ವಿಜಯಪುರ/ಮುದ್ದೇಬಿಹಾಳ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಡಿಹಾಳ ಶಾಲೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು. ಅಧ್ಯಕ್ಷತೆಯನ್ನು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶಾಂತಗೌಡ ಮಾಡಗಿ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರಾದ ಶಿವನಗೌಡ ಸಿದ್ದಪ್ಪಗೌಡ ಪಾಟೀಲ ನಾಗಪ್ಪ ಜಟ್ಟೆಪ್ಪ ಹಿರೇಕುರುಬರ ಯಲಗೂರದಪ್ಪ ಜಂಗಾಣಿ ಶಾಂತಪ್ಪ ಹಡ್ಲಗೇರಿ ಆನಂದ ಚಲವಾದಿ ನಿಜಶರಣ ಅಂಬಿಗರ ಚೌಡಯ್ಯ ಗೆಳೆಯರ ಬಳಗ ಗುಡಿಹಾಳದ ಸದಸ್ಯರಾದ ಶಿವಪ್ಪ ನಿಂಗಪ್ಪ ಅಂಬಿಗೇರ ಬಸಪ್ಪ ಕೋಲಕಾರ ಪರಶುರಾಮ ಅಂಬಿಗೇರ ಮಲ್ಲಣ್ಣ ಕೋಲಕಾರ ಪ್ರದೀಪ ಅಂಬಿಗೇರ ಕಲ್ಲಪ್ಪ ತಿಪ್ಪಣ್ಣ ಅಂಬಿಗೇರ ಬಸಪ್ಪ ಮಲ್ಲಪ್ಪ ಕೋಲಕಾರ ಸಹದೇವಪ್ಪ ಕೋಲಕಾರ ಮಹಾದೇವಪ್ಪ ನಿಂಗಣ್ಣ ಅಂಬಿಗೇರ ಸೋಮಪ್ಪ ಬಸಪ್ಪ ಕೋಲಕಾರ ಮಲ್ಲಿಕಾರ್ಜುನ ಅಂಬಿಗೇರ ಮಡಿವಾಳಪ್ಪ ಸಿದ್ದಪ್ಪ ಅಂಬಿಗೇರ ಮತ್ತು ಶಾಲಾ ಮುಖ್ಯ ಗುರುಗಳಾದ ಶ್ರೀ ಸಂಗಮೇಶ ನವಲಿ ಸಹ ಶಿಕ್ಷಕಿಯರಾದ ಲಕ್ಷ್ಮೀ ದೇವೇಂದ್ರಪ್ಪ ಮನಿಕಟ್ಟಿ ಹಾಗೂ ಅತಿಥಿ ಶಿಕ್ಷಕರಾದ ಶ್ರೀಮತಿ ಕಾಶಿಬಾಯಿ ಹಾದಿಮನಿ ಶಾಲಾ ಮುದ್ದು ಮಕ್ಕಳು ಉಪಸ್ಥಿತರಿದ್ದರು.
ಮಕ್ಕಳಿಗೆಲ್ಲಾ ಸಿಹಿಯನ್ನು ಹಾಗೂ ಸ್ಕೆಚ್ ಪೆನ್ ಕಿಟ್ ನ್ನು ನಿಜಶರಣ ಅಂಬಿಗರ ಚೌಡಯ್ಯ ಗೆಳೆಯರ ಬಳಗ ಗುಡಿಹಾಳದವರು ವಿತರಿಸಿದರು. ಮುಖ್ಯ ಗುರುಗಳಾದ ಶ್ರೀ ಸಂಗಮೇಶ ಶಾಂತಪ್ಪ ನವಲಿ ಮಾತನಾಡಿ “ಕಲ್ಲದೇವರ ಪೂಜೆಯ ಮಾಡಿ, ಕಲಿಯುಗದ ಕತ್ತೆಗಳಾಗಿ ಹುಟ್ಟಿದರು. ಮಣ್ಣದೇವರ ಪೂಜಿಸಿ ಮಾನಹೀನರಾದರು. ಮರವನ್ನು ದೇವರೆಂದು ಪೂಜಿಸಿ ಮಣ್ಣ ಕೂಡಿದರು. ದೇವರ ಪೂಜಿಸಿ ಸ್ವರ್ಗಕ್ಕೇರದೆ ಹೋದರು! ಜಗದ್ಭರಿತವಾದ ಪರಶಿವನೊಳಗೆ ಕಿಂಕರನಾದ ಶಿವಭಕ್ತನೆ ಶ್ರೇಷ್ಠನೆಂದಾತ ನಮ್ಮ ಅಂಬಿಗರ ಚೌಡಯ್ಯ” ಎನ್ನುವಂತೆ ದೇವರು ನಮ್ಮೊಳಗೆ ಇದ್ದಾನೆ ನಮ್ಮ ತಂದೆ ತಾಯಿ ಗುರುಹಿರಿಯರ ರೂಪದಲ್ಲಿ ಇದ್ದಾನೆ ಅವರನ್ನು ಗೌರವಿಸುವುದನ್ನು ಅಂಬಿಗರ ಚೌಡಯ್ಯನವರು ಹೇಳಿದ್ದಾರೆ ಎಂದು ಹೇಳಿದರು.
ಶ್ರೀಮತಿ ಕಾಶಿಬಾಯಿ ಹಾದಿಮನಿ ನಿರೂಪಿಸಿದರು. ಕುಮಾರಿ ಲಕ್ಷ್ಮೀ ದೇವೇಂದ್ರಪ್ಪ ಮನಿಕಟ್ಟಿ ಸ್ವಾಗತಿಸಿದರು.
ಕುಮಾರಿ ಶಾರದಾ ಮಾದರ ಹಾಗೂ ಸಂಗಡಿಗರು ಪ್ರಾರ್ಥಿಸಿದರು ಶ್ರೀ ಸಂಗಮೇಶ ಶಾಂತಪ್ಪ ನವಲಿ ವಂದಿಸಿದರು.
- ಕರುನಾಡ ಕಂದ ಪತ್ರಿಕೆ.




















