
ಕಲಬುರಗಿ : ತೊಗರಿ ನಾಡಿನ ತೊಗರಿ ಬೆಳೆಗಾರರಿಗೆ KMF ಮಾದರಿಯಲ್ಲಿ ತೊಗರಿ ಬೆಳೆಗಾರರ ಸಂರಕ್ಷಣೆಗಾಗಿ ಮಧ್ಯಂತರ ಪರಿಹಾರ ಹಣ ಬಿಡುಗಡೆ ಮಾಡಿ, ಬೆಳೆ ವಿಮೆ ಹಣ ಮಂಜೂರು ಮಾಡಲು ಗೊಡ್ಡು ಹೋದ ತೊಗರಿಗೆ ಪರಿಹಾರಕ್ಕಾಗಿ ಮತ್ತು ಅತಿವೃಷ್ಟಿ ಪರಿಹಾರದಲ್ಲಿ ತಾರತಮ್ಯ ಸರಿಪಡಿಸಿ, ರೈತರ ಸಾಲ ಮನ್ನಾ ಮಾಡಲು MSP ಬೆಂಬಲ ಬೆಲೆ ಕಾನೂನು ಜಾರಿಗಾಗಿ ಹೊರದೇಶದ ತೊಗರಿ ಮೇಲೆ 50 % ರಷ್ಟು ಇಂಪೊರ್ಟ್ ಡ್ಯೂಟಿ ಹಾಕಲು , ಗ್ರಾಮೀಣ ಪ್ರದೇಶದ ಜನ ವಿರೋಧಿ ಕೇಂದ್ರ ಸರ್ಕಾರ, MGNREGA ಯೋಜನೆ ಸಮರ್ಪಕವಾಗಿ ಜಾರಿಗಾಗಿ ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಕರೆದಿದ್ದು ಸ್ವಾಗತಾರ್ಹವಾಗಿದೆ ಆದರೆ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ಕೊಡಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರ ಬೇಡಿಕೆಗಳು ಈಡೇರಿಸಲು ಒತ್ತಾಯಿಸಿ ದಿನಾಂಕ 22/1/ ರಿಂದ 23/1/ ರವರೆಗೆ 2 ದಿನಗಳ ಕಾಲ ಪ್ರತಿಭಟನೆ ಅಹೋರಾತ್ರಿ ಎತ್ತಿನ ಬಂಡಿ ಹಾಗೂ ಟ್ಯ್ರಾಕ್ಟರ್ ಗಳು ರಸ್ತೆ ಮೆಲೆ ಇಟ್ಟು ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಧಿಕಾರಿ ಮೂಲಕ ಸಂಬಂಧಪಟ್ಟ ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಅತಿವೃಷ್ಟಿಗೆ ತುತ್ತಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ ರೈತರು ಕಂಗಾಲಾಗುವಂತೆ ಮಾಡಿದೆ ಬೆಳೆ ಸಮೀಕ್ಷೆ ಮಾಡಲು ಕೇಂದ್ರ ತಂಡ ಜನವರಿ ತಿಂಗಳಲ್ಲಿ ಬಂದರೆ ಹಾನಿಯಾದ ಯಾವ ಬೆಳೆ ಇರುತ್ತದೆ ರೈತರು ಹೊಲ ಹರಗಿ ಜೋಳ ಕಡಲೆ ಕುಸುಬೆ ನೀರಾವರಿ ತೊಗರಿ ಬಿತ್ತನೆ ಮಾಡಿ ಕಡಲೆ ರಾಶಿ ನಡೆಸುವಾಗ ಬೆಳೆ ಸಮೀಕ್ಷೆ ಮಾಡಲು ಬರುತ್ತಾರೆ ಕೇಂದ್ರ ಸರ್ಕಾರ ರೈತ ವಿರೋಧಿಯಾಗಿದೆ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದಾಗ ತಕ್ಷಣವೇ ಬೆಳೆ ಸಮೀಕ್ಷೆ ಮಾಡಲು ಬಂದರೆ ಸತ್ಯಾಸತ್ಯತೆ ಗೊತ್ತಾಗುತ್ತದೆ. ತೊಗರಿ ಬೆಳೆಗಾರರ ಜೊತೆಗೆ ಒಂದು ಸಭೆ ನಡೆಸದೆ ಇರೋದು ತುಂಬಾ ಖೇದಕರ ಸಂಗತಿಯಾಗಿದೆ, ತೊಗರಿ ಬೆಳೆಗಾರರ ಗೋಳು ಮುಗಿಲು ಮುಟ್ಟಿದೆ ,ತೊಗರಿ ಖರೀದಿ ಕೇಂದ್ರ ತೆರೆದರೂ ಒಬ್ಬ ರೈತರು ತೊಗರಿ ಕಾಟಾ ಮಾಡಿರುವುದಿಲ್ಲ ಇದು ವಿಪರ್ಯಾಸದ ಸಂಗತಿಯಾಗಿದೆ APMC ಮಾರುಕಟ್ಟೆಯಲ್ಲಿ ತೊಗರಿ ಬೆಂಬಲ ಬೆಲೆ ಇಲ್ಲದೆ ಸಾಲದ ಭಾದೆ ತಾಳಲಾರದೆ ಕಲಬುರಗಿ ಜಿಲ್ಲೆಯಲ್ಲಿ 47 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕರ್ನಾಟಕ ರಾಜ್ಯ ಸರ್ಕಾರ ವಿಶೇಷ ಅಧಿವೇಶನದಲ್ಲಿ ನಮ್ಮ ಜಿಲ್ಲೆ ತೊಗರಿ ಬೆಳೆಯಿಂದ ಹಲವಾರು ದಿನಸಿಗಳು ಮಾಡುತ್ತಾರೆ ಬ್ಯಾಳಿ, ಖಾರಬ್ಯಾಳಿ, ಹುಳುಬ್ಯಾಳಿ ವಿವಿಧ ಬಗೆಯ ಊಟ ಮಾಡುವ ಎಲ್ಲರೂ ಮತ್ತು ಜನ ಪ್ರತಿನಿಧಿಗಳು ಅಧಿವೇಶನದಲ್ಲಿ ಮಾತಾಡಬೇಕು ಎಂದು ರೈತ ಸಂಘಟನೆಗಳು ಒತ್ತಾಯಿಸುತ್ತವೆ ಕಲಬುರಗಿಯ ಜಿಲ್ಲೆಯ ಆರ್ಥಿಕತೆ ನಿರ್ಧಾರವಾಗುವುದೇ ತೊಗರಿ ಮೇಲೆ. ಬಂಪರ್ ಬೆಳೆ ಬಂದರೆ ಮಾತ್ರ ಅನ್ನದಾತರ ಮೊಗದಲ್ಲಿ ಮಂದಹಾಸ ಕಾಣಲು ಸಾಧ್ಯ. ಒಂದೆಡೆ ಬರ, ಇನ್ನೊಂದೆಡೆ ನೆರೆ. ಎರಡೂ ಪಾರಾಗಿ ಬಂದರೂ ಸೂಕ್ತ ಬೆಲೆ ಸಿಗದೇ ರೈತರ ಜೀವನ ಕಂಗಾಲಾಗುವಂತೆ ಮಾಡಿದೆ ತೊಗರಿ ಬೆಳೆಗಾರರ MSP ಕಾನೂನು ಜಾರಿಗಾಗಿ ಆಗ್ರಹ ಇಡೀ ದೇಶದಲ್ಲಿ ಅತಿ ಹೆಚ್ಚು ತೊಗರಿ ಬೆಳೆಯುವ ಕರ್ನಾಟಕ ರಾಜ್ಯದ ತೊಗರಿ ನಾಡು ಎಂದು ಪ್ರಸಿದ್ಧವಾದ ಕಲಬುರಗಿ ಜಿಲ್ಲೆ ಇಡೀ ವಿಶ್ವದಲ್ಲೇ ಗುರುತಿಸಲ್ಪಟ್ಟ ( ಜಿ ಐ ಟ್ಯಾಗ್ ) ಮಾನ್ಯತೆ ಪಡೆದಿದೆ ಮತ್ತು ಭಾರತ ದೇಶದಲ್ಲಿ ಕರ್ನಾಟಕ ರಾಜ್ಯದ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಜಿಲ್ಲೆಯ ಅತಿ ಹೆಚ್ಚು 23 ಪ್ರತಿಶತ ಪ್ರೊಟೀನ್ ಅಂಶ ಹೊಂದಿರುವ ತೊಗರಿ ಬೆಳೆಯಾಗಿದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೊಗರಿ ಬೆಳೆಗಾರರ ಬಗ್ಗೆ ವಿಶೇಷ ಕಾಳಜಿ ವಹಿಸಲು ರೈತರ ಒತ್ತಾಯವಾಗಿದೆ.
• ಈ ವರ್ಷ ರೈತರು ಬೆಳೆ ವಿಮೆ ಕಟ್ಟಿದ್ದು ಇಂತಿದೆ
*ಕಲಬುರಗಿ ಜಿಲ್ಲೆಯ ತೊಗರಿ ನಾಡಿನಲ್ಲಿ ತೊಗರಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದಾಗ ಲಬುರಗಿ ಜಿಲ್ಲೆಯಲ್ಲಿ – ಒಟ್ಟು ರೈತರ ಸಂಖ್ಯೆ 3,01,000 – ರೈತರಿಂದ ವಿಮೆ ಕಟ್ಟಿದ್ದು ಒಟ್ಟು ಹಣ 99 ಕೋಟಿ ರೂಪಾಯಿ.
*ಕಲಬುರಗಿ ಜಿಲ್ಲೆಯ ಒಟ್ಟು 3,78,990 ಹೆಕ್ಟೇರ್ ಬೆಳೆ ವಿಮೆ ಮಾಡಿಸಿದ ರೈತರ ಜಮೀನು
ಮ್ಯಾನ್ಮಾರ್, ಮೊಜಾಂಬಿಕ್, ತಾಂಜನಿಯಾ, ಸುಡಾನ್, ಮಾಲವಾ, ಬ್ರೆಜಿಲ್ ಹೊರದೇಶಗಳಿಂದ 814068.65 ಲಕ್ಷ ಮೆಟ್ರಿಕ್ ಟನ್ ತೊಗರಿ, ಇಂಪೋರ್ಟ ಮಾಡಿಕೊಂಡು ಮಾರುಕಟ್ಟೆಗೆ ತಂದು ಮಾರ್ಕೆಟ್ ಸತ್ಯಾನಾಶ ಮಾಡಿದ ರೈತ ವಿರೋಧಿ ಕೇಂದ್ರ ಸರ್ಕಾರ ತಕ್ಷಣವೇ ಹೊರದೇಶದ ತೊಗರಿ ಮೇಲೆ ಶೇ % 50 ರಷ್ಟು ಇಂಪೋರ್ಟ ಡ್ಯೂಟಿ ಹಾಕಬೇಕು ರೈತ ಸಂಘ ಒತ್ತಾಯಿಸುತ್ತದೆ ಎಂದರು.
1) ಹಾಲು ಉತ್ಪಾದಕರ ಸಹಕಾರ ಸಂಘಗಳು KMF ಮಾದರಿಯಲ್ಲಿ ಖರೀದಿ ಕೇಂದ್ರ ತೆರೆಯಬೇಕು.
2) ಪ್ರತಿ ಕ್ವಿಂಟಾಲ್ ತೊಗರಿಗೆ 12,500 ಬೆಂಬಲ ಬೆಲೆ ಕೊಡಬೇಕು,,ಪ್ರತಿ ಕ್ವಿಂಟಲ್ ತೊಗರಿಗೆ ರಾಜ್ಯ ಸರ್ಕಾರ 1000 ರೂ. ಪ್ರೋತ್ಸಾಹಧನ ಮತ್ತು ಕೇಂದ್ರ ಸರ್ಕಾರ 1000 ರೂ. ಪ್ರೋತ್ಸಾಹಧನ ಕೊಡಬೇಕು
3) ಹೊರದೇಶದ ತೊಗರಿ ಮೇಲೆ % 50 ರಷ್ಟು ಆಮದು ಶುಲ್ಕ ಹಾಕಬೇಕು
4) ತೊಗರಿ ತುರ್ತು ಖರೀದಿ ಕೇಂದ್ರ ತೆರೆದರೂ ತೊಗರಿ ಕಾಟಾ ಆಗುತ್ತಿಲ್ಲ ಎಲ್ಲಾ ರೈತರಿಗೆ ಬೆಳೆ ವಿಮೆ ಮಂಜೂರು ಮಾಡಬೇಕು
5) ರಾಷ್ಟ್ರೀಕೃತ ಬ್ಯಾಂಕುಗಳು ರೈತರ ಸಾಲ ಮನ್ನಾ ಮಾಡಬೇಕು
6) ಸಾಲದ ಭಾದೆ ತಾಳಲಾರದೆ ಸರಣಿ ರೈತರ ಆತ್ಮಹತ್ಯೆ ಪ್ರಕರಣಗಳು ತಡೆಗಟ್ಟಬೆಕು
7) ಅಮೇರಿಕಾ ಜೊತೆಗೆ ಮುಕ್ತ ಮಾರುಕಟ್ಟೆ ವ್ಯಾಪಾರ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಕೈ ಬಿಡಬೇಕು
8) ಡಾ|| ಎಮ್ ಎಸ್ ಸ್ವಾಮಿನಾಥನ್ ಆಯೋಗದ ವರದಿಯ ಪ್ರಕಾರ c2+50 % ಸೇರಿಸಿ ಬೆಂಬಲ ಬೆಲೆ ಕೊಡಬೇಕು
9) ಮಹಾತ್ಮಾ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ರದ್ದು ಮಾಡಲು ಹೊರಟಿದ್ದ ಗ್ರಾಮೀಣ ಪ್ರದೇಶದ ಕೃಷಿ ಕೂಲಿಕಾರರ ವಿರೋಧಿ ಕೇಂದ್ರ ಸರ್ಕಾರದ ನೀತಿ ವಿರೋಧಿ ಧೋರಣೆಯಾಗಿದೆ ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಕರೆದಿದ್ದು ರೈತ ಸಂಘಟನೆಗಳು ಸ್ವಾಗತಿಸುತ್ತದೆ ಕೂಲಿಕಾರರ ಹಿತದೃಷ್ಟಿಯಿಂದ MGNREGA ಯೋಜನೆ ಸಮರ್ಪಕವಾಗಿ ಜಾರಿಗಾಗಿ ಉದ್ಯೋಗ ಖಾತ್ರಿ ಯೋಜನೆ ಉಳಿಯಬೇಕು ಎನ್ನುವುದು ರೈತ ಮುಖಂಡರ ಒತ್ತಾಯವಾಗಿತ್ತು.
ಈ ಸಂದರ್ಭದಲ್ಲಿ
ಜಿಲ್ಲಾ ಅಧ್ಯಕ್ಷರು ಶರಣಬಸಪ್ಪ ಮಮಶೆಟ್ಟಿ, ಕಾಳಗಿ ತಾಲೂಕ ಅಧ್ಯಕ್ಷರು ವೀರಣ್ಣ ಗಂಗಾಣಿ ಮಾತನಾಡಿ ಮೂರ್ನಾಲ್ಕು ದಿವಸಗಳಲ್ಲಿ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸದೆ ಹೋದಲ್ಲಿ ಕಲಬುರ್ಗಿ ಜಿಲ್ಲೆಯಾದ್ಯಂತ ಉಪವಾಸ ಸತ್ಯಾಗ್ರಹ ಮಾಡಲಾಗುವುದೆಂದು ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ಮೌಲಾ ಮುಲ್ಲಾ , ಉಮಾಪತಿ ಪಾಟೀಲ್ , ಸಿದ್ದು ಎಸ್ ಎಲ್ ಜಿಲ್ಲಾ ಅಧ್ಯಕ್ಷರು, ಅಧ್ಯಕ್ಷರು
ಭೀಮಾಶಂಕರ ಮಾಡಿಯಾಳ, ಕರೆಪ್ಪಾ ಕರಗೊಂಡ
ಅಧ್ಯಕ್ಷರು ಕಾಳಗಿ, ಜಿಲ್ಲಾ ಕಾರ್ಯದರ್ಶಿಗಳು ಸಿದ್ದಪ್ಪ ಕಲಸೆಟ್ಟಿ, ಭೀಮಣ್ಣ ಬಡದಾಳ, ಅಜಿಮ್ ಲದಾಫ್ ,ಕಾಶೀನಾಥ ಮುಗದಿ, ಕುಮಾರ ಹಾಳಮಳಿ ಅಲ್ಲಾಉದ್ದೀನ ಲದಾಫ್, ಚಂದಪ್ಪ ಪೂಜಾರಿ ಸಾಯಬಣ್ಣಾ ಕೊರಬ,
ದೇವು ಬಿರಾದಾರ ಸೇರಿದಂತೆ ಕಲಬುರಗಿ ಜಿಲ್ಲೆಯ ಸುತ್ತ ಹಳ್ಳಿಗಳ ರೈತರು ಉಪಸ್ಥಿತರಿದ್ದರು.




















