ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಾಳಗಿಯಲ್ಲಿ ಸಂಭ್ರಮ ಸಡಗರದಿಂದ 77ನೇ ಗಣರಾಜ್ಯೋತ್ಸವ ಆಚರಣೆ

ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನಲ್ಲಿ ತಾಲೂಕ ಆಡಳಿತ ವತಿಯಿಂದ 77ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಸರ್ಕಾರಿ ಪ್ರೌಢಶಾಲೆ ಆವರಣ ಕಾಳಗಿಯಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಕಾಳಗಿ ತಾಲೂಕಿನ ತಹಶೀಲ್ದಾರ್ ಕಾರ್ಯಾಲಯದಲ್ಲಿ ಪೃಥ್ವಿರಾಜ್ ಪಾಟೀಲ್ ತಹಶೀಲ್ದಾರರು ಧ್ವಜಾರೋಹಣ ಕಾರ್ಯಕ್ರಮ ನೆರೆವೇರಿಸಿ ಮಾತನಾಡಿ ಒಂದು ದೇಶ ನಡೆಯಬೇಕಾದರೆ ಸಂವಿಧಾನವು ಮುಖ್ಯವಾಗಿರುತ್ತದೆ. ನಮ್ಮ ದೇಶದಲ್ಲಿ ಹಲವಾರು ಜಾತಿಗಳಿವೆ. ಆರ್ಥಿಕ,ಸಾಮಾಜಿಕ ಸಮಾನತೆ, ಸ್ವಾತಂತ್ರ್ಯವು ನಮ್ಮ ದೇಶದ ಜನರಿಗೆ ಸಿಗಬೇಕು ಅಸ್ಪೃಶ್ಯತೆಯನ್ನು ಹೋಗಬೇಕೆಂದು ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸಂವಿಧಾನವನ್ನು ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಬರೆದಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನನಾಯಕ ಆಗಬೇಕಾದರೆ ನಾವು ಸಂವಿಧಾನ ವಿಧಿಯ ಮೂಲಕ ಆಯ್ಕೆಯಾಗಿರುತ್ತೇವೆ ಎಂದರು.
ಈ ಸಂದರ್ಭದಲ್ಲಿ ಕಾಳಗಿ ತಾಲೂಕಿನಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂದು ಈ ಸಂದರ್ಭದಲ್ಲಿ ಸನ್ಮಾನ್ಯ ಡಾ ll ಅವಿನಾಶ್ ಜಾದವ್ ಮಾನ್ಯ ಶಾಸಕರು ವಿಧಾನಸಭಾ ಮತಕ್ಷೇತ್ರ ಚಿಂಚೋಳಿ ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದರು.
ಗಣರಾಜ್ಯೋತ್ಸವ ಎಂಬ ಶಬ್ದವನ್ನು ಬಿಡಿಸಿದಾಗ ಗಣ ಎಂಬ ಶಬ್ದವು ಸಂಸ್ಥೆ, ಸಂಘ ಎಂಬ ಅರ್ಥ ಕೊಡುತ್ತದೆ. ಇತಿಹಾಸ ಪುಟವನ್ನು ಓದಿದಾಗ ಗಣ ಎಂಬ ಶಬ್ದವು ಬುದ್ದನ ಕಾಲದಿಂದಲೇ ಬಂದಾಗಿದೆ.
ಆ ಕಾಲದಲ್ಲಿ 25 ವರ್ಷ ತುಂಬಿದವರು ಗಣರಾಜ್ಯ ಸದಸ್ಯರಾಗುವ ನಿಯಮವಿತ್ತು. ನಂತರ ರಾಜರ ಆಡಳಿತ ಪ್ರಾರಂಭವಾಗುತ್ತದೆ. ಬ್ರಿಟಿಷರು ಭಾರತಕ್ಕೆ ಬಂದು ಹಲವಾರು ವರ್ಷಗಳ ಕಾಲ ಆಡಳಿತ ನಡೆಸಿ ನಮ್ಮ ಭಾರತ ದೇಶವನ್ನು ತಮ್ಮ ಆ ದಿನದಲ್ಲಿ ಇಟ್ಟುಕೊಂಡು ಆಳ್ವಿಕೆ ನಡೆಸಿದರು. ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಜವಾಹರಲಾಲ್ ನೆಹರೂ ಮುಂತಾದ ನಾಯಕರ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಆದರೂ ಒಂದು ದೇಶವನ್ನು ಮುನ್ನಡೆಸಬೇಕಾದರೆ ಸಂವಿಧಾನ ಮುಖ್ಯವಾಗಿರುತ್ತದೆ. ಸಂವಿಧಾನವನ್ನು ಯಾರಿಂದ ಬರೆಸಬೇಕೆಂದು ಮಹಾತ್ಮ ಗಾಂಧೀಜಿ, ಜವರಲಾಲ್ ನೆಹರು ಮುಂತಾದ ನಾಯಕರು ಚರ್ಚೆ ಮಾಡಿ ಅಂತಿಮವಾಗಿ ಡಾ. ಬಿ. ಆರ್ ಅಂಬೇಡ್ಕರ್ ಅವರಿಂದ ಸಂವಿಧಾನವನ್ನು ಬರಿಸಲಾಯಿತು. ನಮ್ಮ ದೇಶಕ್ಕೆ ಸಂವಿಧಾನ ಜಾರಿಗೆ ಬಂದ ದಿನ 26ನೇ ಜನವರಿ ದಿನವಾಗಿದೆ ಎಂದು ಈ ಸಂದರ್ಭದಲ್ಲಿ ಉಪನ್ಯಾಸಕರಾದ ಸುಭಾಷ್ ಶೀಲವಂತ್ ಮಾತನಾಡಿದರು.
” ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಿ ನಾವುಗಳು ಸೋದರತೆಯ ಭಾವನೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು 76 ಮುಗಿದು 77ಕ್ಕೆ ಕಾಲಿಟ್ಟಿದ್ದೇವೆ. ಕಾಳಗಿ ತಾಲೂಕಿನಲ್ಲಿ ಅನೇಕ ಸಮಸ್ಯೆಗಳಿದ್ದು ಅವುಗಳನ್ನು ಎದುರಿಸಿ ಸಂವಿಧಾನಬದ್ಧವಾಗಿ ಆಡಳಿತ ನಡೆಸ್ತಾ ಇದ್ದೇವೆ. ಮುಂದಿನ ದಿನಮಾನಗಳಲ್ಲಿ ಕಾಳಗಿಯು ಉತ್ತಮ ತಾಲೂಕ ಆಗಲಿದೆ ಎಂದು ಬಸವಲಿಂಗಪ್ಪ ಡಿಗ್ಗಿ ಕಾರ್ಯನಿರ್ವಾಹಕ ಅಧಿಕಾರಿಗಳು ತಾ. ಪಂ. ಕಾಳಗಿ ರವರು ಈ ಸಂದರ್ಭದಲ್ಲಿ ಮಾತನಾಡಿದರು.

ಕಾಳಗಿಯ ಸರ್ಕಲ್ ನಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಹಾಗೂ ಬಸವೇಶ್ವರ ಭಾವಚಿತ್ರಕ್ಕೆ ಶಾಸಕರು, ತಹಶೀಲ್ದಾರರು, ತಾ. ಪಂ. ಅಧಿಕಾರಿಗಳು, ಪಟ್ಟಣ ಪಂಚಾಯತಿಯ ಅಧಿಕಾರಿಗಳು, ವಿವಿಧ ರಾಜಕೀಯ ಮುಖಂಡರಿಂದ ಪೂಜೆ ಸಲ್ಲಿಸಲಾಯಿತು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ತಾಲೂಕು ಆಡಳಿತ ವತಿಯಿಂದ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಪೃಥ್ವಿರಾಜ್ ಬಿ ಪಾಟೀಲ್ ಮಾನ್ಯ ತಹಸೀಲ್ದಾರರು ಕಾಳಗಿ, ಮಾನ್ಯ ಚಿಂಚೋಳಿ ಮತಕ್ಷೇತ್ರ ಶಾಸಕರು ಅವಿನಾಶ್ ಜಾಧವ್, ಬಸವಲಿಂಗಪ್ಪ ಡಿಗ್ಗಿ ಕಾ.ನಿ.ಅ. ತಾ. ಪಂ ಕಾಳಗಿ, ಪಂಕಜಾ ಎ. ಮುಖ್ಯಱ್ಧಿಕಾರಿಗಳು ಪಟ್ಟಣ ಪಂಚಾಯತ್ ಕಾಳಗಿ, ಮಹಮ್ಮದ್ ಇಲಿಯಾಸ್ ಎ ಇ ಇ ಜೆಸ್ಕಾಂ ಅಧಿಕಾರಿಗಳು, ಜ್ಞಾನೇಶ್ ಎಇಇ ಲೋಕೋಪಯೋಗಿ ಇಲಾಖೆ ಕಾಳಗಿ, ರಾಘವೇಂದ್ರ ಗುತ್ತೇದಾರ್ ತಾಲೂಕಾಧ್ಯಕ್ಷರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಕಾಳಗಿ, ಕೃಷಿ ಅಧಿಕಾರಿ ರಾಹುಲ್ ಚವ್ಹಾಣ್,ಗ್ರೇಡ್ – 2 ತಹಶೀಲ್ದಾರರು ರಾಜೇಶ್ವರಿ, ವೈದ್ಯಾಧಿಕಾರಿಗಳು ಅಂಬರೀಶ್ ಕಾಳಗಿ, ಜಗದೇವಪ್ಪ ಪಾಳ ಆರಕ್ಷಕ ವಲಯ ನಿರೀಕ್ಷಕರು ಕಾಳಗಿ, ಪಿಎಸ್ಐ ತಿಮ್ಮಯ್ಯ ಕಾಳಗಿ,ಉಪನ್ಯಾಸಕರು ಸುಭಾಷ್ ಶೀಲವಂತ್ ಉಪಸ್ಥಿತರಿದ್ದರು.
ನಿರೂಪಣೆ ಶಿವಕುಮಾರ್ ಶಾಸ್ತ್ರಿ, ಸ್ವಾಗತ ಪೃಥ್ವಿರಾಜ್ ಪಾಟೀಲ್ ತಹಶೀಲ್ದಾರ್ ಕಾಳಗಿ, ಪ್ರಾರ್ಥನೆ ಮಧು 10ನೇ ವಿದ್ಯಾರ್ಥಿನಿ, ಕಾಳಗಿ ತಾಲೂಕಿನ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಕಾರ್ಯಕ್ರಮದಲ್ಲಿ ಕಾಳಗಿ ತಾಲೂಕಿನ ಗಣ್ಯರು, ರೈತರು, ಯುವಕರು, ಮುದ್ದು ಮಕ್ಕಳು ಭಾಗವಹಿಸಿದ್ದರು.

ವರದಿ : ಚಂದ್ರಶೇಖರ ಆರ್ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!