ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಮಾಜ ಸೇವೆಗೆ ಪದವಿ ಮುಖ್ಯವಲ್ಲ – ರಮೇಶ ಹ್ಯಾಟಿ.

ಕೊಪ್ಪಳ ಜ.೭: ಸಮಾಜ ಸೇವೆ ಮಾಡಲು ಯಾವುದೇ ಪದವಿಯ ಅಗತ್ಯವಿಲ್ಲ ಎಂದು ಭಾಗ್ಯನಗರ ಪಟ್ಟಣ ಪಂಚಾಯತಿಯ ನೂತನ ಅಧ್ಯಕ್ಷ ರಮೇಶ ಹ್ಯಾಟಿ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀ ರಾಮ ಬಡಾವಣೆಯ ಎಂಟನೆ ವಾರ್ಡಿನ ನಾಗರಿಕರು ‘ಸೃಷ್ಟಿ ಹೋಂ ಕ್ಲಾಸಸ್’ ನ ಆವರಣದಲ್ಲಿ ಆಯೋಜಿಸಿದ್ದ ‘ನಾಗರಿಕ ಗೌರವ’ ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಪಟ್ಟಣಕ್ಕೆ ಏನಾದರೊಂದು ಕೊಡುಗೆ ಸಲ್ಲಿಸುವುದಾಗಿ ಮಾತು ಕೊಟ್ಟರು. ರಸ್ತೆ, ಚರಂಡಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿ ನಾಗರಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದಾಗಿ ಹೇಳಿದರು. ಕಸ ವಿಲೇವಾರಿಗೆ ಅಗತ್ಯ ಕ್ರಮ ಕೈಕೊಂಡು, ಸಂಗ್ರಹಿಸಿದ ಕಸವನ್ನು ನಿಗದಿ ಪಡಿಸಿದ ಜಾಗೆಯಲ್ಲಿ ಹಾಕಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಪಟ್ಟಣದ ಮಸಣಕ್ಕೆ ಹೊಸ ಕಾಯಕಲ್ಪ ಮಾಡಲು ಹೊಸ ಯೋಜನೆ ರೂಪಿಸಿದೆ. ಸಾರ್ವಜನಿಕರು ಸಹ ಅದಕ್ಕೆ ಕೈಜೋಡಿಸಬಹುದೆಂದು ಹೇಳಿದರು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಮೌನೇಶ ಗ್ಯಾನಪ್ಪ ಬಡಿಗೇರ ಐದು ಸಾವಿರ ಒಂದು ರೂಪಾಯಿ ದೇಣಿಗೆ ನೀಡಲು ಒಪ್ಪಿಗೆ ಸೂಚಿಸಿದರು.

ವಾರ್ಡಿನ ಹಿರಿಯರು ಹಾಗೂ ನಿವೃತ್ತ ಚಿತ್ರಕಲಾ ಶಿಕ್ಷಕ ಬಿ ಎನ್ ಬಿಸ್ನಳ್ಳಿ ಅವರು ಮಾತನಾಡಿ ಮುಂದಿನ ದಿನಮಾನಗಳಲ್ಲಿ ರಮೇಶ ಹ್ಯಾಟಿ ಅವರ ಎಲ್ಲ ಕೆಲಸ ಕಾರ್ಯಗಳಲ್ಲಿ ವಾರ್ಡಿನ ಎಲ್ಲಾ ಸದಸ್ಯರು ಬೆಂಬಲವಾಗಿ ನಿಲ್ಲಬೇಕೆಂದು ಹೇಳಿದರು. ಮಂಜುನಾಥ ಹೆಬ್ಬಳ್ಳಿ ಮಾತನಾಡಿ ನಾಗರಿಕರ ಸಮಸ್ಯೆಗೆ ಯಾರು ಸ್ಪಂದಿಸುತ್ತಾರೋ ಅವರೇ ನಿಜವಾದ ಜನಪ್ರತಿನಿಧಿ ಅಂತಹ ಸಾಲಿಗೆ ರಮೇಶ ಹ್ಯಾಟಿ ಸೇರುತ್ತಾರೆ ಎಂದರು.

ಮತ್ತೊಬ್ಬ ಹಿರಿಯ ನಾಗರಿಕ ಆದನಗೌಡ ಅವರು ಮಾತನಾಡಿ ಯಾವುದೇ ಸಮಸ್ಯೆಗೆ ಸ್ಪಂದಿಸಲು ಅಧ್ಯಕ್ಷರು ತಯಾರಿರಬೇಕೆಂದು ಮನವಿ ಮಾಡಿದರು. ಸಾಹಿತಿ ಶಿ ಕಾ ಬಡಿಗೇರ ಅಭಿನಂದನಾ ನುಡಿ ಹೇಳಿ ಎಲ್ಲರ ಪರವಾಗಿ ಅಭಿನಂದಿಸಿದರು.

ಮುಖಂಡರಾದ ನಾಗರಾಜ ಪವಾರ,
ನೇಮಾಸ ಮೆಹರ್ವಾಡೆ, ನಾರಾಯಣಪ್ಪ ಬೆಟಗೇರಿ, ಚಿದಾನಂದಪ್ಪ, ಮಾರುತಿ ಕುದರಿ, ವೀರಣ್ಣ ಕಬ್ಬೇರ, ಸಿದ್ದನಗೌಡ ಹಿರೇಗೌಡರ, ನಿಂಗನಗೌಡ ಪೋ ಪಾಟೀಲ, ಅಶೋಕ ಮೇಘರಾಜ, ಪ್ರಕಾಶ ಜೋಷಿ, ಸತೀಶ ಮೆಹರ್ವಾಡೆ ಮುಂತಾದವರು ಉಪಸ್ಥಿತರಿದ್ದರು.

  • ಕರುನಾಡ ಕಂದ ಪತ್ರಿಕೆ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!