ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

55 ಕೆ.ಜಿ ಗೋಧಿ ಮೂಟೆ ಹೊತ್ತು ಅಯೋಧ್ಯೆ ರಾಮಮಂದಿರಕ್ಕೆ ನಡಿಗೆ ಪ್ರಾರಂಭಿಸಿದ : ಕೇದಾರಲಿಂಗ ಕುಂಬಾರ

ವಿಜಯಪುರ / ಸಿಂದಗಿ : ಬಳಗಾನೂರ ಗ್ರಾಮದ ಕೇದಾರಲಿಂಗ ಕುಂಬಾರ 55 ಕೆಜಿ ತೂಕದ ಗೋಧಿ ಮೂಟೆ ತಲೆಯ ಮೇಲೆ ಹೊತ್ತುಕೊಂಡ ದೂರದ ಉತ್ತರಪ್ರದೇಶದ ಅಯೋಧ್ಯೆ ರಾಮಮಂದಿರವರೆಗೆ ಕಾಲ್ನಡಿಗೆ ಶನಿವಾರ ಪ್ರಾರಂಭಿಸಿದರು.

ಗ್ರಾಮಸ್ಥರು ಯುವಕನಿಗೆ ಗೌರವಿಸಿ ವಾದ್ಯ ವೈಭವದೊಂದಿಗೆ ರಾಮನಹಳ್ಳಿ ವರೆಗೆ ಬೀಳ್ಕೊಟ್ಟರು. ಬಳಗಾನೂರ ಗ್ರಾಮದ ಸಮಸ್ತ ನಾಗರಿಕರಿಗೆ ಒಳ್ಳೆಯದಾಗಲಿ, ಗೋಹತ್ಯೆ ನಿಷೇಧ ಕಟ್ಟುನಿಟ್ಟಾಗಿ ಜಾರಿಗೆ ಬರಬೇಕು ಎಂಬ ಸಂದೇಶದೊಂದಿಗೆ ಕಾಲ್ನಡಿಗೆ ಪ್ರಾರಂಭಿಸಿದ್ದಾಗಿ ತಿಳಿಸಿದ್ದಾರೆ.

ಪ್ರತಿದಿನ 40-50 ಕಿ.ಮೀ ವರೆಗೆ ಪಾದಯಾತ್ರೆ ಹೊರಟು ಅಲ್ಲಿ ವಾಸ್ತವ್ಯ ಮಾಡಿ ಮತ್ತೆ ಕಾಲ್ನಡಿಗೆ ಹೊರಡುವರು. ಇವರ ಜೊತೆ ನೂರ ನದಾಫ್‌ ಎಂಬ ಮುಸ್ಲಿಂ ವ್ಯಕ್ತಿ ಕರ್ನಾಟಕ ಗಡಿ ದಾಟುವವರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ.

ವಿವೇಕ ಕುಂಬಾರ ಎಂಬ ಯುವಕ ಬೈಕ್ ತೆಗೆದುಕೊಂಡು ಪಾದಯಾತ್ರಿಗೆ ನೀರು, ಊಟದ ವ್ಯವಸ್ಥೆ ಮಾಡುವುದಕ್ಕಾಗಿ ಹೊರಟಿದ್ದಾರೆ.
ಕೇದಾರಲಿಂಗ ಕುಂಬಾರ ಈ ಮೊದಲು ಆಂಧ್ರ ಪ್ರದೇಶದ ಶ್ರೀಶೈಲಂ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಇದೇ ರೀತಿ ಮೂಟೆ ಹೊತ್ತು 12 ದಿನಗಳ ಕಾಲ್ನಡಿಗೆ ಎರಡು ಬಾರಿ, ಹುಲಜಂತಿ ಸುಕ್ಷೇತ್ರಕ್ಕೆ ಪಾದಯಾತ್ರೆ ಮಾಡಿದ್ದಾರೆ.

‘ ಪಾದಯಾತ್ರೆ ಆರಂಭಿಸುವ ಮುನ್ನ ಹಲವು ದಿನಗಳು ಗೋಧಿ ಮೂಟೆ ಹೊತ್ತು ನಿತ್ಯ ಸಂಜೆ ಬಳಗಾನೂರದಿಂದ ಕೋರಳ್ಳಿ ಗ್ರಾಮದವರೆಗೆ ನಡೆದು ರೂಢಿ ಮಾಡಿಕೊಂಡಿದ್ದಾರೆ ’ ಎಂದು ಗ್ರಾಮದ ಅನಿಲ್ ಸುರಗಿಹಳ್ಳಿ ತಿಳಿಸಿದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!