
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕ್ಯಾಮೇನಹಳ್ಳಿ ಇತಿಹಾಸ ಪ್ರಸಿದ್ಧ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ಹೊಳವನಹಳ್ಳಿ ಪ್ರೌಢಶಾಲೆಗೆ ಭೇಟಿ ನೀಡಿ ಮತಯಾಚನೆ ಮಾಡಿ ಮಾತನಾಡಿ
ನನ್ನ ಗೆಲುವನ್ನು ನಿರೀಕ್ಷಿಸುತ್ತಿರುವ ಪ್ರತಿಯೊಬ್ಬರೂ ಅಭ್ಯರ್ಥಿಗಳೇ, ನಿಮ್ಮ ಗೆಲುವೇ ನನ್ನ ಗೆಲುವು ಎಂದು ನಾನು ಭಾವಿಸುತ್ತೇನೆ ಈ ಪದವೀಧರರ ಚುನಾವಣೆಯಲ್ಲಿ ನನ್ನ ಕೈ ಬಲಪಡಿಸಿ ಎಂಬ ನಿವೇದನೆ ನನ್ನದು. ಎಂತದ್ದೇ ಸಂದರ್ಭ ಒದಗಿ ಬಂದರೂ ನಿಮ್ಮೊಂದಿಗಿರಲಿದ್ದೇನೆ ಎಂಬುದನ್ನು ಪ್ರಮಾಣೀಕರಿಸುತ್ತೇನೆ. ನಾನು ಚುನಾವಣಾ ರಾಜಕೀಯ ಆರಂಭ ಕಾಲದಲ್ಲಿದ್ದೇನೆ. ಈ ಹೆಜ್ಜೆ ನಮ್ಮೆಲ್ಲರ ಪರವಾದ ಹೆಜ್ಜೆ, ಅಖಂಡ ಪದವೀಧರರ ಹೆಜ್ಜೆ, ಅಂಬೇಡ್ಕರ್, ಬಸವಣ್ಣ, ಕುವೆಂಪು ಅವರ ಆಶಯದಂತೆ ಸರ್ವಜನಾಂಗದ ಶಾಂತಿಯ ತೋಟ ನಿರ್ಮಿಸೋಣ ಎಂದು ಹೇಳಿದರು.
ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ಮಾತನಾಡಿ ಪ್ರಪ್ರಥಮವಾಗಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಶಿ ಹುಲಿಕುಂಟೆ ಮಠ್ ರವರನ್ನು ಡಾ. ಜಿ ಪರಮೇಶ್ವರ್ ರವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಯುವಕರಿಗೆ ಸ್ಪೂರ್ತಿದಾಯಕವಾಗಲಿ ಎಂದು ಪದವೀಧರರು ಮತ್ತು ಶಿಕ್ಷಕರ ಧ್ವನಿಯಾಗಿ ಕಾರ್ಯ ಮಾಡುವ ಅಭ್ಯರ್ಥಿಯನ್ನು ಅವರ ಆದೇಶದಂತೆ ಅಗ್ನೇಯ ಕ್ಷೇತ್ರಕ್ಕೆ ಪ್ರಕಟಿಸಿಲಾಗಿದೆ. ಡಾಕ್ಟರ್ ಜಿ. ಪರಮೇಶ್ವರ್ ಆದರ್ಶ ದಂತೆ ನಾವು ನಮ್ಮ ಕಾರ್ಯಕರ್ತರು ಒಗ್ಗಟ್ಟಿನಿಂದ ಅಭ್ಯರ್ಥಿಯನ್ನು ಜಯಶೀಲರನ್ನಾಗಿ ಮಾಡಿ ಪದವೀಧರರು ಶಿಕ್ಷಕರು ಮತ್ತು ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಿ ಉತ್ತಮ ಕಾರ್ಯಗಳನ್ನು ಮಾಡಲು ಅವಕಾಶ ನೀಡಿ ಎಂದರು ಈ ಸಂದರ್ಭದಲ್ಲಿ ಕೊಡ್ಲಹಳ್ಳಿ ಅಶ್ವಥ್ ನಾರಾಯಣ್,ಅರಕೆರೆ ಶಂಕರ್, ಯೂಥ್ ಕಾಂಗ್ರೆಸ್ ಅಧ್ಯಕ್ಷ ಬೈರೇಶ್, ರವಿಕುಮಾರ್, ಸಂದೀಪ್ ಕೋಕಿಲ, ಕಾರ್ಯದರ್ಶಿ ಕವಿತಮ್ಮ, ಮಂಜುಳಾ ಆರಾಧ್ಯ, ಕಾಳಿ ಚರಣ್, ದೊಡ್ಡಯ್ಯ,ಜಯರಾಮ್, ಉಮೇಶ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಪ್ರಸನ್ನ ಕುಮಾರ್ ಎಸ್, ಕೊರಟಗೆರೆ



















