ಮರುಪಾವತಿ ಮಾಡಲು ಒತ್ತಾಯ : ಶರಣಬಸಪ್ಪ ದಾನಕೈ ರಾಜ್ಯ ಎಸ್.ಡಿ.ಎಂ.ಸಿ. ನಿರ್ದೇಶಕ
ಕೊಪ್ಪಳ : ಬಡವರ ಗೋಳು ಕೇಳುವರು ಯಾರೂ ಇಲ್ಲವೇ ಇಲ್ಲ, ಯಾವ ಪಕ್ಷದ ಮುಖ್ಯಮಂತ್ರಿಗಳು ಬಂದರು ಬಡವರ ಮೂಗಿಗೆ ತುಪ್ಪ ಸವರುತ್ತಾ ಬಂದು, ಕಣ್ಣು ಮುಚ್ಚಿ ಕುಳಿತಿರುವ ಕಿವುಡ ಸರ್ಕಾರಗಳಾಗಿವೆ, ಬಡವರ ಹಣ ಕೊಡಿಸುವಲ್ಲಿ ಆಮೆಗತಿಯಲ್ಲಿ ಕಾರ್ಯಸಾಗಿದೆ ಎಂದು ಎಸ್. ಡಿ. ಎಂ. ಸಿ ರಾಜ್ಯ ನಿರ್ದೇಶಕ ,ರೈತ ಮುಖಂಡರಾದ ಶರಣಬಸಪ್ಪ ದಾನಕೈ ಅವರು ಹಣ ಮರುಪಾವತಿಸುವಂತೆ ಒತ್ತಾಯಿಸಿದ್ದಾರೆ.
ಮಕ್ಕಳ ವಿದ್ಯಾಭ್ಯಾಸ, ಮದುವೆ, ಮನೆ,ಹೊಲ ಖರೀದಿಗಾಗಿ ಹಿಗೇ ನೂರಾರು ಕನಸುಗಳನ್ನು ಇಟ್ಟುಕೊಂಡು ಅಳುತ್ತಿರು ಮಕ್ಕಳಿಗೆ ಹತ್ತು ಪೈಸೆ ಕೊಡಲಾಗದೆ ಮುಂದಿನ ಭವಿಷ್ಯಕ್ಕಾಗಿ ಹಣ ಕಟ್ಟಿದ್ದಾರೆ, ವಿವಿಧ ಕಂಪನಿಗಳಿಂದ ವಂಚನೆಗೊಳಗಾದ ಗ್ರಾಹಕರ ವತಿಯಿಂದ ಧರಣಿ ಸತ್ಯಾಗ್ರಹ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ನಿರಂತರವಾಗಿ ಜರುಗುತ್ತಾ ಬಂದಿರುತ್ತದೆ. ಬಡವರ ಹಣವನ್ನು ವಂಚನೆ ಮಾಡಿದ ಕಂಪನಿಗಳಾದ ಗ್ರೀನ್ ಬಡ್ಸ್, ಪಲ್ಸ್, ಸಮೃದ್ಧ ಜೀವನ, ವಿ3, ಗುರುಟೀಕ್ ಹೀಗೆ ೧೦೮ ವಿವಿಧ ಕಂಪನಿಗಳು , ಪ್ರತಿನಿಧಿಗಳಿಗೆ, ಗ್ರಾಹಕರಿಗೆ, ಸಾರ್ವಜನಿಕರಿಗೆ ಮೋಸಗೊಳಿಸಿವೆ, ಕಂಪನಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಹರಾಜು ಪ್ರಕ್ರಿಯೆ ನಡೆಸಿ, ಆಯಾ ಕಂಪನಿಗಳ ಕಂಪ್ಯೂಟರ್ ಸಿಸ್ಟಮ್ ಗಳನ್ನು ಓಪನ್ ಮಾಡಿ ವಂಚನೆಗೊಳಗಾದ ಗ್ರಾಹಕರಿಗೆ ಹಣ ಪಾವತಿಸಬೇಕು , ಹಣ ಕಟ್ಟಿದ ಮತ್ತು ನಿರುದ್ಯೋಗ ಸಮಸ್ಯೆಯಿಂದ ಇಂತಹ ಕಂಪನಿಗಳಿಗೆ ಸೇರಿ ಹಣವನ್ನು ಹೂಡಿಕೆ ಮಾಡಿದ ಬಡವರು ಪದೇ ಪದೇ ಅರ್ಜಿಕೊಡುವದರಲ್ಲಿ ಅರ್ಧ ಜೀವನವನ್ನು ಕಳೆದು ನರಕಯಾತನೆಯಿಂದ ಸಾವು ಬದುಕಿನಲ್ಲಿ ಜೀವನ ಅನುಭವಿಸುತ್ತಿದ್ದಾರೆ, ಇಂತಹ ಕಂಪನಿಗಳಿಗೆ ಅಧಿಕಾರ ಕೊಟ್ಟವರು ಯಾರು? ಇಂತಹ ವ್ಯವಹಾರ ನಡೆಯಬೇಕಾದರೆ ಅಯಾ ಅವದಿಯಲ್ಲಿ ಆಯಾ ಪಕ್ಷದವರ ಸರ್ಕಾರ, ಅಧಿಕಾರ ಇದ್ದಾಗ ಇವರಿಗೆ ಅನುಮತಿ ಕೊಟ್ಟಿದ್ದಾರೆ, ಅವರೆ ಇಂತಹ ಕಂಪನಿಗಳ ಮೇಲೆ ಸೂಕ್ತಕ್ರಮ ತಗೆದುಕೊಂಡು ಬಡವರಿಗೆ ಹಣ ದೊರೆಕಿಸಿಕೊಡುವಲ್ಲಿ ಮುಂದಾಗಬೇಕು ಎಂದು ಹೋರಾಟಗಾರ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮನ್ವಯ ಕೇಂದ್ರ ವೇದಿಕೆಯ ರಾಜ್ಯ ನಿರ್ದೇಶಕ ಶರಣಬಸಪ್ಪ ದಾನಕೈ ಅವರು ಒತ್ತಾಯಿಸಿದ್ದಾರೆ. ನಾವೇನು ಸರ್ಕಾರದ ಖಜಾನೆ ಯಿಂದ ಹಣ ನೀಡಿ ಎಂದು ಕೇಳುತ್ತಿಲ್ಲ. ನಾವು ಕಂಪನಿಗಳಿಗೆ ನೀಡಿರುವ ಹಣವನ್ನು ನಮ್ಮ ಹಕ್ಕಿನಿಂದ ಕೇಳುತ್ತಿದ್ದೇವೆ. ನಿಗದಿತ ಸಮಯದಲ್ಲಿ ನಮ್ಮ ಹಣವನ್ನು ನಮಗೆ ಮರುಪಾವತಿ ಮಾಡಲಾರದ ಕಾರಣ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ಟಿಪಿಜೆಪಿ, ರೈತಪರ, ಜನಪರ ಸಂಘಟನೆ ವತಿಯಿಂದ ಪ್ರತಿ ಜಿಲ್ಲೆ ಹಾಗೂ ತಾಲೂಕಗಳಲ್ಲಿ ಧರಣಿ ಸತ್ಯಾಗ್ರಹವನ್ನು ಸೆಪ್ಟೆಂಬರ್ ೨೦೨೪ ರಿಂದ ತಿಂಗಳ ಪರ್ಯಂತರ ಇಲ್ಲಿಯವರೆಗೆ ಆಯಾ ತಾಲೂಕು, ಜಿಲ್ಲೆಗಳ ಅಧ್ಯಕ್ಷರು, ವಿವಿಧ ತಾಲೂಕಿನ ಪದಾಧಿಕಾರಿಗಳು, ಗ್ರಾಹಕರು ಹಾಗೂ ವಿವಿಧ ಸಂಘಟನೆಗಳ ಜೊತೆಗೂಡಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಮಾಡುತ್ತಾ ಬಂದಿರುತ್ತಾರೆ ಆದರೆ ಇಲ್ಲಿಯವರೆಗೆ ಮುಖ್ಯಮಂತ್ರಿಗಳು, ಶಾಸಕರು, ಸಂಸದರು, ಜಿಲ್ಲಾಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದನೆ ಮಾಡಿಲ್ಲ ಇನ್ನು ಮುಂದಾದರು ಸಮಸ್ಯೆಗೆ ಸ್ಪಂದಿಸಬೇಕು ಎಂದು ರಾಜ್ಯ ಎಸ್.ಡಿ.ಎಂ.ಸಿ. ನಿರ್ದೇಶಕ ಶರಣಬಸಪ್ಪ ದಾನಕೈ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ . ಇಂತಹ ಕಂಪನಿಗಳಿಂದ ವಂಚನೆಗೊಳಗಾದ ಗ್ರಾಹಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳಾದ ಟಿಪಿಜೆಪಿ ಸಂಘನೆಯ ರಾಜ್ಯ ಅದ್ಯಕ್ಷ ಅಪ್ಪಾಸಾಹೇಬ ಬುಗಡೆ ,ಪ್ರತಿನಿಧಿಗಳಾದ ಹನುಮೇಶ ಕಲ್ಮಂಗಿ, ಎಸ್.ಕೆ.ದಾನಕೈ ,ಅಂದಪ್ಪ ಸಂಗನಾಳ, ಪ್ರಭುರಾಜ ಅಂಗಡಿ, ಗವಿಸಿದ್ದಪ್ಪ ಪಲ್ಲೇದ, ಅಯ್ಯಪ್ಪ ಕುಂಬಾರ, ಶರಣಪ್ಪ .ಎಚ್. ಹೊಸಳ್ಳಿ, ಮಂಜುರಲಿ ಬನ್ನೂ, ಮಂಜಪ್ಪ ಹೊಸಳ್ಳಿ,ಚೆನ್ನಪ್ಪ ಹೂಗಾರ ಇತರರು ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನಕ್ಕೆ ತರುವುದರ ಮೂಲಕ ಸಾರ್ವಜನಿಕರಿಗೆ ವಂಚನೆ ಮಾಡಿದ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಹಣ ಕಳೆದುಕೊಂಡ ಗ್ರಾಹಕರಿಗೆ ಮರುಪಾವತಿ ಮಾಡಿ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಡಿ.೩೧ ರಂದು ಟಿಪಿಜೆಪಿ ಸಂಘಟನೆಯ ಪಧಾದಿಕಾರಿಗಳು ವಿಜಯಪುರ ಜಿಲ್ಲೆಯ ಜಿಲ್ಲಾಧಿಕಾರಿಗಳ ಆಫೀಸ್ ಹತ್ತಿರ ಗಗನ ಗಾರ್ಡನ್ ನಲ್ಲಿದಲ್ಲಿ ಬೆಳಿಗ್ಗೆ ೧೦ ಗಂಟಗೆ ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಯವರು ಭಾಗವಹಿಸಿ ಒಗ್ಗಟ್ಟಿನಿಂದ ಕೈ ಜೋಡಿಸಿದಾಗ ಮಾತ್ರ ಯಶಸ್ಸು ಹಾಗೂ ಹಣ ಮರುವಾವತಿ ಪಡೆಯಲು ಸಾದ್ಯ ಆದ್ದರಿಂದ ಮುಂದಿನ ಹೋರಾಟದ ಹಾದಿಯ ಬಗ್ಗೆ ಚರ್ಚಿಸಲಾಗುವುದು ಸರ್ವರು ಭಾಗವಹಿಸಬೇಕು ಎಂದು ಸಂಘಟಕರು ತಿಳಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ.




















