ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಂಪ್ಲಿಯಲ್ಲಿ ಅದ್ಧೂರಿಯಾಗಿ ನಡೆದ ಹಿಂದೂ ಸಮ್ಮೇಳದ ಶೋಭಾ ಯಾತ್ರೆ

ಕಂಪ್ಲಿ: ಹಿಂದೂ ಸಮ್ಮೇಳನದ ಹಿನ್ನಲೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಶೋಭಾ ಯಾತ್ರೆ ಮೆರವಣಿಗೆ ಸಕಲ ವಾದ್ಯಗಳೊಂದಿಗೆ ವಿಜೃಂಭಣೆಯಿಂದ ಸೋಮವಾರ ನಡೆಯಿತು.
ಇಲ್ಲಿನ ಉದ್ಭವ ಗಣಪತಿ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ನಡುವಲ ಮಸೀದಿ, ಡಾ.ರಾಜಕುಮಾರ ಮುಖ್ಯರಸ್ತೆ, ಮಾರೆಮ್ಮಗುಡಿ, ಅಂಬೇಡ್ಕರ್ ವೃತ್ತ, ಮಹಾತ್ಮಗಾಂಧಿ ವೃತ್ತ, ಕೊಟ್ಟಾಲ್ ರಸ್ತೆ ಮುಖೇನ ಕಮ್ಮವಾರಿ ಭವನದ ಎದುರುಗಡೆಯಲ್ಲಿರುವ ಮುರಳಿಕೃಷ್ಣ ರೈಸ್ ಮಿಲ್ ಮುಂಭಾಗದಲ್ಲಿ ಸಮಾವೇಶಗೊಂಡ ನಂತರ ವೇದಿಕೆ ಕಾರ್ಯಕ್ರಮ ಜರುಗಿತು. ಇಲ್ಲಿನ ಯಾತ್ರಾ ಮೆರವಣಿಗೆಯಲ್ಲಿ ತಾಷಾರಾಂಡೋಲ್ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಮೆರಗು ನೀಡಿದವು. ಮಹಾನ್ ನಾಯಕರ ಛದ್ಮವೇಷದಲ್ಲಿ ಮಕ್ಕಳು ಶೃಂಗಾರಗೊಂಡು ಎಲ್ಲರ ಗಮನ ಸೆಳೆದರು.
ಈ ಸಮ್ಮೇಳದ ಯಾತ್ರೆಯಲ್ಲಿ ಹಿಂದೂ ಸಮ್ಮೇಳನದ ಕಂಪ್ಲಿ ಮಂಡಲದ ಅಧ್ಯಕ್ಷ ಎನ್.ಎಂ.ಪತ್ರೆಯ್ಯಸ್ವಾಮಿ, ಕಾರ್ಯದರ್ಶಿ ಎಂ.ಶ್ರೀನಿವಾಸ ಶ್ರೇಷ್ಠಿ, ಖಜಾಂಚಿ ಎನ್.ಎಸ್.ಗೋವಿಂದ್, ಮುಖಂಡರಾದ ಅರವಿ ಬಸವನಗೌಡ, ಡಿ.ವಿ.ಸುಬ್ಬಾರಾವ್, ಡಿ.ಮೌನೇಶ ಆಚಾರ್, ಕಲ್ಯಾಣಚೌಕಿಮಠದ ಬಸವರಾಜ ಶಾಸ್ತ್ರಿ, ಡಿ.ವಿ.ಸತ್ಯನಾರಾಯಣ, ವಾಲಿ ಕೊಟ್ರಪ್ಪ, ಎಸ್.ಚಂದ್ರಶೇಖರಗೌಡ, ಶಶಿಧರ್, ಶಿವರಾಜ್, ಕೃಷ್ಣ ಎಸ್.ಪೋಳ್, ಅನುಪಮಾ, ಬಿ.ಎಂ.ಪುಷ್ಪಾ, ಶಿಲ್ಪಾ, ರಾಜು, ಎಚ್.ನಾಗರಾಜ, ನಾರಾಯಣಪ್ಪ, ಬಸವರಾಜ, ಮಂಜೇಶ್, ಚಿರಂಜೀವಿ, ರಘುರಾಮ್, ಪ್ರಕಾಶ್, ವೀರೇಶ್, ಶಂಕರ್, ಜೆ.ದೇವರಾಜ್, ಕರಿಬಸಯ್ಯಸ್ವಾಮಿ ಸರ್ವ ಸಮುದಾಯದವರಿದ್ದರು.

ಬಂದೋಬಸ್ತ್:
ಇಲ್ಲಿನ ಹಿಂದೂ ಸಮ್ಮೇಳನದ ಹಿನ್ನಲೆ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ತೋರಣಗಲ್ಲು ಡಿವೈಎಸ್‌ಪಿ ಪ್ರಸಾದ್ ಗೋಕುಲೆ ನೇತೃತ್ವದಲ್ಲಿ ಕಂಪ್ಲಿ ಪಿಐ ಕೆ.ಬಿ.ವಾಸುಕುಮಾರ ಮುಂದಾಳತ್ವದಲ್ಲಿ ಡಿವೈಎಸ್‌ಪಿ, ಮೂವರು ಇನ್ಸ್ಫೆಕ್ಟರ್, 10 ಜನ ಪಿಎಸ್‌ಐ, 10 ಜನ ಎಎಸ್‌ಐ, 70 ಜನ ಎಚ್‌ಸಿ-ಪಿಸಿ, 31 ಜನ ಗೃಹರಕ್ಷಕದಳದವರು, ಒಂದು ಐಆರ್‌ಬಿ ತುಕಡಿ(21ಜನ) ಸೇರಿದಂತೆ ಒಟ್ಟು 146 ಜನ ಪೊಲೀಸರನ್ನು ನಿಯೋಜಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿತ್ತು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!