ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮುಂದಿನ ಸಿಎಂ ಮಾನ್ಯ ಡಾಕ್ಟರ್ ಜಿ ಪರಮೇಶ್ವರ್ ರವರು ಆಗಲೆಂದು ಸರ್ವಧರ್ಮ ಗುರುಗಳಿಂದ ಸಾಮೂಹಿಕ ಪ್ರಾರ್ಥನೆ ಕಾರ್ಯಕ್ರಮ.

ಕೊರಟಗೆರೆ ಪಟ್ಟಣದ ಗಿರಿನಗರ ಸಮುದಾಯ ಭವನದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ನಯಾಜ್ ಅಹಮದ್ ಬಾಯ್ ರವರು ಮಾತನಾಡಿ ನಮ್ಮ ಜನಪ್ರಿಯ ಜನನಾಯಕ ಡಾಕ್ಟರ್ ಜಿ ಪರಮೇಶ್ವರ್ ರವರು ರಾಜ್ಯ ಕಂಡ ನಿಷ್ಠಾವಂತ ನಿಷ್ಕಳಂಕ ಪ್ರಬುದ್ಧ ರಾಜಕಾರಣಿ, ಕಾಂಗ್ರೆಸ್ ಪಕ್ಷದ ಬಲ ಪರಿವರ್ತನೆ ಮಾಡಿದ ನಮ್ಮ ಕ್ಷೇತ್ರದ ಶಾಸಕರಾದ ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಮಂತ್ರಿಗಳಾದ ಡಾ. ಪರಮೇಶ್ವರವರು ಸಿಎಂ ಆಗಬೇಕು ಸಾಮಾಜಿಕ ನ್ಯಾಯ ಸಮಾನತೆ ಹಾಗೂ ಸಂವಿಧಾನಾತ್ಮಕ ಮೌಲ್ಯಗಳಿಗೆ ಬದ್ಧರಾಗಿರುವ ನಾಯಕ. ಎಲ್ಲಾ ಧರ್ಮ,ಜಾತಿ ಭಾಷೆ ಎನ್ನುವ ಭೇದ ಭಾವವಿಲ್ಲದೆ ಜನರ ಪರವಾಗಿ ನಿಲ್ಲುವ ಅಪರೂಪದ ನಾಯಕ ಡಾಕ್ಟರ್ ಪರಮೇಶ್ವರ್ ರವರ ನಾಯಕತ್ವ ರಾಜ್ಯಕ್ಕೆ ಅಗತ್ಯವಾಗಿದೆ. ಅವರನ್ನು ದಲಿತರೆಂದು ಕಡೆಗಣಿಸಬಾರದು 40 ವರ್ಷ ಕಾಂಗ್ರೆಸ್ ಪಕ್ಷಕ್ಕೆ ಸೇವೆ ಸಲ್ಲಿಸಿದ ಜನನಾಯಕ ಜನಪ್ರಿಯ ಡಾ. ಪರಮೇಶ್ವರ್ ಸಿಎಂ ಆಗಬೇಕು ಎಂದು ಅವರ ಅಭಿಮಾನಿಗಳು ಕಾರ್ಯಕರ್ತರು ಸರ್ವಧರ್ಮ ಗುರುಗಳು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.
ಅವರು ಎರಡು ಬಾರಿ ಕೆಪಿಸಿಸಿ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷಕ್ಕೆ ಆಡಳಿತ ಮಾಡುವ ಅವಕಾಶವನ್ನು ಕಲ್ಪಿಸಿದರು ದಲಿತರ ಧ್ವನಿಯಾಗಿರುವ ಪರಂ ಸರ್ ಅವರು ಕರ್ನಾಟಕದ ಮುಖ್ಯಮಂತ್ರಿ ಆಗಬೇಕು ಆಗದಿದ್ದ ಪಕ್ಷದಲ್ಲಿ ಸರ್ವಧರ್ಮಗಳು ಮತ್ತು ಸಮಾಜ ಸೇವಕರು ಸರ್ವಧರ್ಮ ವೇದಿಕೆ ಗುರುಗಳು ನಾವು ಕೊರಟಗೆರೆಯಿಂದ ದಿಲ್ಲಿಯವರೆಗೆ ಹೋರಾಟ ಮಾಡುವುದಾಗಿ ಸಂದೇಶ ನೀಡಿದರು.
ಮಾಜಿ ಉಪಾಧ್ಯಕ್ಷರು ಪಂ.ಪಂ ಮಾಜಿ ಸದಸ್ಯರಾದ ಶ್ರೀಮತಿ ನೂರ್ ಜಾನ್ ಸೈಯದ್ ದಾವೂದ್ ಮತ್ತು ಸಮಾಜಸೇವಕರಾದ ಶ್ರೀಯುತ ಎಸ್.ಸದಾನಂದ ರವರ ನೇತೃತ್ವದಲ್ಲಿ ಹಾಗೂ ನಮ್ಮ ತಂಡದ ಸದಸ್ಯರು ಸಾರ್ವಜನಿಕರ ಸಹಕಾರದಿಂದ ಮಾನ್ಯ ಡಾಕ್ಟರ್ ಜಿ ಪರಮೇಶ್ವರ್ ರವರು ಮುಖ್ಯಮಂತ್ರಿ ಆಗಲೆಂದು ಸರ್ವಧರ್ಮ ಗುರುಗಳಿಂದ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು.
ಬೆಂಗಳೂರು ಸಪ್ತಗಿರಿ ಆಸ್ಪತ್ರೆ ಮತ್ತು ಕೊರಟಗೆರೆ ಸರ್ಕಾರಿ ಆಸ್ಪತ್ರೆಯ ನುರಿತ ತಜ್ಞ ವೈದ್ಯರು ಸಿಬ್ಬಂದಿಯಿಂದ ಕೂಲಿ ಕಾರ್ಮಿಕರು ವೃದ್ಧರು ಅಂಗವಿಕಲರು ವಿದ್ಯಾರ್ಥಿಗಳು ಹೆಣ್ಣುಮಕ್ಕಳು ಸೇರಿ 1370 ಬಡಜನ ವಿವಿಧ ಕಾಯಿಲೆಗೆ ಚಿಕಿತ್ಸೆ ಪಡೆದುಕೊಂಡರು. ಈ ಕಾರ್ಯಕ್ರಮದಲ್ಲಿ 2000 ಜನ ಭಾಗವಹಿಸಿದ್ದರು, ಭೋಜನ ವ್ಯವಸ್ಥೆ ಮಾಡಲಾಗಿತ್ತು
ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ ರೈಲ್ವೆ ಸಮಿತಿ ನಾಮಿನಿ ನಿರ್ದೇಶಕ ಜಿಎಂ ಕಾಮರಾಜು ರವರು ಸಾಮಾಜಿಕ ಹೋರಾಟಗಾರ ಟೈಗರ್ ನಾಗ್ ರವರು
ಕೀಲು ಮತ್ತು ಮೂಳೆ ತಜ್ಞರಾದ ಡಾ. ಪುರುಷೋತ್ತಮರವರು ನೂತನವಾಗಿ ಆಯ್ಕೆಯಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀಯುತ ನರಸಿಂಹಮೂರ್ತಿ.v.k ರವರು ತಾಲೂಕು ಪ್ರಧಾನ ಕಾರ್ಯದರ್ಶಿ ಮತ್ತು ಪತ್ರಕರ್ತರಾದ ಶ್ರೀಯುತ ಡಿ.ಎಂ ರಾಘವೇಂದ್ರ ರವರು ಪತ್ರಕರ್ತರಾದ ಶ್ರೀಯುತ ಹರೀಶ್ ಬಾಬು ರವರು ಶ್ರೀಯುತ ರಾಜುರವರು ಶ್ರೀಯುತ ಅರುಣ್ ಕುಮಾರ್ ಸಮಾಜಸೇವಕರಾದ ಶ್ರೀಯುತ ಮೆಡಿಕಲ್ ಪ್ರಸನ್ನ ಕುಮಾರ್ ರವರುತಾಲೂಕು ಕುರುಬರ ಸಂಘದ ಅಧ್ಯಕ್ಷರಾದ ಕುರುಡುಗಾನಹಳ್ಳಿ ಶ್ರೀಯುತ ರಂಗಣ್ಣ ರವರು ತಾಲೂಕು ಮಡಿವಾಳ ಸಮುದಾಯದ ಅಧ್ಯಕ್ಷರಾದ ಶ್ರೀಯುತ ರುದ್ರೇಶ್ ರವರು ನಿವೃತ್ತ ಕಂದಾಯ ಅಧಿಕಾರಿ ಶ್ರೀಯುತ ನಾಗರಾಜ್, ಸಮಾಜ ಸೇವಕರಾದ ಗರಗದೊಡ್ಡಿ ವೀರೇಂದ್ರ ಪ್ರಸಾದ್ ಶ್ರೀ ನಾಗೇಂದ್ರ ಪ್ರಸಾದ್ ರವರು ನಮ್ಮ ಧಾರ್ಮಿಕ ಹಿರಿಯ ಮುಖಂಡರು ಪಾಷಾ ಜಾನ್ ಸಾಬ್ ರವರು ನಿವೃತ್ತ ಶಿಕ್ಷಕರು ದಲಿತ ಮುಖಂಡರು ರಾಮಣ್ಣನವರು ಮುಸ್ಲಿಂ ಧಾರ್ಮಿಕ ಗುರುಗಳಾದ ಸರ್ಫ್ರಾಜ್ ಖಾನ್, ಮಮ್ತಾಜ್, ಮಹಮ್ಮದ್ ರಿಜ್ವಾನ್, ಮುಖಂಡರಾದ ಅಬ್ದುಲ್ ಸುಭಾನ್, ಹಿಂದೂ ಧರ್ಮದ ಅರ್ಚಕರಾದ ಕಸ್ತೂರಿ ರವರು ಗುಂಡೂರಾವ್ ರವರು ಕ್ರೈಸ್ತ ಧರ್ಮದ ಚರ್ಚ್ ಫಾಸ್ಟರ್ ಸುರೇಶ್ ಬಾಬು ರವರು ಅಶೋಕ್ ರವರು ಮತ್ತು ಸಾರ್ವಜನಿಕರು ಹಾಜರಿದ್ದರು.

ವರದಿ : ಪ್ರಸನ್ನ ಕುಮಾರ್.ಎಸ್, ಕೊರಟಗೆರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!