ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮದಲಗಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ SDMC ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶ್ರೀ ಹನುಮಂತಪ್ಪ ಎಚ್. ಮೋಡಿಕಾರ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಯಮನವ್ವ ವೀರೇಶ್ ಕನಕಗಿರಿಯವರು ಆಯ್ಕೆಯಾದರು.
ಈ ಸಂದರ್ಭದಲ್ಲಿ ಗ್ರಾಮದ ಗುರು ಹಿರಿಯರು ಸಹೋದರರು ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಪೂಜಾರಪ್ಪ ಕನಕಗಿರಿ,
ಶ್ರೀ ಶಿವನಗೌಡ ಪಾಟೀಲ್, ಶ್ರೀ ಭೀಮನಗೌಡ ಪಾಟೀಲ್, ಶ್ರೀ ಮುತ್ತನಗೌಡ ಪಾಟೀಲ್, ಶ್ರೀ ವೀರೇಶ ಕನಕಗಿರಿ, ಶ್ರೀ ಮಂಜು ಪರಕಿ, ಶ್ರೀ ಮರಿಸ್ವಾಮಿ ಕನಕಗಿರಿ, ಶ್ರೀ ಕನಕಪ್ಪ ತಳವಾರ, ಶ್ರೀ ಹನಮಗೌಡ ಪಾಟೀಲ್ ಸೇರಿದಂತೆ ಶಿಕ್ಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.
- ಕರುನಾಡ ಕಂದ ಪತ್ರಿಕೆ




















