ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಂಪ್ಲಿ ಗತ ವೈಭವ ರಾಜ್ಯಕ್ಕೆ ಸಾರುವ ನಿಟ್ಟಿನಲ್ಲಿ ಫೆ.11 ಮತ್ತು 12ರಂದು ಕಂಪ್ಲಿ ಉತ್ಸವ : ಶಾಸಕ ಜೆ. ಎನ್. ಗಣೇಶ್

ಬಳ್ಳಾರಿ / ಕಂಪ್ಲಿ: ಕಲೆ, ಸಾಹಿತ್ಯ, ಸಂಸ್ಕೃತಿ, ಆಚಾರ ವಿಚಾರದೊಂದಿಗೆ ಕಂಪ್ಲಿ ಸಾಮ್ರಾಜ್ಯದ ಗತ ವೈಭವವನ್ನು ರಾಜ್ಯಕ್ಕೆ ಸಾರುವ ನಿಟ್ಟಿನಲ್ಲಿ ಫೆ.11 ಮತ್ತು 12ರಂದು ಎರಡು ದಿನ ಕಂಪ್ಲಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ ತಿಳಿಸಿದರು.
ಅವರು ಗುರುವಾರ ಪಟ್ಟಣದ ಪುರಸಭೆ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಂಪಿ ಉತ್ಸವದಂತೆ ಕಂಪ್ಲಿ ಉತ್ಸವ ಮಾಡಲಾಗುವುದು. ಎರಡನೇ ಬಾರಿಗೆ ಕಂಪ್ಲಿ ಉತ್ಸವ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ಕುರುಗೋಡು ಉತ್ಸವವನ್ನು ಫೆ.15 ಮತ್ತು 16ರಂದು ಹಮ್ಮಿಕೊಂಡಿದೆ. ಕಂಪ್ಲಿ ಮತ್ತು ಕುರುಗೋಡು ಉತ್ಸವಕ್ಕೆ ಸರ್ಕಾರ ತಲಾ ಒಂದೊಂದು ಕೋಟಿ ಅನುದಾನ ನೀಡಿದೆ. ತಾಲೂಕಿನ ಪ್ರತಿ ಹಳ್ಳಿಗಳಲ್ಲಿ ಉತ್ಸವದ ಜಾಥಾ ಮಾಡಲಾಗುವುದು. ಮತ್ತು ಪ್ರತಿಯೊಂದು ಅಭಿವೃದ್ಧಿ ಕಾರ್ಯದ ಜಾಗೃತಿಯನ್ನು ಸಹ ವಾಹನದ ಮೂಲಕ ಜನರಲ್ಲಿ ಮನದಟ್ಟು ಮಾಡಲಾಗುವುದು. ಎಲ್ಲಾ ಇಲಾಖೆಯ ಕೃಷಿಕ ಮತ್ತು ವಸ್ತು ಪ್ರದರ್ಶನ ಮಾಡುವ ಜೊತೆಗೆ ಮಳಿಗೆ ವ್ಯವಸ್ಥೆ ಮಾಡಲಾಗುವುದು. ಕಂಪ್ಲಿ ಉತ್ಸವದ ಯಶಸ್ವಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸ್ಥಳೀಯ ಹಿರಿಯರ, ಸಂಘ-ಸಂಸ್ಥೆಯವರೊಂದಿಗೆ ಪಕ್ಷತೀತವಾಗಿ ಉತ್ಸವ ಮಾಡಲಾಗುವುದು. ಸಿಂಗರ್ ಸಂಜೀತ್ ಹೆಗ್ಡೆ, ಚಂದನ್ ಶೆಟ್ಟಿ ಸೇರಿದಂತೆ ಇತರರು ಉತ್ಸವಕ್ಕೆ ಮೆರಗು ನೀಡಲಿದ್ದಾರೆ.
ಸ್ವಚ್ಚತೆಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು. ಶುಕ್ರವಾರದಂದು ಕಂಪ್ಲಿಯಲ್ಲಿಯೇ ಉತ್ಸವದ ಲೋಗೋ(ಚಿಹ್ನೆ) ಬಿಡುಗಡೆ ಮಾಡಲಾಗುವುದು. ಫೆ.11ರಂದು ಕಂಪ್ಲಿಯಲ್ಲಿ ವಿವಿಧ ಕಲಾ ಪ್ರಕಾರಗಳೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ನಡೆಸಿ, ಐತಿಹಾಸಿಕ ಸೋಮಪ್ಪ ಕೆರೆಯಲ್ಲಿ ವಾರಣಾಸಿ ಮಾದರಿಯಲ್ಲಿ ಕಲಾರತಿ ಮಾಡಲಾಗುವುದು. ನಂತರ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಸಂಜೆ ವೇದಿಕೆ ಕಾರ್ಯಕ್ರಮದೊಂದಿಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅನುಕೂಲ ಮಾಡಿಕೊಡಲಾಗುವುದು. ಫೆ.12ರಂದು ಮಾನ್ಯ ಜಿಲ್ಲಾ ಸಚಿವರು ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸಿಎಂ ಅವರನ್ನು ಸಹ ಆಹ್ವಾನಿಸಿದೆ. ನಂತರದ ವೇದಿಕೆಯಲ್ಲಿ ಸಂಜೀತ್ ಹೆಗ್ಡೆ, ಚಂದನ್ ಶೆಟ್ಟಿ ಮತ್ತು ಇತರೆ ಕಲಾವಿದರು ಜನರನ್ನು ಸಂಗೀತದ ಲೋಕಕ್ಕೆ ಕೊಂಡೊಯ್ಯಲಿದ್ದಾರೆ. ಕಂಪ್ಲಿ ಉತ್ಸವ ಜನರ ಉತ್ಸವವಾಗಿದೆ. ಪ್ರತಿ ವರ್ಷ ಕಂಪ್ಲಿ ಮತ್ತು ಕುರುಗೋಡು ಉತ್ಸವವನ್ನು ಶಾಶ್ವತವಾಗಿ ಮಾಡಲು ಬಜೆಟ್‌ನಲ್ಲಿ ಅನುದಾನ ಮೀಸಲಿರಿಸುವಂತೆ ರಾಜ್ಯದ ಸಿಎಂ, ಡಿ.ಸಿ.ಎಂ, ಸಚಿವರ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಪುರಸಭೆ ಮಾಜಿ ಅಧ್ಯಕ್ಷ ಭಟ್ಟ ಪ್ರಸಾದ್, ಮಾಜಿ ಸದಸ್ಯ ಕೆ.ಎಸ್.ಚಾಂದ್ ಭಾಷಾ, ಮುಖಂಡರಾದ ಬಿ.ನಾರಾಯಣಪ್ಪ, ಕರೇಕಲ್ ಮನೋಹರ, ಎಸ್.ಎಸ್.ಎಂ.ಚನ್ನಯ್ಯಸ್ವಾಮಿ, ವಿ.ಸತ್ಯಪ್ಪ, ಬಿ.ಸಿದ್ದಪ್ಪ, ಶಿವಪುತ್ರಪ್ಪ ಹೊನ್ನಳ್ಳಿ, ಮಾದನೂರು ಮಹೇಶ, ಅಕ್ಕಿ ಜಿಲಾನ್, ರಾಜಾಭಕ್ಷಿ ಸೇರಿದಂತೆ ಮುಖಂಡರು, ಕಾರ್ಯಕರ್ತರು ಇದ್ದರು

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!