ಬಾಗಲಕೋಟೆ : ತಾಲೂಕಿನ ಬೇವೂರಿನ ಆದರ್ಶ ವಿದ್ಯಾವರ್ಧಕ ಸಂಘ ವಜ್ರಮಹೋತ್ಸವದ ಸಂಭ್ರಮಾಚರಣೆಯ ಹೊಸ್ತಿಲಲ್ಲಿ ಇರಲಾಗಿದ್ದು ಸಂಸ್ಥೆಗೆ ಹಿರಿಮೆಯ ಗರಿ ಹೆಮ್ಮೆ ಎಂಬಂತೆ ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಾಲೇಜಿನ ಪ್ರಾಚಾರ್ಯ ಡಾ. ಜಗದೀಶ.ಗು. ಭೈರಮಟ್ಟಿಯವರು ಬಾಗಕೋಟೆ ವಿಶ್ವವಿದ್ಯಾಲಯದ ವಿದ್ಯಾವಿಷಯಕ್ ಪರಿಷತ್ತು ಹಾಗೂ ಸಿಂಡಿಕೇಟನ ನಾಮನಿರ್ಧೇಶಿತ ಸದಸ್ಯರಾಗಿ ಮಾನ್ಯ ಕುಲಪತಿಗಳಿಂದ ನಾಮಕರಣಗೊಂಡಿರುವುದು ಸಂಸ್ಥೆಗೆ ಅಭಿಮಾನ ಹಾಗೂ ಗೌರವದ ಸಂಗತಿಯಾಗಿದೆ ಎಂದೂ ಸಂಘದ ಅಧ್ಯಕ್ಷ ಹಾಗೂ ನ್ಯಾಯವಾದಿ ಜಿ.ಜಿ. ಮಾಗನೂರ ಹೇಳಿದರು.
ಆದರ್ಶ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಜರುಗಿದ ೭೭ ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ನೂತನ ಸಿಂಡಿಕೇಟ್ ಸದಸ್ಯ ಜಗದೀಶ ಗು. ಭೈರಮಟ್ಟಿಯವರಿಗೆ ಸಂಸ್ಥೆಯ ವತಿಯಿಂದ ಅಭಿನಂಧನಾ ಸ್ಮರಣಿಕೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ಈ ಸತ್ಕಾರ ಸಮಾರಂಭದಲ್ಲಿ ಸಂಸ್ಥೆಯ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಹಾಗೂ ಪಿ.ಎಸ್.ಸಜ್ಜನ ಕಾಲೇಜಿನ ಸಿಬ್ಬಂದಿ ವರ್ಗ ಸೇರಿದಂತೆ ಬೇವೂರಿನ ಗ್ರಾಮ ಪಂಚಾಯತಿ, ಅಂಗನವಾಡಿ ಸಿಬ್ಬಂದಿ, ಕನಕ ಯುವಶಕ್ತಿ ಸಂಘಟನೆ ಮುಂತಾದವರು ಪ್ರಾಚಾರ್ಯ ಜಗದೀಶ ಭೈರಮಟ್ಟಿಯವರಿಗೆ ಗೌರವ ಸತ್ಕಾರ ಸಲ್ಲಿಸಿ ಅಭಿನಂದಿಸಿ ಹಾರೈಸಿದರು.
ಆ.ವಿ.ವ ಸಂಘದ ಉಪಾಧ್ಯಕ್ಷ ರತನ್ಕುಮಾರ ವೈಜಾಪೂರ, ಸಂಸ್ಥೆಯ ಗೌರಾವಾನ್ವಿತ ಸದಸ್ಯರು, ಪ್ರೌಢಶಾಲೆಯ ಮುಖ್ಯಗುರು ಯೋಗೇಶ ಲಮಾಣಿ, ಆದರ್ಶ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಜೆ.ಕೆ.ಮಲ್ಲಾಪೂರ, ನಿವೃತ್ತ ಮುಖ್ಯಗುರು ಜಿ.ಎಸ್ ಹಚ್ಚೊಳ್ಳಿ, ವಿಶ್ರಾಂತ ಪ್ರಾಚಾರ್ಯ ಬಿ.ಬಿ. ಬೇವೂರ. ಹಿರಿಯ ಉಪನ್ಯಾಸಕ ಎಸ್.ಎಸ್ ಆದಾಪೂರ ಸೇರಿದಂತೆ ಸಂಸ್ಥೆಯ ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
- ಕರುನಾಡ ಕಂದ ಪತ್ರಿಕೆ




















