ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜಲಚರ ಜೀವಿಗಳನ್ನು ರಕ್ಷಿಸಿ, ಜೀವ ಜಲವನ್ನು ಉಳಿಸಿ : ಶರಣಬಸಪ್ಪ ದಾನಕೈ

ಕೊಪ್ಪಳ : ಮಕರ ಸಂಕ್ರಾಂತಿಯ ಅಂಗವಾಗಿ ಸುಕ್ಷೇತ್ರ ತಿಂಥಣಿ ಮೌನೇಶ್ವರ, ಧರ್ಮಸ್ಥಳದ ಮಂಜುನಾಥ ಸ್ವಾಮಿ, ಶ್ರೀ ಏಳು ಕೋಟಿ ಮಲ್ಲಯ್ಯ ದೇವಸ್ಥಾನ, ಕೂಡಲ ಸಂಗಮ ಕ್ಷೇತ್ರ, ಹುಲಿಗೆಮ್ಮ,ಯಲ್ಲಮ್ಮ ದೇವಸ್ಥಾನ ಹೀಗೆ ರಾಜ್ಯದ ವಿವಿಧ ಪುಣ್ಯ ತೀರ್ಥ ಕ್ಷೇತ್ರಗಳಲ್ಲಿ ಮಕರ ಸಂಕ್ರಾಂತಿಯ ಹಬ್ಬದಂಗವಾಗಿ ಪವಿತ್ರವಾದ ನದಿಗಳಲ್ಲಿ ಸ್ನಾನ( ಜಳಕ) ಮಾಡುವಾಗ ವಿವಿಧ ಶಾಂಪೂ, ವಿಷಕಾರಕ ಸಾಬೂನು ಬಳಸಿ ವಿಷಸ್ನಾನ ಮಾಡಿ ಜಲಚರ ಜೀವಿಗಳನ್ನು ನಾಶ ಮಾಡುತ್ತಿದ್ದೇವೆ ಆದ್ದರಿಂದ ನಾವು ಪುಣ್ಯ ಕ್ಷೇತ್ರದಲ್ಲಿ ಪುಣ್ಯ ಸ್ನಾನ ಮಾಡುವಾಗ ಕಡಲೆ ಹಿಟ್ಟಿನಿಂದ ಸ್ನಾನ ಮಾಡಿ ಜಲಚರ ಜೀವಿಗಳನ್ನು ರಕ್ಷಿಸಿ, ಜೀವ ಜಲವನ್ನು ಉಳಿಸುವಲ್ಲಿ ಒಂದು ಸಣ್ಣ ಪ್ರಯತ್ನವನ್ನು ನಾವು ನೀವೆಲ್ಲರೂ ಮಾಡೋಣ ಎಂದು ಪರಿಸರ ಪ್ರೇಮಿ ಸಾಹಿತಿ ಶರಣಬಸಪ್ಪ ದಾನಕೈ ಯಲಬುರ್ಗಾ ಅವರು ಮನವಿ ಮಾಡಿದ್ದಾರೆ.
ಗಟಾರಗಳ ಮೂಲಕವಾಗಿ ಕೊಳಚೆ ನೀರು, ಇದರೊಂದಿಗೆ ಅಧಿಕೃತ ಹಾಗೂ ಅನಧಿಕೃತವಾಗಿ ಮಾರುವ ಮದ್ಯ ಪಾನೀಯಗಳ ಪ್ಲಾಸ್ಟಿಕ್ ಚೀಲಗಳು, ನೀರಿನ ಪ್ಲಾಸ್ಟಿಕ್ ಬಾಟಲಿ, ಪೌಚ್ ಗಳು ಇದರ ಜೊತೆಗೆ ಮನೆ, ಹೋಟೆಲ್, ರೆಸ್ಟೋರೆಂಟ್ ಹಾಗೂ ವಿವಿಧ ಕಂಪನಿಗಳಿಂದ ಬರುವ ಧೂಳು, ವಿಷ ಅನಿಲ ಸೋರಿಕೆಗಳಿಂದ ಬರುವ ನೀರು, ಹಾಗೂ ಸತ್ತ ಪ್ರಾಣಿಗಳಾದ ನಾಯಿ, ಕುರಿ, ಹಂದಿ, ಬೆಕ್ಕು, ಇಲಿ,ಹೆಗ್ಗಣ ಇನ್ನಿತರ ಪ್ರಾಣಿಗಳನ್ನು ಗಟಾರಕ್ಕೆ ಚೆಲ್ಲಿ ನಮ್ಮ ಕೈ ತೊಳೆದುಕೊಳ್ಳುತ್ತೇವೆ ಇದರಿಂದ ನೀರು ಹಳ್ಳ ,ಕೊಳ್ಳ,ಕೆರೆ,ನದಿ ಸೇರಿ ಅದರಲ್ಲಿರುವ ಮೀನು ಇತರ ಜೀವ ಸಂಕುಲ ನಾಶವಾಗುತ್ತದೆ, ಶುದ್ದ ಗಾಳಿ,ನೀರು,ಆರೋಗ್ಯ ಸಿಗಲಾರದೆ ನೂರು ವರ್ಷ ಬದುಕಿ ಬಾಳಬೇಕಾದವರು ಹಲವಾರು ರೋಗಗಳಿಗೆ ಸಿಲುಕಿ ೩೦ ವರ್ಷದೊಳಗೆ ಸಾವನ್ನು ತಂದು ಕೊಳ್ಳುತ್ತವೆ ಆದ್ದರಿಂದ ಯುವ ಸಮುದಾಯ, ಸಂಘಸಂಸ್ಥೆಗಳು, ಸರ್ಕಾರ ಜಾಗೃತಿ ವಹಿಸಿದಾಗ ಸುಂದರ ಪರಿಸರ ನಿರ್ಮಿಸಿ ಜಲಚರ ಜೀವಿಗಳನ್ನು ರಕ್ಷಿಸಿ ಜೀವ ಸಂಕುಲವನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ಕೊಪ್ಪಳ ಜಿಲ್ಲೆಯ ಪರಿಸರ ಪ್ರೇಮಿ ,ಸಾಹಿತಿ ಶರಣಬಸಪ್ಪ ದಾನಕೈ ಯಲಬುರ್ಗಾ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!