ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಓದುವ ಹಂಬಲಕೆ

ಓದಬೇಕಿದೆ ಹಂಬಲದಿ
ಅರಿವಿನ ಅರಮನೆಗೆ ಹೋಗಲು
ಬಿಗುವಿನ ವಾತಾವರಣ ನಿವಾರಿಸಲು
ಹಮ್ಮು ಬಿಮ್ಮು ಕಳಚಲು.

ಓದಬೇಕಿದೆ ಹಂಬಲದಿ
ಜಗದ ಜಂಜಡ ತಿಳಿಯಲು
ಬದುಕಿನ ಭಾರ ಹೊರಲು
ಜಗದ ನಿಯಮ ಗುರುತಿಸಲು.

ಓದಬೇಕಿದೆ ಹಂಬಲದಿ
ಕೆದಕಿದ ಮನವ ಹಸನುಗೊಳಿಸಲು
ಬಿಸಾಡಿದವರ ಬೆನ್ನತ್ತಿ ಬರಲು
ಮಾರು ದೂರ ಸರಿದವರು ಅಪ್ಪಿಕೊಳ್ಳಲು

ಓದ ಬೇಕಿದೆ ಹಂಬಲದಿ
ಕಳವಳವ ಬದಿಗಿರಿಸಲು
ಕಳಕಳಿಯ ಮನವಿ ಮಾಡಲು
ಕಳೆಗಟ್ಟಿ ನಿಲ್ಲಲು.

ಓದಬೇಕಿದೆ ಹಂಬಲದಿ
ಜಾಗೃತ ಚರ್ಚೆ ನಡೆಸಲು
ವ್ಯಾಧಿ ಗುಣ ಪಡಿಸಬಹುದು
ಸುಸಂಸ್ಕೃತ ಸಮಾಜ ನಿರ್ಮಿಸಲು.

ಓದ ಬೇಕಿದೆ ಹಂಬಲದಿ
ಮನದ ಗೋಡೆ ಕೆಡವಲು
ಮುನಿದವರು ಜನಜನಿತವಾಗಲು
ಜರಿದ ಜನಕೆ ಪಾಠ ಕಲಿಸಲು

ಓದ ಬೇಕಿದೆ ಹಂಬಲದಿ
ನಿರ್ಲಕ್ಷಿಸಿದವರ ಗಮನ ಸೆಳೆಯಲು
ನಿರ್ವಹಿಸುವ ಕಾರ್ಯ ಸಫಲವಾಗಲು
ನಿರಕ್ಷರನು ಸುರಕ್ಷತೆಗೆ ಒಯ್ಯಲು.

ಓದಬೇಕಿದೆ ಹಂಬಲದಿ
ಆತ್ಮ ತೃಪ್ತಿಪಡಿಸಲು
ಆತ್ಮ ವಿಶ್ವಾಸ ಪಡೆಯಲು
ಪರಮಾತ್ಮನ ಸಾಕ್ಷಾತ್ಕರಿಸಲು

ಓದಬೇಕಿದೆ ಹಂಬಲದಿ
ಗುರಿಯ ಕಡೆಗೆ ಪಯಣಿಸಲು
ಪ್ರಯತ್ನದ ಫಲವ ಬಯಸಲು
ಸಿರಿ ಗರಿಯ ಭಾರ ಇಳಿಸಲು.

ಓದ ಬೇಕಿದೆ ಹಂಬಲದಿ
ತರಾವರಿ ಮೋಹ ಸರಿಸಲು
ತಾರೆಗಳಂತೆ ಮಿನುಗಲು
ಸಾಧನೆಯ ಶಿಖರ ಏರಲು

ಓದ ಬೇಕಿದೆ ಹಂಬಲದಿ
ಸಮಾಜ ಮಾನ್ಯ ಮಾಡಲು
ಸಮಾನ ಅವಕಾಶ ಪಡೆಯಲು
ಬಿಗುಮಾನ ಬಿಟ್ಟು ಇರಲು.

ನವ್ಯ ದಾರಿ ಹುಡುಕಲು
ಆತ್ಮ ವಿಮರ್ಶೆ ಮಾಡಲು
ಸರಿಯಾದ ಉತ್ತರ ಕಂಡುಕೊಳ್ಳಲು

ಓದ ಬೇಕಿದೆ ಹಂಬಲದಿ
ಬಾ ನೆತ್ತರದ ಕನಸು ಕಾಣಲು
ಕನಸು ನನಸಾಗಿಸಲು
ಆರ್ಥಿಕತೆ ಚೇತರಿಸಲು

ಓದ ಬೇಕಿದೆ ಹಂಬಲದಿ
ಸಮರ್ಥ ನಾಯಕತ್ವ ಪಡೆಯಲು
ನಾನಾರ್ಥ ತಿಳಿಯಲು
ಒಂದೆಂದು ಸಾಬೀತು ಪಡಿಸಲು.

ಓದ ಬೇಕಿದೆಹಂಬಲದಿ
ಸಂಧಾನದ ರುಚಿಯ ಅನುಭವಿಸಲು
ವ್ಯವಧಾನದ ಹಿರಿಮೆ ತಿಳಿಸಲು
ವ್ಯವಹಾರದ ಬಗೆಯ ಅರಿಯಲು

ಓದ ಬೇಕಿದೆ ಹಂಬಲದಿ
ಸಫಲತೆಯ ಮಹಿಮೆ ಅರಿಯಲು
ವಿಫಲತೆಗೆ ಕಾರಣ ಹುಡುಕಲು
ಆಪತ್ತಿಗೆ ಪ್ರತ್ಯುತ್ತರಿಸಲು

ಓದಬೇಕಿದೆ ಹಂಬಲದಿ
ಮನೋಬಲದಿ ಝೇಂಕರಿಸಲು
ಅವಕಾಶ ಪಡೆಯಲು
ಸನ್ಮಿತಿಯ ಅನುಕರಿಸಲು.

  • ರೇಷ್ಮಾ ಕಂದಕೂರ ,ಶಿಕ್ಷಕಿ
    ಸಿಂಧನೂರು.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!