ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀ ಭೀಮಾಂಬಿಕಾದೇವಿಯ 37 ನೇ ವರ್ಷದ ಪುರಾಣ ಪ್ರಾರಂಭೋತ್ಸವ- ಜಾತ್ರಾ ಮಹೋತ್ಸವಕ್ಕೆ ಚಾಲನೆ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸುಕ್ಷೇತ್ರ ದಮ್ಮೂರ ಗ್ರಾಮದ ಶ್ರೀ ಭೀಮಾಂಬಿಕಾದೇವಿ ದೇವಸ್ಥಾನದಲ್ಲಿ ೩೭ ನೇಯ ಪುರಾಣ ಮಹಾಮಂಗಲೋತ್ಸವ, ಸಾಮೂಹಿಕ ವಿವಾಹ ,ಧರ್ಮಸಭೆ ಹಾಗೂ ಲಿಂ.ಪೂಜ್ಯ ಗುರುಬಸಪ್ಪಜ್ಜನವರು ಮತ್ತು ಲಿಂ.ಮಾತೋಶ್ರಿ ರೇಣಮ್ಮನವರ ೧೯ ನೇ ವರ್ಷದ ಪುಣ್ಯಸ್ಮರೋಣೋತ್ಸವ ಹಾಗೂ ೩೮೨ ನೇ ಶಿವಾನುಭವ ಗೋಷ್ಠಿ ಮತ್ತು ಮಹಾರಥೋತ್ಸವದ ಅಂಗವಾಗಿ ಜ.೮ ರಂದ ರಾತ್ರಿ ೮.೩೦ ಕ್ಕೆ ಶ್ರೀ ಭೀಮಾಂಬಿಕಾ ದೇವಿಯ ಪುರಾಣ ಕಾರ್ಯಕ್ರಮಕ್ಕೆ ಗುರು ಹಿರಿಯರಿಂದ ಚಾಲನೆ ನೀಡಲಾಯಿತು. ಬಳೂಟಗಿಯ ಪ್ರವಚನಕಾರ ವೇ. ಮೂ. ಸಿದ್ದೇಶ್ವರ ಶಾಸ್ತ್ರೀ ಅವರು ಮಾತನಾಡಿ ಶ್ರೀ ಭೀಮಾಂಬಿಕಾದೇವಿಯ ಪುರಾಣವನ್ನು ಆಲಿಸುವುದರಿಂದ ನಮ್ಮ ಮನಸ್ಸಿಗೆ ನೆಮ್ಮದಿ ಮತ್ತು ನಿಶ್ಚಿಂತೆಯಿಂದ ಇರಲು ಸಾಧ್ಯ ಎಂದರು.

ಶ್ರೀಮಠದ ಓಡೆಯರಾದ ನಾಗಪ್ಪಜ್ಜ ಧರ್ಮರ, ಹನುಮಂತಪ್ಪಜ್ಜ ಧರ್ಮರ ಮತ್ತು ಶರಣಯ್ಯ ಹಿರೇಮಠ ಸಾನಿದ್ಯ ವಹಿಸಿದ್ದರು.
ಪ್ರಾಸ್ತಾವಿಕವಾಗಿ ಅಂದಪ್ಪ ಮಂಡಲಗೇರಿ, ರಸೂಲಸಾಬ ಹಿರೇಮನಿ, ಗುರುಮೂರ್ತಿ ಬಡಿಗೇರ , ನಿವೃತ್ತ ಶಿಕ್ಷಕ ಶರಣೆಗೌಡ ಎಸ್ ಗೌಡರ ಮಾತನಾಡಿದರು.
ಈ ವೇಳೆ ಶ್ರೀ ಭೀಮಾಂಬಿಕಾ ದೇವಿಯ ಶಿವಾನುಭವ ಸೇವಾ ಸಮಿತಿ ಅಧ್ಯಕ್ಷ ಶರಣಬಸಪ್ಪ ದಾನಕೈ, ಮುಖಂಡರಾದ ಡಿ.ಮೌನೇಶ ಬಡಿಗೇರ, ವೀರಪ್ಪ ರಾವಣಕಿ, ಶರಣಪ್ಪ ಹಾಲಕೇರಿ,ನಾಗಪ್ಪ ಮೇಟೆ, ಬಸವರಾಜ ತೋಂಡಿಹಾಳ, ಶರಣಪ್ಪ ಶೊಂಠಿ, ಅಂದಪ್ಪ ಕಿನ್ನಾಳ, ಭಾಷುಸಾಬ ವಾಲಿಕಾರ , ಭೀಮಣ್ಣ ಜರಕುಂಟಿ, ದೇವಪ್ಪ ಹಳ್ಳಿಕೇರಿ, ಅಂಬರೇಶ ಚಿಕ್ಕಗೌಡ್ರ ಸೇರಿದಂತೆ ಇತರರು ಇದ್ದರು. ಲಿಂಗನಬಂಡಿಯ ಹನುಮಂತಪ್ಪ ಆಂಧ್ರಪ್ರದೇಶದ ಮೌನೇಶ ಕುಮಾರ ಸಂಗೀತ ಸೇವೆ ನೀಡಿದರು.
ಪ್ರಕಾಶ ರಾವಣಕಿ ವಂದಿಸಿದರು.
ನಂತರ ಮಹಾಪ್ರಸಾದ ಜರುಗಿತು.
ಜ.೧೭ ರಂದು ೩೮೨ ನೇ ಶಿವಾನುಭವ ಗೋಷ್ಠಿ, ಜ.೨೦ ರಂದು ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ,
ಜ.೨೧ ರಂದು ಗುಡ್ಡಕ್ಕೆ ಆರತಿ ಬೆಳಗುವದು,
ಜ.೨೨ ರಂದು ಶ್ರೀ ಚಂದ್ರಾಬಿಕಾದೇವಿಗೆ ಅಭೀಷೇಕ,
ಜ.೨೩ ರಂದು ಶ್ರೀ ಭೀಮಾಂಬಿಕಾದೇವಿಯ ರಥೋತ್ಸವ ಜರುಗುವದು,
ಜ.೨೩ ರಂದು ರಾತ್ರಿ ೧೦ ಗಂಟೆಗೆ ಡಾ.ಪ್ರಕಾಶ ರಾವಣಕಿ ವಿರಚಿತ ಪ್ರಥಮ ಕಾಣಿಕೆ ” ಸಿಹಿ ಮುತ್ತಿನ ಕಾಣಿಕರ” ಎಂಬ ನಾಟಕ ಪ್ರದರ್ಶನವಾಗುವದು.
ಈ ಜಾತ್ರೋತ್ಸವದಲ್ಲಿ ಬೂನಕೊಪ್ಪ ಗ್ರಾಮದವರಿಂದ ಕಳಸದ ಸೇವೆ, ಜಿ.ಜರಕುಂಟಿ ಭಕ್ರರಿಂದ ಹಗ್ಗದ ಸೇವೆ, ಜಿ.ವೀರಾಪೂರ ಗ್ರಾಮದವರಿಂದ ಜಾನಗೋರಡದ ಸೇವೆ, ದಮ್ಮೂರದ ಮರಿಯಪ್ಪ ರಾ.ಲಕ್ಕಲಕಟ್ಟಿ ಕುಟುಂಬದವರಿಂದ ಮಹಾ ರಥೋತ್ಸವಕ್ಕೆ ಹೂವಿನ ಹಾರದ ಸೇವೆ ಹಾಗು ತಾಲೂಕಿನ ಸುತ್ತ ಮುತ್ತಲಿನ ಭಕ್ತರಿಂದ ಸಹಾಯ ಸಹಕಾರದೊಂದಿಗೆ ಜರುಗುವುದು ಶ್ರೀ ಭೀಮಾಂಬಿಕಾದೇವಿ ಜಾತ್ರಾ ಮಹೋತ್ಸವ ಹಾಗೂ ಶಿವಾನುಭವ ಸಮಿತಿಯವರು ಯಶಸ್ವಿಗೊಳಿಸಲು ವಿನಂತಿಸಿದ್ದಾರೆ.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!