ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಳ್ಳಾರಿಯಲ್ಲಿ ಬಿಜೆಪಿ ಬೃಹತ್ ಸಮಾವೇಶ: ಸರ್ಕಾರದ ವಿರುದ್ಧ ಗುಡುಗಿದ ಕೇಸರಿ ಪಡೆ

ಬಳ್ಳಾರಿ : ಬ್ಯಾನರ್ ತೆರವಿಗೆ ಸಂಬಂಧಿಸಿ ದಂತೆ ನಡೆದಿದ್ದ ಗಲಭೆ ಪ್ರಕರ ಣದ ಸಂಬಂಧ ಬಳ್ಳಾರಿಯ ಕಾಂಗ್ರೆಸ್ ಶಾಸಕ ನಾರ ಭರತರೆಡ್ಡಿ ಮತ್ತು ಅವರ ಬೆಂಬಲಿಗರನ್ನು ಬಂಧಿಸಬೇಕು ಮತ್ತು ಗಲಭೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಬಳ್ಳಾರಿಯಲ್ಲಿ ಶನಿವಾರ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಿತು.

ಬಳ್ಳಾರಿಯ ಎಪಿಎಂಸಿ ಮೈದಾನದಲ್ಲಿ ನಡೆದ ಈ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರತಿಪಕ್ಷ ನಾಯಕರುಗಳಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ಬಸ ವರಾಜ ಬೊಮ್ಮಾಯಿ, ಮಾಜಿ ಸಚಿವ ಶ್ರೀರಾಮುಲು, ಶಾಸಕ ಜನಾರ್ಧನರೆಡ್ಡಿ, ಮಾಜಿ ಶಾಸಕ ಸುರೇಶ ಬಾಬು ಸೇರಿದಂತೆ ಬಿಜೆಪಿಯ ಪ್ರಮುಖ ನಾಯ ಕರುಗಳು ಭಾಗಿಯಾಗಿ ನಗಾರಿ ಬಾರಿಸಿ, ಕಹಳೆ ಊದಿ ಸಮಾ ವೇಶಕ್ಕೆ ಚಾಲನೆ ನೀಡಿದರು.

ಈ ಸಮಾವೇಶ ಬಳ್ಳಾರಿ ಬಿಜೆಪಿಯ ಶಕ್ತಿ ಪ್ರದರ್ಶನಕ್ಕೂ ಸಾಕ್ಷಿಯಾಗಿದ್ದು, ಬೃಹತ್ ಸಂಖ್ಯೆಯಲ್ಲಿ ಕಾರ್ಯಕರ್ತರುಗಳು ಸಮಾವೇಶದಲ್ಲಿ ಭಾಗಿಯಾಗಿ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಿದರು.

ಬಳ್ಳಾರಿ ಗಲಭೆ ನಡೆದು 16 ದಿನಗಳಾದರೂ ಶಾಸಕ ಭರತ್ ರೆಡ್ಡಿಯನ್ನು ಬಂಧಿಸಿಲ್ಲ ಎಂದು ಸಮಾವೇಶದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿ, ಈ ಗಲಭೆಯ ತನಿ ಖೆಯನ್ನು ಸಿಬಿಐಗೆ ವಹಿಸಬೇಕು ಎಂಬ ಆಗ್ರಹವನ್ನು ಮಾಡಿದರು. ಬಳ್ಳಾರಿ ಗಲಭೆಗೆ ಭರತ್ ರೆಡ್ಡಿ ಯೇ ಕಾರಣ. ಆತನ ಅಂಗರಕ್ಷಕರು ಹಾರಿಸಿದ ಗುಂಡಿನಿಂದಲೇ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟಿದ್ದಾರೆ. ಇಷ್ಟಾದರೂ ಭರತ್ ರೆಡ್ಡಿಯನ್ನು ಬಂಧಿಸಿಲ್ಲ. ಸರ್ಕಾರ ಶಾಸಕ ಭರತ್ ರೆಡ್ಡಿಯ ರಕ್ಷಣೆಗೆ ನಿಂತಿದೆ ಎಂದು ಬಿಜೆಪಿಯ ನಾಯಕರುಗಳು ಕಿಡಿಕಾರಿದರು.

ಈ ಗಲಭೆಯ ಸತ್ಯಾಸತ್ಯತೆ ಹೊರ ಬರಲು ಸಿಬಿಐ ತನಿಖೆ ಯೇ ಸೂಕ್ತ. ರಾಜ್ಯ ಸರ್ಕಾರ ಕೂಡಲೇ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿ ಸಬೇಕು ಎಂದು ಪ್ರತಿಭಟ ನಾ ಸಮಾವೇಶದಲ್ಲಿ ಬಿಜೆಪಿ ನಾಯಕರು ಒತ್ತಾಯಿಸಿದರು.

ರೈತ, ಜನ, ಅಭಿವೃದ್ಧಿ, ಮಹಿಳಾ ವಿರೋಧಿ, ಎಂಬ ಘೋಷಣೆ, ಕುಸಿದ ಕಾನೂನು, ಸುವ್ಯವಸ್ಥೆ, ಕೊಲೆ ದರೋಡೆ, ಹದಗೆಟ್ಟ, ಭ್ರಷ್ಟ ಆಡಳಿತ, ಡ್ರಗ್ಸ್ ಮಾಫಿಯಾ, ದರ್ಪ ದೌರ್ಜನ್ಯ, ಬಳ್ಳಾರಿ ಪೈರಿಂಗ್ ಎಂಬ ಬರಹಗಳ ಮೂಲಕ ವೇದಿಕೆ ಗಮನ ಸೆಳೆಯಿತು.
ಸದಾ ಕಾಳು, ತರಕಾರಿ, ಹಮಾಲರು, ವ್ಯಾಪಾರಿಗಳಿಂದ ಕೂಡಿರುತ್ತಿದ್ದ ಇಲ್ಲಿನ ಎಪಿಎಂಸಿ ಮಾರುಕಟ್ಟೆ ಬಿಜೆಪಿ ಧ್ವಜ, ಮುಖಂಡರ ಬ್ಯಾನರ್ ಗಳು, ಕಾರ್ಯಕರ್ತ ರಿಂದ ರಾಜಕೀಯ ಮೈದಾನವಾಗಿ ಪರಿವರ್ತಿತಗೊಂಡಿತ್ತು.

ಲೋಕಸಭಾ ಚುನಾವಣೆಯ ನಂತರ ನಡೆದ ಬಿಜೆಪಿಯ ಇಂದಿನ ಬೃಹತ್ ಸಮಾವೇಶಕ್ಕೆ ಜಿಲ್ಲೆಯ ಎಲ್ಲೆಡೆಯಿಂದ ಮೂವತ್ತು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಬಂದವರಿಗೆ ಊಟದ ವ್ಯವಸ್ಥೆ ಸಹ ಮಾಡಿತ್ತು. ಎಲ್ಲರೂ ಕೇಸರಿ ಶಾಲು ಧರಿಸಿ ಕೂತಿದ್ದು ವಿಶೇಷವಾಗಿತ್ತು. ಸಮಾರಂಭದಲ್ಲಿ ಮಾಜಿ ಸಚಿವರಾದ, ಜಿ.ಕರುಣಾಕರ ರೆಡ್ಡಿ, ಮಾ ಜಿ ಸಂಸದರಾದ ಸಣ್ಣ ಫಕ್ಕೀರಪ್ಪ , ಮಾಜಿ ಶಾಸಕರಾದ ಜಿ.ಸೋ ಮಶೇಖರರೆಡ್ಡಿ, ಬಸವ ರಾಜ್ ದಡೇಸೂಗೂರು, ಮುಖಂಡ ರುಗಳಾದ ಡಾ.ಎಸ್. ಜಿ.ವಿ.ಮಹಿ ಪಾಲ್, ಪಿ.ಎಸ್. ಸೋಮಲಿಂಗ ನಗೌಡ, ಅವ್ವಾರು ಮಂಜುನಾ ಥ, ಕೆ.ಎಸ್. ದಿವಾಕರ್, ಹೆಚ್.ಹನುಮಂತಪ್ಪ, ಪಿ.ಪಾಲಣ್ಣ, ತಿಮ್ಮ ಪ್ಪ, ಗಣಪಾಲ ಐನಾಥ ರೆಡ್ಡಿ, ಸುರೇಖಾ ಮಲ್ಲನಗೌಡ, ಮಹೇಶರಸ್ವಾಮಿ, ಪಾಲಿಕೆ ಸದಸ್ಯರು, ಜಿಪಂ, ತಾ ಪಂ ಮಾಜಿ ಸದಸ್ಯರು ಪಕ್ಷದ ಪದಾಧಿಕಾರಿಗಳು, ಪಾಲ್ಗೊಂಡಿ ದ್ದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರತ್ಯೇಕ ಪಕ್ಷ ಕಟ್ಟಿ, ನಂತರ ಶ್ರೀರಾಮುಲು ವಿರುದ್ಧವೇ ಸಂಡೂರು ಉಪ ಚುನಾವಣೆಯ ಸೋಲಿನ ಹೊಣೆ ಹೊರಿಸಿ ಬಿರುಕಾಗಿದ್ದ ಬಳ್ಳಾರಿ ಬಿಜೆಪಿಯನ್ನು ಶಾಸಕ ಭರತ್ ರೆಡ್ಡಿ, ಬ್ಯಾನರ್ ಗಲಾಟೆ ಮೂಲಕ ಒಂದು ಗೂಡಿಸಿ ದಂತೆ ಇತ್ತು ಈ ಸಮವೇಶ.
ಇದರಿಂದ ಕಾರ್ಯಕರ್ತರಲ್ಲಿ ಹೊಸ ನಿರೀಕ್ಷೆ ಮೂಡಿದೆ ಎಂದರೆ ತಪ್ಪಾಗಲಾರದು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!