
ಬಳ್ಳಾರಿ / ಕಂಪ್ಲಿ : ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲು ಎಂದೇ ಪ್ರಸಿದ್ಧವಾದ ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಕಂಪ್ಲಿ ಉತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಈ ಉತ್ಸವದ ಪ್ರಮುಖ ವಿವರಗಳು :
ದಿನಾಂಕ: ಕಂಪ್ಲಿ ಉತ್ಸವವನ್ನು ಫೆಬ್ರವರಿ 11 ಮತ್ತು 12 ರಂದು ಎರಡು ದಿನ ನಡೆಸಲು ಯೋಜಿಸಲಾಗಿದೆ.
ಐತಿಹಾಸಿಕ ಮಹತ್ವ: ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಪೂರ್ವಾರ್ಧವಾದ ಕಂಪಿಲ ಸಾಮ್ರಾಜ್ಯ ಮತ್ತು ಗಂಡುಗಲಿ ಕುಮಾರರಾಮನ ಶೌರ್ಯದ ಇತಿಹಾಸವನ್ನು ಜನರಿಗೆ ಪರಿಚಯಿಸುವುದು ಈ ಉತ್ಸವದ ಮುಖ್ಯ ಉದ್ದೇಶ.
ಪ್ರಮುಖ ಆಕರ್ಷಣೆಗಳು
ಮೆರವಣಿಗೆ: ಪಟ್ಟಣದ ಕೋಟೆ ಪ್ರದೇಶದಿಂದ ಆರಂಭವಾಗುವ ಮೆರವಣಿಗೆಯಲ್ಲಿ ತಾಷರಂಡೋಲ್, ಡೊಳ್ಳು ಕುಣಿತ, ವೀರಗಾಸೆ, ಕುದುರೆ ಕುಣಿತ ಮತ್ತು ವಿವಿಧ ಜಾನಪದ ಕಲಾತಂಡಗಳು ಪಾಲ್ಗೊಳ್ಳುತ್ತವೆ.
ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿದುಬಂದಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು:
ಖ್ಯಾತ ಕಲಾವಿದರಿಂದ ಸಂಗೀತ, ನೃತ್ಯ ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ನಡೆಯುತ್ತವೆ.
ಪ್ರವಾಸಿ ತಾಣಗಳು: ಉತ್ಸವದ ಸಮಯದಲ್ಲಿ ಪ್ರವಾಸಿಗರು ಇಲ್ಲಿನ ಸೋಮನಾಥ ದೇವಾಲಯ, ಗಂಡುಗಲಿ ಕುಮಾರರಾಮನ ಕೋಟೆ ಮತ್ತು ತುಂಗಭದ್ರಾ ನದಿಯ ತೀರದ ಸೌಂದರ್ಯವನ್ನು ಸವಿಯಬಹುದು.
ಈ ಉತ್ಸವದಲ್ಲಿ ಸ್ಥಳೀಯ ಜನಪ್ರಿಯ ಶಾಸಕರಾದ ಜೆ. ಎನ್. ಗಣೇಶ ಮತ್ತು ಜಿಲ್ಲಾಡಳಿತದ ಸಹಯೋಗದೊಂದಿಗೆ ಅದ್ದೂರಿಯಾಗಿ ಆಚರಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಉತ್ಸವದ ಅಂಗವಾಗಿ ಪೂರ್ವಭಾವಿಯಾಗಿ ಪಟ್ಟಣದ ಸಕ್ಕರೆ ಕಾರ್ಖಾನೆಯ ಸ್ಥಳವನ್ನು ತಾಲೂಕು ದಂಡಾಧಿಕಾರಿಗಳಾದ ಜೂಗಲ್ ಮಂಜುನಾಯಕ್, ಡಿವೈಎಸ್ಪಿ ಪ್ರಸಾದ್ ಗೋಖಲೆ, ಪಿ ಐ ಕೆ.ಬಿ. ವಾಸುಕುಮಾರ್, ಶಾಸಕರ ಆಪ್ತ ಕಾರ್ಯದರ್ಶಿ ವಿರುಪಾಕ್ಷಿ, ಕಾನೂನು ಸುವ್ಯವಸ್ಥೆಯ ಪಿಎಸ್ಐ ಅವಿನಾಶ್ ಕಾಂಬ್ಳೆ, ಪುರಸಭೆ ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ, ತಾಲೂಕು ಗ್ಯಾರೆಂಟಿ ಅನುಷ್ಠಾನಗಳ ಸಮಿತಿಯ ಸದಸ್ಯ ರಾಜಾಭಕ್ಷಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪರಿಶೀಲಿಸಿದರು. ಉತ್ಸವದ ಸ್ವಚ್ಛತಾ ಕೆಲಸ ಭರದಿಂದ ನಡೆಯುತ್ತಿದೆ.
ವರದಿ : ಜಿಲಾನಸಾಬ್ ಬಡಿಗೇರ್




















