಸಭೆಯಿಂದ ಹಮ್ಮಿಕೊಂಡಿದ್ದ ವಾರ್ಡ್ ವಾರು ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಪ್ರತಿಯೊಂದು ವಾರ್ಡ್ಗಳಲ್ಲಿ ಸಮಸ್ಯೆಗಳನ್ನು ಆಲಿಸುವ ಜೊತೆಗೆ ಪುರಸಭೆ ತೆರಿಗೆ ಕಟ್ಟುವುದು. ಬೀದಿ ದೀಪ, ಘನತ್ಯಾಜ್ಯ ನಿರ್ವಹಣೆ ಸೇರಿದಂತೆ ಹಲವು ವಿಷಯಗಳನ್ನು ವಾರ್ಡ್ ವಾರು ಸಭೆಯಲ್ಲಿ ಸಾರ್ವಜನಿಕರಿಗೆ ಮನದಟ್ಟು ಮಾಡಲಾಗುವುದು. ಇದರಿಂದ ನೆರೆಹೊರೆ-ವಾರ್ಡ್ ವಾರು ಸಮಿತಿಗಳನ್ನು ರಚಿಸಲಾಗಿದೆ. ಇಲ್ಲಿನ 1ನೇ ವಾರ್ಡಿಗೆ 5 ಜನ ನಾಮ ನಿರ್ದೇಶನ ಸದಸ್ಯರು, 9 ಜನ ಪ್ರತಿನಿಧಿ, ಮತ್ತು ಹೆಚ್ಚುವರಿ 9 ಜನ ಪ್ರತಿನಿಧಿಗಳನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ಇವರಿಗೆ ವಾರ್ಡಿನ ಜವಾಬ್ದಾರಿಗಳನ್ನು ನಿಭಾಯಿಸಲು ಸೂಚಿಸಲಾಗಿದೆ. ಇವರ ಮುಖಾಂತರ ವಾರ್ಡ್ ವಾರು ಸಮಸ್ಯೆಗಳನ್ನು ಪರಿಶೀಲಿಸಿ, ಸೂಕ್ತ ಕ್ರಮ ವಹಿಸಲಾಗುವುದು. ಬೀದಿ ದೀಪಗಳ ಕಾವಲು ಮತ್ತು ನಿರ್ವಹಣೆ ಮಾಡುವುದು. ಆಸ್ತಿ ತೆರಿಗೆ ಸಂದಾಯ ಮಾಡಿರುವುದರ ಖಚಿತ ಮಾಹಿತಿ ಸಂಗ್ರಹ ಮಾಡುವುದು. ವೈಯಕ್ತಿಕ ನೀರಿನ ಮೀಟರ್ ಅಳವಡಿಕೆ, ಘನತ್ಯಾಜ್ಯ ನಿರ್ವಹಣೆ, ನೆರೆಹೊರೆ ಸ್ಥಳದ ನೈರ್ಮಲ್ಯ ಬಳಕೆ, ಹೀಗೆ ಇನ್ನಿತರ ಕಾರ್ಯಕ್ರಮಗಳ ಮುಖೇನ ಉತ್ತಮವಾಗಿ ಕಾರ್ಯ ನಿರ್ವಹಿಸಲಾಗುತ್ತದೆ. ಮೂರು ತಿಂಗಳಲ್ಲಿ ಎರಡ್ಮೂರು ಸಭೆಗಳನ್ನು ಮಾಡಲಾಗುವುದು. ಕಂಪ್ಲಿ-ಕೋಟೆಯಲ್ಲಿ ದೊಡ್ಡಬಸಪ್ಪ, ಕೆ.ಮಮಾರುತಿ ಸೇರಿದಂತೆ ಇತರರಿಗೆ ವಾರ್ಡಿನ ಪ್ರತಿಯೊಂದು ಸಮಸ್ಯೆ, ತೆರಿಗೆ, ನಿರ್ವಹಣೆಯ ಜವಾಬ್ದಾರಿವಹಿಸಲಾಗಿದೆ. ಪ್ರತಿಯೊಂದು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬದ್ಧ ಪರಸಭೆ ಬದ್ಧವಾಗಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸಿಬ್ಬಂದಿಗಳಾದ ಜಯಲಕ್ಷಿ, ಮಹಮ್ಮದ್‌ಗೌಸ್, ರಮೇಶ ಬೆಳಂಕರ್, ಭರಮಪ್ಪ, ಹೊನ್ನೂರಸಾಬ್, ಜಿ.ಆನಂದ, ಮುಖಂಡರಾದ ಸೆಲ್ವರಾಜ್, ಅಶೋಕ್, ಗುರುಮೂರ್ತಿ, ಮಹಮ್ಮದ್ ಹುಸೇನ್ ಸೇರಿದಂತೆ ಇತರರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!