ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಂಕ್ರಾಂತಿ ಸುಗ್ಗಿ

ಸುಗ್ಗಿಯ ಸಂಭ್ರಮ ಸಂತಸವ ತಂದಿದೆ
ವರ್ಷದ ಮೊದಲು ಸಂಕ್ರಾಂತಿ ಬಂದಿದೆ
ನಾಡಿನ ಜನತೆಗೆ ಹೊಸತನ ಮೂಡಿದೆ
ರೈತರ ಮೊಗದಲಿ ಹರುಷವು ಕಂಡಿದೆ.

ಗರ್ಭ ಧರಿಸಿರೆ ಸಮೃದ್ಧದ ಫಸಲು
ಜಗವೆಲ್ಲ ಹರಡಿದೆ ಹಸಿರ ಹೊನಲು
ಮಾಯವು ಆಗಲು ಬಾಳಿನ ಕತ್ತಲು
ಕಾರಣವು ಎಳ್ಳು ಬೆಲ್ಲದ ಘಮಲು.

ಸಿಹಿ ಕಬ್ಬು ಕಡಲೆ ಅವರೆ ಗೆಣಸು
ಭಕ್ಷ್ಯ ಭೋಜನಕ್ಕೆ ಹಿಗ್ಗಿದೆ ಮನಸು
ಹೊಸ ವರ್ಷದ ಹಾದಿಯ ಕನಸು
ಈಡೇರಲು ಬದುಕೆಲ್ಲವೂ ಸೊಗಸು.

ದ್ವೇಷ ಮತ್ಸರಗಳು ಕರಗಿ ಹೋಗಲಿ
ನಮ್ಮ ಸಂಸ್ಕಾರ ಸದಾ ಉಳಿಯಲಿ
ಸೌಹಾರ್ದ ಬೀಜವು ಚಿಗುರಿ ನಿಲ್ಲಲಿ
ಕಹಿಯು ಕಳೆದು ಸಿಹಿಯು ಮರಳಲಿ.

ಹುದುಗಿ ಹೋಗಿ ಮನದೊಳ ವಿಕೃತಿ
ಹೊಮ್ಮಿ ಬರಲಿ ಧರ್ಮದ ಸಂಸ್ಕೃತಿ
ದೇವರು ಕೊಟ್ಟ ವರವು ಜಗದ ಪ್ರಕೃತಿ
ಉಳಿಸಲು ಮಾಡೋಣ ನಿತ್ಯ ಜಾಗೃತಿ.

  • ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
    ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!