ಪಾವಗಡ :ಪಟ್ಟಣದ ಅಕ್ಷಯ ಬ್ಲೂ ಜೆಮ್ ಮಾಂಟೆಸ್ಸರಿ ಹಾಗೂ ಹೆಲ್ಪ್ ಸೊಸೈಟಿ ಸೇವಾ ಟ್ರಸ್ಟ್ ವತಿಯಿಂದ ಅಮಿದಲಗೊಂದಿ ವೆಂಕಟೇಶ್ವರ ವೃದ್ರಾಶ್ರಮಕ್ಕೆವಿದ್ಯಾರ್ಥಿಗಳೊಂದಿಗೆ ಭೇಟಿ ನೀಡಿ ನಿರಾಶ್ರಿತ ವೃದ್ಧರ ಜೊತೆಯಲ್ಲಿ ಆಡಂಬರದ ಹೊಸ ವರ್ಷಾಚರಣೆಯನ್ನು ಬದಿಗೊತ್ತಿ ವಿದ್ಯಾರ್ಥಿಗಳು ಆಶ್ರಮಕ್ಕೆ ಬೇಕಾದ ದವಸ ದಾನ್ಯ,ಹಣ್ಣು ಹಂಪಲ,ತರಕಾರಿ ಮತ್ತಿತರ ಪದಾರ್ಥಗಳನ್ನು ನೀಡಿ ಅರ್ಥಪೂರ್ಣ ಸೇವೆಯೊಂದಿಗೆ ಸ್ವದೇಶೀ ಮಾದರಿಯಲ್ಲಿ ಹೊಸ ವರ್ಷವನ್ನು ಆಚರಿಸಿದರು.
ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ವೃದ್ಧರಿಗೆ ಶುಭ ಆರೈಸಿ ಮಾತನಾಡುತ್ತಾ ಕೇಕ್ ಕತ್ತರಿಸುವ ಬದಲು, ಮನೆಯಿಂದ ತಂದ ದಿನಸಿ ಮತ್ತು ಹಣ್ಣುಗಳನ್ನು ನೇರವಾಗಿ ಹಿರಿಯರಿಗೆ ದಾನ ಮಾಡಿ, ಕರುಣೆಯ ಹಬ್ಬಗಳ ನಿಜವಾದ ಅರಿವು ಮೂಡಿಸಿ ವಿದ್ಯಾರ್ಥಿಗಳಿಗೆ ಹಿರಿಯ ಜೀವಿಗಳ ಜೊತೆ ಸಂಸ್ಕಾರದ ಅರಿವನ್ನು ಮೂಡಿಸುವ ವಿನೂತನ ಕಾರ್ಯಕ್ರಮ ಎಂದು ತಿಳಿಸಿದರು.
ಮಕ್ಕಳು ಸಂತೋಷದ ಕ್ಷಣಗಳು, ಕಥೆಗಳು ಮತ್ತು ಹಾಡುಗಳನ್ನು ಹಿರಿಯರೊಂದಿಗೆ ಹಂಚಿಕೊಂಡರು.
ಈ ಸಂದರ್ಭದಲ್ಲಿ ಶಾಲಾ ವ್ಯವಸ್ಥಾಪಕರಾದ ಭವ್ಯ, ಶಿಕ್ಷಕಿಯರಾದ ತೇಜಶ್ವಿನಿ, ಸೀಮಾ, ಗಾನಶ್ರೀ, ನಜಾರೀನಾ, ಅಕ್ಷರ ಮತ್ತು ಆಶ್ರಮದ ವ್ಯವಸ್ಥಾಪಕರಾದ ತಿಮ್ಮಾರೆಡ್ಡಿ ಹಾಗೂ ಮಾನಂ ಗೌತಮ್, ಕಾಮಾಕ್ಷಿ ಉಪಸ್ಥಿತರಿದ್ದರು.
ವರದಿ ಪೃಥ್ವಿರಾಜು ಜಿ.ವಿ




















