ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ತಿಮ್ಮಾಪುರದಲ್ಲಿ ಕಲಿಕಾ ಹಬ್ಬ ಉದ್ಘಾಟನೆ

ಬಾಗಲಕೋಟೆ/ ಹುನಗುಂದ : ತಾಲೂಕಿನ ತಿಮ್ಮಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಂಜವಾಡಗಿ ಕ್ಲಸ್ಟರ್ ಮಟ್ಟದ ಎಫ್ ಎಲ್ ಎನ್ ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಎಸ್.ಡಿ.ಎಂ.ಸಿ. ನೂತನ ಅಧ್ಯಕ್ಷ ಯಮನಪ್ಪ ಜಬ್ಬಣ್ಣ ವಡ್ಡರ ವಿಶೇಷ ರೀತಿಯ ಪೆಟ್ಟಿಗೆಯಿಂದ ಕಲಿಕಾಹಬ್ಬದ ಶಿರೋನಾಮೆಯ ನಾಮಪಲಕವನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ಹುನಗುಂದ ತಾಲೂಕಿನ ಬಿಂಜವಾಡಗಿ ಕ್ಲಸ್ಟರ್, ಸಮೂಹ ಸಂಪನ್ಮೂಲ ಅಧಿಕಾರಿ ಲಕ್ಷ್ಮಣ ಲಮಾಣಿ ಆಗಮಿಸಿ ಮಾತನಾಡಿ ಸರಕಾರಿ ಶಾಲೆಗಳಲ್ಲಿ ಬಡವರ ಸಾಮಾಜಿಕವಾಗಿ ಹಿಂದುಳಿದವರ ಮಕ್ಕಳೇ ಹೆಚ್ಚಾಗಿ ಓದುತ್ತಿದ್ದು ಅವರು ದೈಹಿಕವಾಗಿ ಮಾನಸಿಕವಾಗಿ ಮತ್ತು ಬೌದ್ದಿಕವಾಗಿ ಅತ್ಯಂತ ಸಮರ್ಥರಿದ್ದಾರೆ ಅವರನ್ನು ನಗರದ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳೊಂದಿಗೆ ಸ್ಪರ್ಧೇಗಳಿಯುವಂತೆ ಮಾಡುವಲ್ಲಿ ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ ಎಂದರು.
ಶಾಲೆಯ ಮುಖ್ಯ ಗುರು ಮಾತೆ ಕೆ.ಎಚ್.ಬೆಲ್ಲದ ಮಾತನಾಡಿ ಕನ್ನಡ ಶಾಲಾ ಕಲಿಕಾ ಹಬ್ಬಗಳು ಮಕ್ಕಳ ಕಲಿಕೆಯನ್ನು ಉತ್ತೇಜಿಸಲು ಮೊದಲ ಸಾಕ್ಷರತೆ ಮತ್ತು ಅಕ್ಷರ ಜ್ಞಾನವನ್ನು ಬಲಪಡಿಸಲು ಸರಕಾರವು ಕಲಿಕಾ ಅಂತರವನ್ನು ಸರಿದೋಗಿಸಲು ಆಯೋಜಿಸಲಾಗಿದೆ. ಈ ಹಬ್ಬಗಳಲ್ಲಿ ಸ್ಪರ್ದೇಗಳು ಸಾಂಸ್ಕೃತಿಕ ಕಾರ್ಯಕ್ರಮಗೊಳೊಂದಿಗೆ ಮಕ್ಕಳಲ್ಲಿ ಕಲಿಕಾ ಪ್ರೇರಣೆ ಮತ್ತು ಪ್ರತಿಭೆಗಳನ್ನು ಹೊರತರುವ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.
ಮುoದುವರೆದು ನಮ್ಮ ಶಾಲೆಯಲ್ಲಿ ಮೈದಾನವು ಚಿಕ್ಕದು ಇರುವದರಿಂದ ಶಾಲಾ ಕೊಠಯಲ್ಲಿಯೆ ಎಲ್ಲಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಹಿರೇಬಾದವಾಡಗಿ ಶಾಲೆಯ ಮುಖ್ಯಗುರು ಎಸ್.ಜಿ. ಹುದ್ದಾರ ಜಾಲಕಮಲದಿನ್ನಿಯ ಪ್ರಬಾರಿ ಮುಖ್ಯ ಗುರುಗಳಾದ ಆನಂದ ಬೇಗಾರ. ಘಟ್ಟಿಗನೂರ ಪ್ರಬಾರಿ ಮುಖ್ಯಗುರುಮಾತೆ ಜಿ.ಎಸ್.ದರಗಾದ ಗ್ರಾಮ ಪಂಚಾಯತ ಸದಸ್ಯೆ ಶರಣಮ್ಮ ರಾಟ ಶಿಕ್ಷಣ ಪ್ರವಿ ಮಲ್ಲಮ್ಮ ಹನಮಗೌಡರ ಎಸ್.ಡಿ.ಎಮ್.ಸಿ. ಉಪಾಧ್ಯಕ್ಷೆ ಶೈಲಾ ಬಸವರಾಜ ಹೇರೂರ ಸೈನಜಾ ಬೇಗಂ, ಬಾಷಾಸಾಬ ದರ್ಜಿ, ಮಾಂತೇಶ ಪೂಜಾರಿ, ರೇಣುಕಾ ಜಡಿಯಪ್ಪ, ವರ್ಕರ್ ರಮೇಶ ಹನುಮಂತ ಚಲವಾದಿ, ಶಿವಲಿಂಗಪ್ಪ ದರ್ಮಣ್ಣ ಮಾದರ, ಶ್ರೀಕಾಂತ ಚಿದಾನಂದ ಚಲವಾದಿ, ಯಮನಪ್ಪ ಹುಲಿಗೆಪ್ಪ ಮಾದರ, ಯಮನಪ್ಪ ಜಟ್ಟೆಪ್ಪ ಮಾದರ ಸವಿತಾ ಬಸವರಾಜ ಮಾದರ ಸರಸ್ವತಿ ಹುಲಗಪ್ಪ ಕಡೆಮನಿ, ವೇದಿಕೆಯಲ್ಲಿದ್ದರು. ಕುಮಾರಿ ಸ್ನೇಹಾ ಮಡಿವಾಳರ ಹಾಗೂ ಸಂಘಡಿಗರು ಪ್ರಾರ್ಥಿಸಿದರು. ಶಿಕ್ಷಕ ಬಿ.ಎಸ್. ತೋಟಿಗೇರ ಸ್ವಾಗತಿಸಿ ಪರಿಚರಿಸಿದರು. ಶಿಕ್ಷಕ ಮಂಜುನಾಥ ಟಕ್ಕಳಿಕಿ ನಿರೂಪಿಸಿದರು ಶಿಕ್ಷಕಿ ಶಾರದಾ ಹೂಲಗೇರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಹುನುಗುಂದ ಸಮೂಹ ಸಂಪನ್ಮೂಲ ಕೇಂದ್ರದ ಬಸವರಾಜ ಮುಂಡೆವಾಡಿ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಎಂ ಟಿ ನಡುವಿನಮನಿ, ಹಾಗೂ ಪ್ರಾಥಮಿಕ ನೌಕರರ ಸಂಘದ ಗೌರವಾಧ್ಯಕ್ಷ ಎಸ್ ಜಿ ಹುದ್ಧಾರ ಹಗೇದಾಳ ಶಾಲೆಯ ಗೀತಾ ತಾರಿವಾಳ, ಕಡಿವಾಲ ಇನಾಂ ಶಾಲೆಯ ಮುಖ್ಯ ಗುರುಮಾತೆ ಐ.ಪಿ ನಾಯಕ ಮಾಂತೇಶ ಆರ್ ಅಮರಾವತಿ ಶಾಲೆಯ ಶಿಕ್ಷಕರಾದ ಆರ್ ಎಸ್ ಹುಲಗೇರಿ . ರಾಮವಾಡಗಿ ಶಾಲೆಯ ಶಿಕ್ಷಕ ತೊಳಮಟ ವೀರಾಪೂರ ಶಾಲೆಯ ಶಿಕ್ಷಕಿ ಕೆ.ಕೆ. ಕೊನೆಸಾಗರ ಬೇಕಮಲದಿನ್ನಿ ಶಾಲೆಯ ಮುಖ್ಯ ಗುರುಗಳಾದ ಎಮ್.ಟಿ. ನಡುವಿನಮನಿ ಚಿಂತೆ ಕಮಲದಿನ್ನಿ ಎಸ್.ಬಿ.ಬಾದವಾಡಗಿ ಜಾಲಕಮ್ಮದಿನ್ನಿ ಶಾಲೆಯ ಶಿಕ್ಷಕರಾದ ಎ.ಎಚ್. ಸೂಣಕಲ್ಲ ಶ್ರೀಧರ ವಾಯ್.ಎಸ್. ಗಟ್ಟಿಗನೂರು ಶಾಲೆಯ ಶಿಕ್ಷಕಿ ಮೀನಾಕ್ಷಿ ಹಗೇದಾಳ ಶ್ರೀಮತಿ ಗುರಿಕಾರ ಬಿಂಜವಾಡಗಿ ಶಾಲೆಯ ಶ್ರೀಮತಿ ಅಕ್ಕಮಾಹಾದೇವಿ ಹಳ್ಳೂರ ಹಾಗೂ ಗ್ರಾಮದ ಮುಖಂಡರು ಗ್ರಾಮಸ್ಥರು ಪಾಲ್ಗೊಂಡರು.
ಚಕ್ಕಡಿ ಮೆರವಣಿಗೆ ಕಾರ್ಯಕ್ರಮಕ್ಕೆ ಪೂರ್ವದಲ್ಲಿ ಶಾಲೆಯಿಂದ ಎಸ್.ಡಿ.ಎಮ್ ಸಿ. ಅಧ್ಯಕ್ಷರು ಹಾಗೂ ಸದಸ್ಯರು ಶಿಕ್ಷಕರು ವಿವಿಧ ಶಿಕ್ಷಕರು ಗ್ರಾಮಸ್ಥರು ಶ್ರೀಮಾರುತೇಶ್ವರ ಹಾಗೂ ಬಸವೇಶ್ವರ ದೇವಾಲಯದ ಆವರಣದವರೆಗೆ ಪ್ರಕಾರ ಪೇರಿಯನ್ನ ಮಾಡಲಾಗಿತ್ತು.

  • ಕರುನಾಡ ಕಂದ ಪತ್ರಿಕೆ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!