ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀ ಗುಡ್ಡಾಪುರದ ದಾನಮ್ಮ ದೇವಿಯ ಪುರಾಣ ಕಾರ್ಯಕ್ರಮ

ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 905ನೇ ಜಯಂತಿ ಉತ್ಸವದ ನಿಮಿತ್ಯ, ಶ್ರೀ ಗುಡ್ಡಾಪುರದ ದಾನಮ್ಮ ದೇವಿಯ ಪುರಾಣ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಉದ್ಘಾಟನೆಯನ್ನು ಪೂಜ್ಯಶ್ರೀ ಷಟ್ ಸ್ಥಲ ಬ್ರಹ್ಮ ರೇವಣಸಿದ್ಧ ಶಿವಾಚಾರ್ಯರು ರೇವಣಸಿದ್ದೇಶ್ವರ ಹಿರೇಮಠ,
ಪೂಜ್ಯಶ್ರೀ ನೀಲಕಂಠ ದೇವರು ದೊಡ್ಡ ಮಠ ರಟಕಲ್ ನೆರವೇರಿಸಿದರು.
ಇಂದಿನ ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡ ಶ್ರೀ ರೇವಣಸಿದ್ದ ಶರಣರು ಗೌರಿಗುಡ್ಡ ಮಾತನಾಡಿ ದಾನಮ್ಮ ದೇವಿಯ ಪುರಾಣ ಕೇಳಿ ಜೀವನದಲ್ಲಿ ಒಳ್ಳೆಯ ವಿಚಾರಗಳನ್ನು ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ, ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡುವುದು ತಂದೆ ತಾಯಿಯರ ಕರ್ತವ್ಯ ಐದಾರು ದಿನಗಳ ಪರ್ಯಂತರ ಈ ಕಾರ್ಯಕ್ರಮ ನಡೆಯುತ್ತದೆ ಸೋಮವಾರದಂದು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮವಿದೆ, ಬುಧವಾರ 14ರಂದು ಸಾಯಂಕಾಲ 5:00 ಧರ್ಮ ಸಭೆ ಜರುಗುವುದು ಎಂದರು.

ವೀರಣ್ಣ ಗಂಗಾಣಿ ರೈತ ಮುಖಂಡ ಮಾತನಾಡಿ, ಅಂಬಿಗರ ಚೌಡಯ್ಯನವರ 905ನೇ ಜಯಂತಿ ಉತ್ಸವ ರಟಕಲ್ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಪೂಜ್ಯ ರೇವಣಸಿದ್ದ ಶರಣರಿಗೆ ಸಮಾಜದ ಮುಖಂಡರಿಗೆ ಧನ್ಯವಾದಗಳನ್ನು ತಿಳಿಸಿ,ಅಂಬಿಗ ಅಂಬಿಗ ಎಂದು ಕುಂದು ನುಡಿಯದಿರಿ ಅಂಬಿಗನ ನಂಬಿದರೆ ಒಂದೇ ಹುಟ್ಟಿಲ್ಲಿ ಕಡೆಗೆ ಹಾಯಿಸುವ ನಮ್ಮ ನಿಜಶರಣ ಅಂಬಿಗರ ಚೌಡಯ್ಯ ಎoಬ ವಚನ ಹೇಳಿದರು. ಶಿವಶರಣಪ್ಪ ಗುತ್ತೇದಾರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ಕಾಳಗಿ ಶಾಮರಾವ ಕಡಬೂರು ಪ್ರವಚನಕಾರರು ಕಾಳಗಿ, ಮಾತನಾಡಿದರು, ಶಿವಶರಣಪ್ಪ ನಾರಂಜಿ ಕಂದಗೂಳ, ಗ್ರಾಮ ಪಂಚಾಯತಿ ಸದಸ್ಯರಾದ ಶರಣಮ್ಮ ಅರಣಕಲ, ಸಂಗೀತಾ ಕಿಣ್ಣಿ, ನೀಲಕಂಠ ಕೊಡದೂರ, ಪ್ರಕಾಶ ಹುಳಗೇರರಾ ಕೂಲಿ ಸಮಾಜ ಮುಖಂಡರು, ಬಸವರಾಜ ತಳವಾರ, ಹಾಗೂ ಮಲ್ಲು ಮರುಗುತ್ತಿ, ಕೂಲಿ ಸಮಾಜ ಯುವ ಮುಖಂಡರು ರಟಕಲ್, ನಿರೂಪಣೆ ಮಲ್ಲು ಚಿಕ್ಕಅಗಸಿ ಹಾಗೂ ಗ್ರಾಮದ ಮುಖಂಡರು, ತಾಯಂದಿರು ಇದ್ದರು.

ವರದಿ ಎಸ್. ವಿ. ಗಂಗಾಣಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!