ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಜೈನ್ ವಿ.ವಿ.ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ.

ಧಾರವಾಡ:ಜಾತಿನಿಂದನೆ ಮತ್ತು ದೇಶದ್ರೋಹ ಎಸಗಿದವರ ವಿರುದ್ದ ಕಠಿಣ ಕ್ರಮ ಹಾಗೂ ಜಾತಿವಾದಿ ಜೈನ್ ವಿವಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದಲಿತ ವಿದ್ಯಾರ್ಥಿ ಪರಿಷತ್ ಧಾರವಾಡ ಜಿಲ್ಲಾ ಘಟಕಧಾರವಾಡ ತಾಲ್ಲೂಕು ದಂಡಾಧಿಕಾರಿಗಳು ಹಾಗೂ ತಹಸೀಲ್ದಾರರ ಮೂಲಕ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಲಾಯಿತು.
ಇತ್ತೀಚೆಗೆ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಗುಂಪೊಂದು ಸ್ಕಿಟ್‌ವೊಂದರಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ದಲಿತ ಸಮುದಾಯದ ಬಗ್ಗೆ ಅಪಹಾಸ್ಯ ಮತ್ತು ಜಾತಿದ್ವೇಷದ ಅವಮಾನ ಮಾಡಲಾಗಿದ್ದು, ಇದು ಸ್ಪಷ್ಟವಾಗಿ,ಉದ್ದೇಶಪೂರ್ವಕವಾಗಿ ದೇಶದ್ರೋಹ ಮತ್ತು ಜಾತಿ ನಿಂದನೆಯ ಪ್ರಕರಣ ಹಾಗೂ ಇದು ಖಂಡನೀಯವಾಗಿದೆ.
ಜೈನ್ ವಿಶ್ವವಿದ್ಯಾಲಯದ “ಮ್ಯಾನೇಜ್‌ಮೆಂಟ್ ಸ್ಟಡೀಸ್” ಕೇಂದ್ರದ ಕಾಲೇಜು ತಂಡ ಜಾತಿವಾದವನ್ನು ಎತ್ತಿ ತೋರಿಸುವ ಮತ್ತು ಜಾತಿನಿಂದನೆಯ ಕೀಳು ಭಾಷೆಯನ್ನು ಬಳಸಿ ಸ್ಕಿಟ್ ಮಾಡಿ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಮತ್ತು ದಲಿತ ಸಮುದಾಯವನ್ನು ನೇರವಾಗಿ ಗೇಲಿ ಮಾಡಿ ಜಾತಿನಿಂದನೆ ಮಾಡಿರುತ್ತಾರೆ.
ಜೈನ್ ವಿಶ್ವವಿದ್ಯಾಲಯದ ಮ್ಯಾನೇಜ್‌ಮೆಂಟ್ ಸ್ಟಡೀಸ್ ಕೇಂದ್ರದ ಥಿಯೇಟರ್ ಗ್ರೂಪ್, ‘ದಿ ಡೆಲ್ರಾಯ್ಸ್ ಬಾಯ್ಸ್’, ‘ಮ್ಯಾಡ್-ಆಡ್ಸ್’ ನ ಭಾಗವಾಗಿ, ಫೆಸ್ಟ್‌ನಲ್ಲಿ ಅಂಬೇಡ್ಕರ್ ಮತ್ತು ದಲಿತ ಸಮುದಾಯದ ಕುರಿತು ಹಾಸ್ಯ ಮತ್ತು ಗೇಲಿ ಮಾಡುತ್ತ ಸ್ಕಿಟ್‌ನ್ನು ಪ್ರದರ್ಶಿಸಿದ್ದಾರೆ. ಇದು ಇಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸ್ಕಿಟ್ ನಲ್ಲಿ ಕೆಳ ಜಾತಿಯ ಹಿನ್ನೆಲೆಯ ವ್ಯಕ್ತಿಯೊಬ್ಬ ಮೇಲ್ಜಾತಿ ಮಹಿಳೆಯೊಂದಿಗೆ ಡೇಟಿಂಗ್ ಮಾಡಲು ಪ್ರಯತ್ನಿಸುತ್ತಿರುವುದನ್ನು ಪ್ರದರ್ಶಿಸಿದ್ದು, ಈ ವೇಳೆ ಆತ ತಾನು ದಲಿತ, ಕೆಳಜಾತಿಯವ ಅಥವಾ ಅಸ್ಪೃಶ್ಯ ಎಂದು ಹೇಳಿಕೊಂಡಾಗ ‘ಡೋಂಟ್ ಟಚ್ ಮಿ, ಟಚ್ ಮಿ’ ಎಂಬ ಹಾಡನ್ನು ಗೇಲಿ ಮಾಡುತ್ತಾ ಪ್ಲೇ ಮಾಡಿ ಉದ್ದೇಶಪೂರ್ವಕವಾಗಿ ಅವಮಾನಿಸಿರುತ್ತಾರೆ. ಇದಲ್ಲದೆ, ಬಿ.ಆರ್. ಅಂಬೇಡ್ಕರ್ ಅವರನ್ನು ‘ಬೀಯರ್ ಅಂಬೇಡ್ಕರ್’ ಎಂದು ಹೇಳಿ ಅತ್ಯಂತ ಕೀಳು ಮಟ್ಟದಲ್ಲಿ ಅವಮಾನಿಸಿರುತ್ತಾರೆ, ಇದರೊಂದಿಗೆ ಕೆಲವು ಜಾತಿ ನಿಂದನಾತ್ಮಕ ನುಡಿಗಟ್ಟುಗಳನ್ನು ಬಳಸಿರುತ್ತಾರೆ.
ಈ ದೇಶದ ಅತ್ಯುನ್ನತ ಪುರಸ್ಕಾರವಾದ ‘ಭಾರತರತ್ನ’ ಪಡೆದ ಹಾಗೂ ಈ ದೇಶಕ್ಕೆ ಸಂವಿಧಾನವನ್ನು ಕೊಟ್ಟ ಸಂವಿಧಾನಶಿಲ್ಪಿ ಮತ್ತು ಈ ದೇಶದ ಸಾಕ್ಷಿಪ್ರಜ್ನೆ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅತ್ಯಂತ ತುಚ್ಚವಾಗಿ ಅವಮಾನಿಸಿರುವುದು ದೇಶದ್ರೋಹವೆಂದೇ ಪರಿಗಣಿಸಬೇಕು. ಸಂವಿಧಾನದಲ್ಲಿ ಅಸ್ಪೃಶ್ಯತೆಯನ್ನು ತೊಡೆದುಹಾಕಿದ ಮೇಲೂ ಮತ್ತು ನಮ್ಮ ಕಾನೂನಿನಲ್ಲಿ ಅಸ್ಪೃಶ್ಯತೆ ಆಚರಿಸುವುದು ದಂಡಾರ್ಹ ಅಪರಾಧ ಎಂದು ತಿಳಿದಿದ್ದರೂ ಜೈನ್ ಕಾಲೇಜಿನ ಸದರಿ ವಿದ್ಯಾರ್ಥಿಗಳು ಜಾತಿನಿಂದನೆ ಮಾಡಿರುವುದು ಇಡೀ ಶೋಷಿತ ಸಮುದಾಯಗಳಿಗೆ ಅಪಾರ ನೋವು ಮತ್ತು ಅಪಮಾನ ಮಾಡಿರುವ ಅಪರಾದವಾಗಿದೆ ಆದ್ದರಿಂದ ಇದಕ್ಕೆ ಸಂಭಂದಿಸಿದವರ ವಿರುದ್ದ ತಕ್ಷಣವೇ ನಿಮ್ಮ ನೇತೃತ್ವದ ಘನ ಸರ್ಕಾರವು ದೂರು ದಾಖಲಿಸಿ ಕಾನೂನು ಕ್ರಮ ಕೈಗೊಂಡು ಇವರನ್ನು ಬಂಧಿಸಬೇಕು ಹಾಗೇಯೇ ಇಷ್ಟೆಲ್ಲಾ ಎಡವಟ್ಟು ಆಗಲು ಜೈನ್ ವಿಶ್ವವಿದ್ಯಾಲಯದ ಮೇಲಾಧಿಕಾರಿಗಳ ಪರೋಕ್ಷ ಬೆಂಬಲ ಇದೆ ಎಂಬದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನಿಸುವ ಮೂಲಕ ದೇಶ ವಿರೊಧಿ ಚಟುವಟಿಕೆ ನಡೆಸುತ್ತಿರುವ, ವಿದ್ಯಾರ್ಥಿ ಯುವಜನರ ಮೂಲಕ ದೇಶದಲ್ಲಿ ಅಶಾಂತಿ ಸೃಷ್ಟಿಲು ಯತ್ನಿಸುತ್ತಿರುವ ಈ ಜೈನ್ ವಿವಿ ವಿರುದ್ಧ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಈ ಜೈನ್ ವಿವಿ ಯಿಂದ ರಾಜ್ಯದಲ್ಲಿ ಸಾಮಾಜಿಕ ಅಸಮಾನತೆ ಬಿತ್ತುವ ಕಾರ್ಯಗಳಿಗೆ ಪರೊಕ್ಷವಾಗಿ ಸಹಮತಿ ನೀಡಿದಂತಾಗುತ್ತದೆ.
ಇವರ ವಿರುದ್ಧವೂ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದಲಿತ ವಿದ್ಯಾರ್ಥಿ ಪರಿಷತ್ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಧಾರವಾಡ ತಾಲ್ಲೂಕು ಮಾನ್ಯ ದಂಡಾಧಿಕಾರಿಗಳು ಹಾಗೂ ತಹಸೀಲ್ದಾರರ ಮೂಲಕ ಮಾನ್ಯ ಮುಖ್ಯಮಂತ್ರಿಗಳು ಶ್ರೀ ಬಸವರಾಜ ಬೊಮ್ಮಾಯಿ ಕರ್ನಾಟಕ ಸರ್ಕಾರ ಇವರಿಗೆ ಮನವಿ ಪತ್ರ ನೀಡಲಾಯಿತು.
ಈ ವೇಳೆ ಧಾರವಾಡ ಜಿಲ್ಲಾ ಸಂಚಾಲಕರಾದ ಹನುಮಂತ ದಾಸರ, ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಹಾಸಟ್ಟಿ, ಮಹಿಳಾ ಘಟಕದ ಜಿಲ್ಲಾ ಸಂಚಾಲಕರಾದ ದುರ್ಗಾ. ಎಚ್., ಪ್ರಧಾನ ಕಾರ್ಯದರ್ಶಿಗಳಾದ ಸರೋಜಾ ಕೊಟ್ಟೂರ, ತಾಲ್ಲೂಕು ಸಂಚಾಲಕಿಯಾದ ಶಾಂಭವಿ ಎಂ.,ಜಿಲ್ಲಾ ಮಾಧ್ಯಮ ವಕ್ತಾರರಾದ ಬಸವರಾಜ ಕರಿಗಾರ, ಸಹ ಸಂಚಾಲಕರಾದ ಶಶಿಕುಮಾರ ಬಾವಚಿ, ಸಾಮಾಜಿಕ ಜಾಲತಾಣ ಕಾರ್ಯದರ್ಶಿಗಳಾದ ರಾಕೇಶ್ ಆಯಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಶಿವರಾಜ ಮೋತಿ,ಧಾರವಾಡ ತಾಲೂಕು ಸಂಚಾಲಕರಾದ ಬಸವರಾಜ ವಾಲಿಕಾರ, ಹುಬ್ಬಳ್ಳಿ ತಾಲ್ಲೂಕು ಸಂಚಾಲಕರಾದ ರವಿ ಬೇವಿನಮಟ್ಟಿ, ಹನುಮನಗೌಡ, ಆಮೇಶ ಪರಪ್ಪಗೋಳ, ನಾಗರಾಜ ಮಾದರ, ರಾಹುಲ್ ದ್ರಾವಿಡ್ ಹಾಗೂ ಇನ್ನಿತರ ಪಧಾಧಿಕಾರಿಗಳು ಭಾಗಿಯಾಗಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ