
ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಹಳೆಯ ಬಜಾರ್ ನಿಂದ ಎತ್ತಿನ ಬಂಡಿ ಹಾಗೂ ರೈತರು ಪಾದಯಾತ್ರೆಯ ಮೂಲಕ ಅಂಬೇಡ್ಕರ್ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಚಾಟಿ ಬೀಸಿ ರೈತರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಕಾರ್ಯಾಲಯದ ಮುಂದೆ ಧರಣಿ ಸತ್ಯಾಗ್ರಹವು 4 ಗಂಟೆಗಳ ಕಾಲ ನಡೆಯಿತು.
ಕಾಳಗಿ ತಾಲೂಕಿನ ಗ್ರಾಮಗಳ ರೈತರಿಗೆ ಬೆಳೆ ಪರಿಹಾರ ನೀಡುವಲ್ಲಿ ನೂರಾರು ರೈತರ ಹೆಸರು ಕೈಬಿಟ್ಟಿರುವುದನ್ನು ತಂತ್ರಾಂಶದಲ್ಲಿ ನಮೂದಿಸಿ ಪರಿಹಾರ ನೀಡಿ ಬೆಳೆ ವಿಮೆ ಹಣ ಮಂಜೂರು ವಿವಿಧ ಸಮಸ್ಯೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರವು ಬಗೆಹರಿಸಬೇಕು. ಕಾಳಗಿಯ ರೈತರು ಅತಿವೃಷ್ಟಿ ಮಳೆಯಿಂದ ಬೆಳೆ ಹಾನಿಯಾಗಿ ಸಂಕಷ್ಟದಲ್ಲಿ ಇರುತ್ತಾರೆ. ಇದನ್ನು ಪರಿಗಣಿಸಿದ್ದ ರಾಜ್ಯ ಮತ್ತು ಕೇಂದ್ರ ಸರ್ಕಾರವು ಪರಿಹಾರವನ್ನು ನೀಡುತ್ತಿದೆ. ಆದರೆ ನೂರಾರು ರೈತರ ಹೆಸರನ್ನು ಕೈ ಬಿಟ್ಟಿರುವುದನ್ನು ಕಂಡು ಬಂದಿರುತ್ತದೆ ಇದರಿಂದ ರೈತರು ಪರಿಹಾರವನ್ನು ಪಡೆದುಕೊಳ್ಳದೆ ಕಂಗಲಾಗಿರುತ್ತಾರೆ. ಆದರೆ ಮಾನ್ಯರು ತಾವುಗಳು ಕೂಡಲೇ ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸಿ ಕೈ ಬಿಟ್ಟಿರುವ ರೈತರ ಹೆಸರನ್ನು ತಂತ್ರಾಂಶದಲ್ಲಿ ನಮೂದಿಸಿ ಪರಿಹಾರವನ್ನು ಕೂಡಲೆ ಕೊಡಬೇಕೆಂದು ಹೋರಾಟದಲ್ಲಿ ಭಾಗವಹಿಸಿದ ರೈತರು ಒತ್ತಾಯಿಸಿದ್ದಾರೆ.
ರೈತ ತುಂಬಾ ಕಷ್ಟದಲ್ಲಿದ್ದಾನೆ. ಸರ್ಕಾರಗಳು ನಾವು ರೈತರ ಪರವಾಗಿ ಇದ್ದೇವೆ ಎಂದು ಹೇಳುತ್ತಲೇ ಇರುತ್ತದೆ. ರೈತರಿಗೆ ತುಂಬಾ ಅನ್ಯಾಯ ಮಾಡುತ್ತಿರುವುದು ರಾಜ್ಯ ಮತ್ತು ಕೇಂದ್ರ ಸರ್ಕಾರವೇ ಹಾಗೂ ಅಧಿಕಾರಿಗಳು ನೇರವಾಗಿ ಕಾರಣವಾಗಿರುತ್ತಾರೆ. ರೈತರು ಬಿತ್ತನೆ ಬೀಜ, ಬೆಂಬಲ ಬೆಲೆ ಹೀಗೆ ಪ್ರತಿಯೊಂದನ್ನು ರೈತರು ಹೋರಾಟ ಮಾಡಿ ತೆಗೆದುಕೊಳ್ಳಬೇಕಾ ಎಂದು ಸರ್ಕಾರಕ್ಕೆ ಕೇಳುತ್ತೇವೆ. ರೈತರ ಪರವಾಗಿ ಸದನದಲ್ಲಿ ಮಾನ್ಯ ಶಾಸಕರು ಅವಿನಾಶ್ ಜಾದವ್ ಅವರು ಮಾತಾಡಬೇಕು.
ರೈತರ ಎಲ್ಲಾ ಸಮಸ್ಯೆಗಳನ್ನು ಸರ್ಕಾರದ ಪರವಾಗಿ ವೀರಶೆಟ್ಟಿ ಚೌವ್ಹಾಣ್ ಕೃಷಿ ಇಲಾಖೆ ಅಧಿಕಾರಿಗಳು ಚಿಂಚೋಳಿ, ಸಂಜೀವ್ ಕುಮಾರ್ ಮಾನ್ಕರ್ ಕೃಷಿ ಇಲಾಖೆ ಅಧಿಕಾರಿ ಚಿತ್ತಾಪುರ, ಪೃಥ್ವಿರಾಜ್ ಬಿ ಪಾಟೀಲ್ ತಹಶೀಲ್ದಾರ್ ಕಾಳಗಿ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಧಿಕಾರಿಗಳು ರೈತರಿಗೆ ನಿಮ್ಮ ಸಮಸ್ಯೆಗಳಿಗೆ ಒಂದು ವಾರದಲ್ಲಿ ಪರಿಹಾರ ಕೊಡಿಸುವಲ್ಲಿ ಪ್ರಯತ್ನವನ್ನು ಮಾಡುತ್ತೇವೆ ಎಂದು ಹೇಳಿದರು. ಆದರೆ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ ರೈತರು ಅಧಿಕಾರಿಗಳಿಗೆ 15 ದಿನಗಳ ಕಾಲ ಗಡವು ನೀಡಲಾಗಿದೆ. ಒಂದು ವೇಳೆ ಪರಿಹಾರ ಸಿಗದೇ ಇದ್ದರೆ ಮುಂದಿನ ದಿನಮಾನಗಳಲ್ಲಿ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ವೀರಣ್ಣ ಗಂಗಾಣಿ ಅಧ್ಯಕ್ಷರು ತಾಲೂಕ ರೈತ ಸಂಘ ಹಾಗೂ ರೈತ ಸೇನೆ ಕಾಳಗಿ ಮನವಿ ಪತ್ರ ಕೊಟ್ಟು ಮಾತನಾಡಿದರು.
ಮಳೆಯಿಂದಾಗಿ ಬೆಳೆಯು ನಾಶವಾಗಿ ಹೋಗಿರುತ್ತದೆ. ರೈತರ ಜೀವನ ತುಂಬಾ ಚಿಂತಾಜನಕವಾಗಿದೆ. ಕೇಂದ್ರ ಸರ್ಕಾರವು ಎನ್‌ಸಿಪಿ ಅಡಿಯಲ್ಲಿ ರೈತರಿಗೆ 10,000 ಹಾಗೂ ರಾಜ್ಯ ಸರ್ಕಾರವು 2000 ಬೆಂಬಲ ಬೆಲೆ ನಿಗದಿ ಮಾಡಬೇಕು. ಒಟ್ಟಿನಲ್ಲಿ ರೂ.12,000 ನಿಗದಿ ಮಾಡಿ ರೈತರಿಗೆ ನೀಡಬೇಕೆಂದು ರಾಜಕುಮಾರ್ ಪಾಟೀಲ್ ಹೊಸಳ್ಳಿ ರೈತ ಮುಖಂಡ ಈ ಸಂದರ್ಭದಲ್ಲಿ ಮಾತನಾಡಿದರು.
ರೈತರು ಈಗಾಗಲೇ ಬಹಳಷ್ಟು ಕಷ್ಟದಲ್ಲಿದ್ದು ಬಾಯಿಗೆ ಬಂದ ತುತ್ತು ಕೈಗೆ ಬರದಂತೆ ಪರಿಸ್ಥಿತಿಯಲ್ಲಿದ್ದಾರೆ. ರೈತರ ಸಮಸ್ಯೆಯನ್ನು ಕೇಳಿದ ಸರ್ಕಾರ ಕೇಳಿಯೂ ಕೇಳದ ಹಾಗೆ ಮೌನವಾಗಿ ಕುಳಿತಿರುವ ಸರ್ಕಾರ ರೈತರ ಸಮಸ್ಯೆಗಳನ್ನು ಕೂಡಲೇ ಆಲಿಸಿ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಸಿದ್ದು ಪಾಟೀಲ್ ಹೆಬ್ಬಾಳ್ ಅವರು ಈ ಸಂದರ್ಭದಲ್ಲಿ ಮಾತನಾಡಿದರು.
ರೈತ ನಮ್ಮ ದೇಶದ ಬೆನ್ನೆಲುಬು. ರೈತನಿಗೆ ಒಂದಲ್ಲ ಒಂದು ರೀತಿಯಲ್ಲಿ ಅನ್ಯಾಯ ಆಗುತ್ತದೆ. ರಾಜ್ಯ ಸರ್ಕಾರವು ಹಾಗೂ ಕೇಂದ್ರ ಸರ್ಕಾರವು ಬೆಳೆ ಪರಿಹಾರ, ಇನ್ಸೂರೆನ್ಸ್, ತೊಗರಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು ಮತ್ತು ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿ ತರಬೇಕು ಮಲ್ಲಿಕಾರ್ಜುನ್ ರುದನೂರು ರೈತರು ಈ ಸಂದರ್ಭದಲ್ಲಿ ಮಾತನಾಡಿದರು.
ವೀರಣ್ಣ ಗಂಗಾಣಿ ಅಧ್ಯಕ್ಷರು ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಕಾಳಗಿ, ಮೋಹನ್ ಎಸ್ ಚಿನ್ನ, ಸುಧಾಕರ ರೆಡ್ಡಿ ಸಾಗರ್, ಕರಣ್ ರಾಜಪುರ್, ಅಣ್ಣಾರಾವ ಎಸ್ ಸಲಗರ್, ಮೌನೇಶ್ ಬಡಿಗೇರ್ ಮಂಗಲಗಿ, ಬಸವರಾಜ್ ಆರ್ ರ‍್ಯಾಕ್ ಚಿಂಚೋಳಿ (ಎಚ್ ), ರಾಜಣ್ಣ ಆರ್ ರ‍್ಯಾಕ್ ಚಿಂಚೋಳಿ, ರೇವಣ ಸಿದ್ದಪ್ಪ ಎಸ್ ಚಿದ್ರಿ ನಾವದಗಿ, ಸಿದ್ದು ಆರ್ ತೆಂಗಳ್ಳಿ, ಅನಿಲ್ ಕುಮಾರ್ ಆರ್ ಪಾಟೀಲ್, ಸಂತೋಷ್ ಆರ್ ಪಾಟೀಲ್, ಜಗದೀಶ್ ಪಾಟೀಲ್, ಶೇಖರ್ ಮಾನ ಶೆಟ್ಟಿ, ಭೀಮರಾವ್ ಮಲಘಣ, ಮೋನಪ್ಪ ಮಲ್ಲಣ್ಣ ಬಡಿಗೇರ್, ಗಂಗಾರಾಮ್ ಕೊಡ್ಲಿ ತಾಂಡ, ವೀರಣ್ಣ ತೆಂಗಲಿ ಕಾಳಗಿ, ಶಶಿ ರಾಕ್ ಚಿಂಚೋಳಿ ಹೆಚ್, ರಾಜಶೇಖರ್ ಹುಲಗುಂಡಿ, ಬಸವರಾಜ ಕೋಡ್ಲಿ ಗಜೇಂದ್ರಮದ್ನಕ್, ಮಹೇಶ್ ಶಿಗೋಳ ಹೆಬ್ಬಾಳ್, ರೇವಣಸಿದ್ಧ ಧರಿ ಅಲ್ಲಾಪುರ್ ಮುಂತಾದ ಸುತ್ತ ಮುತ್ತಲಿನ ಗ್ರಾಮದ ರೈತರು, ಯುವಕರು ಈ ಹೋರಾಟದಲ್ಲಿ ಭಾಗವಹಿಸಿದರು.
ವರದಿ ಚಂದ್ರಶೇಖರ್ ಆರ್ ಪಾಟೀಲ್



















