ಸುರಪಾನಿಯ ಪ್ರತಿಭೆಗೆ ಆನೆ ಕೊಟ್ಟರೂ
ಸಾಲದಯ್ಯ, ಮದ್ಯಪ್ರಿಯರ ವಿವೇಚನೆಯು ಜರೂರು
ಆಗೈತಿ, ಅನುಭವದ ಹಿತನುಡಿಯು ಹೊರಚೆಲ್ಲೈತಿ
ನುಡಿಮುತ್ತಂತೆ ಉದುರಿ ಕೋಟೆಕಟ್ಟುವ ಮನಸೈತಿ.I೧I
ಅಭ್ಯಾಸಿಗನ ಅಂತರಾಳದ ಒಲವು ಅನ್ವೇಷಣೆಯ
ದಾಟಿಯಾಗೆ ಸಾಗುತ್ತಿದೆ ಸಂಗಡಿಗನ ಸಂಘಟನೆಯ
ರೂಪತೆಯು ಚಾಣಾಕ್ಷತನಕ್ಕೆ ಮುನ್ನುಡಿಯನ್ನು ಇಟ್ಟಂತೆ
ನೈಪುಣ್ಯನ ಸೊಬಗೇ, ಅಲಂಕಾರದ ಸೌಂದರ್ಯವಂತೆ.I೨I
✍🏻 ದೇವರಾಜು ಬಿ ಎಸ್ ಹೊಸಹೊಳಲು.
ಕಾವ್ಯನಾಮ : ಅರಸು




















