
ಕಲಬುರಗಿ/ ಕಾಳಗಿ: ರಟಕಲ್ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಗೆ ಅಭಿಷೇಕ ನೆರವೇರಿತು ತದ ನಂತರ ಉತ್ಸವ ಮೂರ್ತಿ ಮೆರವಣಿಗೆಗೆ ಚಾಲನೆ ನೀಡಿದ ಪರಮ ಪೂಜ್ಯ ಶ್ರೀ ನೀಲಕಂಠ ದೇವರು ವಿರಕ್ತ ಮಠ, ಹಾಗೂ ರೇವಣಸಿದ್ದ ಶರಣರು ಗೌರಿಗುಡ್ಡ ಗ್ರಾಮದ ಮುಖಂಡರು ಯುವಕರು.
ಉತ್ಸವ ಮೂರ್ತಿ ಅದ್ದೂರಿಯಾಗಿ ಮೆರವಣಿಗೆ ಮಾಡಿದರು ಎಂದು ಕಾರ್ಯಕ್ರಮದ ನೇತೃತ್ವ ವಹಿಸಿ ಸಿದ್ಧ ಶಿವಯೋಗಿಗಳು ಗೌರಿಗುಡ್ಡ ಶರಣರು ಮಾತನಾಡಿ ಎಳ್ಳು-ಬೆಲ್ಲ ತಿಂದು ಒಳ್ಳೇ ಮಾತಾಡಿ ಸೂರ್ಯನ ಸಂಚಾರವೇ ಸಂಕ್ರಾಂತಿ ಹಬ್ಬದ ಆಚರಣೆಯನ್ನು ನಿರ್ಧರಿಸುವಂಥದ್ದು. ಸೂರ್ಯ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುತ್ತಲೇ ಇರುತ್ತಾನೆ. ಇದನ್ನೇ ‘ಸಂಕ್ರಾಂತಿ’ ಎನ್ನುವುದು. ಹೀಗೆ ಅವನು ಮಕರರಾಶಿಯನ್ನು ಪ್ರವೇಶಿಸುವ ಸಮಯವನ್ನೇ ‘ಮಕರಸಂಕ್ರಾಂತಿ’ ಎಂದು ಕರೆಯುವುದು. ‘ಎಳ್ಳು-ಬೆಲ್ಲ ತಿಂದು ಒಳ್ಳೇ ಮಾತಾಡು’ ಎಂಬುದು ಸಂಕ್ರಾಂತಿಯ ಘೋಷವಾಕ್ಯ ಇಲ್ಲಿ ಒಳ್ಳೆಯ ಮಾತು-ಎಂದರೆ ಅದು ನಮ್ಮ ಹೊರಗಿನ ಪ್ರಕೃತಿಯನ್ನೂ, ಒಳಗಿನ ಪ್ರಕೃತಿಯನ್ನೂ ಬೆಳಗಬಲ್ಲ ಮಾತು ಎಂದರು. ಗ್ರಾಮದ ಪ್ರಮುಖ ಬೀದಿಯಲ್ಲಿ ಸುಮಾರು ಐದಾರು ಗಂಟೆಗಳ ಕಾಲ ಚೌಡಯ್ಯನವರ ಮೂರ್ತಿ ಭವ್ಯ ಮೆರವಣಿಗೆ ಬಾಜ ಭಜಂತ್ರಿ ಮತ್ತು ಡಿಜೆ ಹಚ್ಚಿ ಯುವಕರು ಜಯಂತಿ ಆಚರಿಸಿದರು.
ಈ ಸಂದರ್ಭದಲ್ಲಿ ವೇ, ಮೂ, ಶಂಭುಲಿಂಗಯ್ಯ ಶಾಸ್ತ್ರಿಯವರಿಗೆ ಅಂಬಿಗರ ರತ್ನ ಪ್ರಶಸ್ತಿ ಗೌರವಿಸಿದರು, ಮುಖ್ಯ ಅತಿಥಿಯಾಗಿ ನೀಲಕಂಠ ಗುತ್ತೇದಾರ್ ಕಾಳಗಿ, ಚೌಡಯ್ಯನ ಕಮಿಟಿಯ ಗೌರವಾಧ್ಯಕ್ಷರಾದ ಶಿವರಾಯ ಮುಜುಗೇರಿ, ಪ್ರಕಾಶ್ ಮನೆ, ಆನಂದ್ ಕಲೋಜಿ, ಶಂಕರ್ ಗುಲ್ಬರ್ಗ, ಪ, ಪಂ, ಸದ್ಧಸ್ಸಿ ಅಂಬಾಂವ ರಾಜಪುರ, ಮಂಗಲ ಚಿಕಅಗಸಿ ಭಾರತೀಯ ಆರ್ಮಿ, ವೀರೇಶ್ ಬುಕ್ಕಟಗಿ, ಅಭಿಜಿತ ಹುಲಸಗೂಡು, ಶ್ರೀಶೈಲ್ ಭೈರಪ್ಪ, ಮಲ್ಲು ಮರಗುತ್ತಿ, ಬಸವರಾಜ ತಳವಾರ, ವೈಜನಾಥ್ ಚಿಕ್ಕಬಿಸಿ ಸುನಿಲ್ ವಡೆದ, ಶರಣು ಹಣಕುಣಿ, ಕಾರ್ತಿಕ್, ಹನುಮಂತ, ಬಸವರಾಜ ವಾಡೆದ, ಮಲ್ಲು ಚಿಕಅಗಸಿ ನಿರೂಪಿಸಿದರು.
ವರದಿ ಎಸ್ ವಿ ಗಂಗಾಣಿ.




















