ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸುಂಠಾಣ ಪೂಜ್ಯರಿಗೆ ಒಂಬತ್ತನೇ ತುಲಾಭಾರ

ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಸುಂಠಾಣ ಗ್ರಾಮದಲ್ಲಿ ನೂತನ ಗುರುಭವನ ಲೋಕಾರ್ಪಣೆ ಹಾಗೂ ಮಹಾದಾಸೋಹಿ ಶ್ರೀ ಶರಣ ಬಸವೇಶ್ವರ ನಾಲ್ಕನೇ ದಿನದ ಪುರಾಣ ಕಾರ್ಯಕ್ರಮ ಜರುಗಿತು.

ಸೂಗೂರು ಗುರು ರುದ್ರಮುನೀಶ್ವರ ಹಿರೇಮಠ ಸುಂಠಾಣ ಶಾಖಾ ಮಠದ ನೂತನ ಗುರುಭವನ ಲೋಕಾರ್ಪಣೆ ನಿಮಿತ್ಯ ಮಹಾದಾಸೋಹಿ ಶರಣಬಸವೇಶ್ವರರ ಪುರಾಣವನ್ನು ಡಾ.ಶಾಂತ ವೀರ ಶಿವಾಚಾರ್ಯರು ಗಡಿಗೌಡಗಾವ ನಡೆಸಿಕೊಟ್ಟರು. ನಾಲ್ಕನೇ ದಿನದಂದು ಮಹಾದಾಸೋಹಿ ಶರಣಬಸವೇಶ್ವರರ ತೊಟ್ಟಿಲು ಕಾರ್ಯದಲ್ಲಿ ಸುಂಠಾಣ ಗ್ರಾಮದಲ್ಲಿ ಜನಿಸಿದ ಗಂಡು ಕೂಸಿಗೆ ತೊಟ್ಟಿಲಲ್ಲಿ ಹಾಕಿ ಶ್ರೀ ಶರಣಬಸವೇಶ್ವರ ಎಂದು ಹೆಸರಿಡಲಾಯಿತು. ನೂರಾರು ಹೆಣ್ಣು ಮಕ್ಕಳು ಮುತ್ತೈದೆಯರು ಭಾಗಿಯಾಗಿ ಬೆಳ್ಳಿಯ ಮಾವಿನಕಾಯಿ, ಉಡದಾರ, ಹಾಲುಗಡಗ, ಕೈಗಡಗ, ಹೀಗೆ ಅನೇಕ ಬೆಳ್ಳಿ ಸಾಮಾನಗಳು ಹಾಗೂ ಬಟ್ಟೆಗಳನ್ನು ಹಾಕಿ ಅದ್ದೂರಿಯಾಗಿ ತೊಟ್ಟಲು ಕಾರ್ಯದಲ್ಲಿ ಚಂದ್ರಕಲಾ ಮಾಲಿ ಬಿರಾದಾರ, ಬಸಮ್ಮ ಮಾಲಿ ಬಿರಾದಾರ, ಅರ್ಚನಾ ಪಾಟೀಲ್, ಜಗದೇವಿ ಬಿರಾದಾರ, ಗೀತಾ ಎಲ್ಮಡಗಿ, ಭಾಗ್ಯಶ್ರೀ ಪಾಟೀಲ್, ಮಹಾದೇವಿ ಪಾಟೀಲ್, ಸರಸ್ವತಿ ಬಸಶೆಟ್ಟಿ, ಅಕ್ಷತಾ ಬಿರಾದರ ಸೇರಿದಂತೆ ಗ್ರಾಮದ ಇನ್ನೂ ಅನೇಕ ಮಹಿಳೆಯರಿದ್ದರು.
ನಾಲ್ಕನೇ ದಿನದ ಪುರಾಣ ಕಾರ್ಯಕ್ರಮ ಮುಗಿದ ನಂತರ ಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನರುದ್ರಮನಿ ಶಿವಾಚಾರ್ಯರಿಗೆ ಶ್ರೀಯುತ ಶ್ರೀ ಶರಣು ಎಂ. ಸೀಗಿ ಉದ್ಯಮಿದಾರರು ರಟಕಲ್,
ಶ್ರೀ ಶಾಮರಾವ ಗಡೆದ ಕೆಪಿಟಿಸಿಎಲ್ ಹುಲಸುಗೂಡು, ಶ್ರೀ ಸಿದ್ದರಾಮೇಶ ಸಜ್ಜನ ಗುತ್ತಿಗೆದಾರರು ಸುಲೇಪೇಟ ಇವರಿಂದ ತುಲಾಭಾರ ಸೇವೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸದಾಶಿವ ಪಾಟೀಲ್, ವೀರಣ್ಣ ಗಂಗಾಣಿ, ಮಲ್ಲು ಮುಚ್ಚೆಟ್ಟಿ, ಸಂಜು ಕುಮಾರ ಪಡಶೆಟ್ಟಿ, ನಾಗಣ್ಣ ಕೋತಿನ, ಸಿದ್ದು ಅರಣಕಲ್, ಶಿವ ಕುರುಕೋಟಿ, ಅಂಬರೀಶ್ ಬಿರಾದಾರ್, ಪ್ರೇಮ್ ಎಲ್ಮಡಗಿ, ವೀರೇಶ್ ಇಟಗಿ, ಆಕಾಶ ಪಾಟೀಲ್, ಚಿತ್ರ ಬಡಿಗೇರ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ರಾಜು ಪಾಟೀಲ್ ನಡೆಸಿಕೊಟ್ಟರು.

ವರದಿ ಎಸ್. ವಿ. ಗಂಗಾಣಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!