ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಲಿಕಾ ಗುಣಮಟ್ಟ ಸುಧಾರಿಸಲು ಕಲಿಕಾ ಹಬ್ಬ ಮುಖ್ಯ ವೇದಿಕೆ

ಲ್

ಯಾದಗಿರಿ /ಸುರಪುರ : ಕಲಿಕಾ ಹಬ್ಬ ಎನ್ನುವುದು ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸಲು ಮತ್ತು ಕಲಿಕಾ ಸಾಮರ್ಥ್ಯ ಸುಧಾರಿಸಲು ಆಯೋಜಿಸಲಾದ ಒಂದು ಚಟುವಟಿಕೆ ಆಧಾರಿತ ಕಾರ್ಯಕ್ರಮವಾಗಿದೆ ಎಂದು ಕನ್ನೆಳ್ಳಿ ಕ್ಲಸ್ಟರ್ ನ ನಿಕಟಪೂರ್ವ ಸಂಪನ್ಮೂಲ ವ್ಯಕ್ತಿ ಪರಶುರಾಮ ಛಲವಾದಿ ಹೇಳಿದರು.

ಸುರಪುರ ತಾಲ್ಲೂಕಿನ ಕುರುಬನ ತಳ್ಳಳ್ಳಿ (ಕೆ. ತಳ್ಳಳ್ಳಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಪಂಚಾಯತಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಯಾದಗಿರಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಸುರಪುರ ಸಮೂಹ ಸಂಪನ್ಮೂಲ ಕೇಂದ್ರ ಕನ್ನೆಳ್ಳಿ 2025 – 26 ನೇ ಸಾಲಿನ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ (FLN) ಆಧಾರಿತ ಕ್ಲಸ್ಟರ್ ಮಟ್ಟದ ( FLN) ಕಲಿಕಾ ಹಬ್ಬದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

1 ನೇ ತರಗತಿಯಿಂದ 5 ನೇ ತರಗತಿಯವರೆಗೆ ಎಫ್ ಎಲ್ ಎನ್ ಕಲಿಕೆಯ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿದ್ದು ಇದು ವಿಶೇಷವಾಗಿ ಕಲಿಕಾ ಅಂತರವನ್ನು ಕಡಿಮೆ ಮಾಡಲು ಮತ್ತು ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ ತಂಡದ ಕೆಲಸದಂತಹ ಜೀವನ ಕೌಶಲ್ಯಗಳನ್ನು ಬೆಳೆಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ಕನ್ನೆಳ್ಳಿ ಶಾಲೆಯ ಶಿಕ್ಷಕರಾದ ಮಂಜುನಾಥ ನಾಯಕ ರವರು ಮಾತನಾಡಿ ಈ ಹಬ್ಬದಲ್ಲಿ ಮಕ್ಕಳು ಆಟ ಹಾಡು ನಾಟಕ ಮತ್ತು ಇತರೆ ಚಟುವಟಿಕೆಗಳ ಮೂಲಕ ಸಂತೋಷದಿಂದ ಕಲಿಯುತ್ತಾರೆ. ಶಾಲೆಗಳ ಅಭಿವೃದ್ಧಿಯಲ್ಲಿ ಪೋಷಕರ ಸಮುದಾಯ ಹಾಗೂ ಶಿಕ್ಷಕರ ಭಾಗಿದಾರಿಕೆಯ ಅಗತ್ಯತೆಯ ಬಗ್ಗೆ ತಿಳಿಸಿದರು.

ಮೊದಲಿಗೆ ಗ್ರಾಮದ ಆಂಜನೇಯ ದೇವಸ್ಥಾನದಿಂದ ಡೊಳ್ಳು ವಾದ್ಯ, ಶಾಲಾ ಮಕ್ಕಳಿಂದ ಕೋಲಾಟ, ಕುಂಭ ಕಳಶ ಮೇಳಗಳೊಂದಿಗೆ ಶಾಲೆಯವರೆಗೂ ಮೆರವಣಿಗೆ ಮಾಡಲಾಯಿತು.
ನಂತರ ಸಸಿಗೆ ನೀರೆರೆಯುವ ಮೂಲಕ ವೇದಿಕೆ ಕಾರ್ಯಕ್ರಮದಕ್ಕೆ ಚಾಲನೆ ನೀಡಲಾಯಿತು.
ಕನ್ನೆಳ್ಳಿ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಹಣಮಂತ್ರಾಯ ಪಲ್ಲೇದ, ನಿಕಟಪೂರ್ವ ಸಂಪನ್ಮೂಲ ವ್ಯಕ್ತಿಗಳಾದ ಪರಶುರಾಮ ಛಲವಾದಿ, ಕನ್ನೆಳ್ಳಿ ಶಾಲೆಯ ಮುಖ್ಯ ಶಿಕ್ಷಕರಾದ ಮಂಜುನಾಥ ನಾಯಕ, ಕಚಕನೂರ ಶಾಲೆ ಮುಖ್ಯ ಶಿಕ್ಷಕರಾದ ಶಾಂತಗೌಡ ಶಿರಗುಂಡ, ಭೂದಾನಿಗಳಾದ ಸಾಹೇಬಗೌಡ ಪೊಲೀಸ್ ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸಾವಿತ್ರಿ ಗಾಳಿ,ರಾಜಶೇಖರ ದೇಸಾಯಿ, ಮುಖ್ಯ ಶಿಕ್ಷಕರಾದ ಸತೀಶ ಶೆಟ್ಟಿ ಪಾಟೀಲ ವೇದಿಕೆಯಲ್ಲಿದ್ದರು.

ನಂತರ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.

ಜಾಲಿಬೆಂಚಿ ಶಾಲೆಯ ಮುಖ್ಯ ಶಿಕ್ಷಕರಾದ ಕುಮಾರಗೌಡ, ಶ್ರೀಶೈಲ ಬಳಿಗಾರ, ವಾಹೀದ್ ಹುಸೇನ, ಟಿ.ಜಿ.ಬಾಬು, ಪಾಲಾಕ್ಷಿ ನಾಯ್ಕ, ಕೆ. ತಳ್ಳಳ್ಳಿ ಶಾಲೆಯ ಅತಿಥಿ ಶಿಕ್ಷಕರಾದ ಮಲ್ಲಿಕಾರ್ಜುನ ಜಾಲಿಬೆಂಚಿ, ನಾಗಪ್ಪ ಕೂಚಬಾಳ, ಬಸನಗೌಡ ಬಿರಾದಾರ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು, ಅತಿಥಿ ಶಿಕ್ಷಕರು, ಮಕ್ಕಳು ಹಾಗೂ ಕೆ.ತಳ್ಳಳ್ಳಿ ಗ್ರಾಮದ ಹಿರಿಯರು, ಯುವಕರು,ಮುಖಂಡರು, ಹಳೆಯ ವಿದ್ಯಾರ್ಥಿಗಳು ಮತ್ತು ಮಹಿಳೆಯರು ಉಪಸ್ಥಿತರಿದ್ದರು.

ಶಿಕ್ಷಕರಾದ ವೆಂಕಟೇಶ ಬ್ಯಾಕೋಡ್ ನಿರೂಪಿಸಿದರು, ಮುಖ್ಯ ಶಿಕ್ಷಕರಾದ ಸತೀಶ ಶೆಟ್ಟಿ ಪಾಟೀಲ ವಂದಿಸಿದರು.

  • ಕರುನಾಡ ಕಂದ.ಕಾಮ್
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!