
ತುಮಕೂರು ಜಿಲ್ಲೆಯ ಒಂದು ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಉಪ ಪೊಲೀಸ್ ಠಾಣೆಯ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಕೊರಟಗೆರೆಯ ಪಿಎಸ್ಐ ತೀರ್ಥೇಶ್ ರವರು ವಾಹನದ ಮಾಲೀಕರು ಡ್ರೈವರ್ ಗಳು ಸಾರ್ವಜನಿಕರು ಕಡ್ಡಾಯವಾಗಿ ರಸ್ತೆ ನಿಯಮಗಳನ್ನು ಪಾಲಿಸಬೇಕು ವಾಹನಗಳಿಗೆ ಸೈನಿಂಗ್ ಬೋರ್ಡ್ ಗಳು ಕಾಣುವಂತಿರಬೇಕು ಎಂದು ತಿಳಿಸಿದರು.
ತಾಲೂಕಿನಲ್ಲಿ ಅನೇಕ ಅಪಘಾತಗಳು ಮನುಷ್ಯನ ಬೇಜವಾಬ್ದಾರಿ ತಪ್ಪುಗಳಿಂದ ಆಗುತ್ತವೆ . ಅಪಘಾತದಲ್ಲಿ ಅಮಾಯಕ ಜನರ ಜೀವ ಕಳೆದುಕೊಂಡು ಅವರನ್ನು ಅವಲಂಬಿಸಿದ ಕುಟುಂಬಗಳು ಬೀದಿಪಾಲಾಗುತ್ತವೆ. ವಾಹನದ ಚಾಲಕರು ವಾಹನ ಚಲಾಯಿಸುವಾಗ ತಮ್ಮ ಕುಟುಂಬದ ಬಗ್ಗೆ ಯೋಚಿಸಿ ಸುರಕ್ಷತ ಕ್ರಮಗಳಾದ ಸಿಗ್ನಲ್ ಇಂಡಿಕೇಶನ್ ಹೆಲ್ಮೆಟ್ ನಿಧಾನವಾಗಿ ಚಾಲನೆ ಮಾಡುವುದನ್ನು ಕಲಿಯಬೇಕು ಕುಡಿದು ವಾಹನ ಚಾಲನೆ ಮಾಡಬಾರದು ರಸ್ತೆ ನಿಯಮಗಳನ್ನು ಸಂಚಾರ ಚಿನ್ಹೆಗಳನ್ನು ಚೆನ್ನಾಗಿ ಹರಿತು ನೋಡಿ ವಾಹನಗಳನ್ನು ನಡೆಸಬೇಕು ಎಂದು ಸಾರ್ವಜನಿಕರಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಪಿ ಎಸ್ ಐ ತೀರ್ಥೇಶ್ ಹೊಳವನಹಳ್ಳಿ ಉಪಪೊಲೀಸ್ ಠಾಣೆಯ ಎ ಎಸ್ ಐ ನಾಗರಾಜಯ್ಯ ಡ್ರೈವರ್ ಗಳು ಟ್ರ್ಯಾಕ್ಟರ್ ಮಾಲೀಕರು, ಸಾರ್ವಜನಿಕರು ಇದ್ದರು.
ವರದಿ : ಪ್ರಸನ್ನ ಕುಮಾರ್ ಎಸ್ ಕೊರಟಗೆರೆ




















